ಐಪಿಎಲ್‌ 2021: ಸಿಎಸ್‌ಕೆ ತಂಡದಿಂದ ಸ್ಟಾರ್‌ ಆಟಗಾರನಿಗೆ ಗೇಟ್‌ಪಾಸ್‌..!

First Published Jan 18, 2021, 1:15 PM IST

ನವದೆಹಲಿ: 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿದ್ದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ತಂಡದಲ್ಲಿ ಮೇಜರ್‌ ಸರ್ಜರಿ ಸರ್ಜರಿಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರನಿಗೆ ಗೇಟ್‌ಪಾಸ್‌ ನೀಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 13ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿತ್ತು.
undefined
ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
undefined
ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್‌ಕೆ ಪಾಳಯದಲ್ಲಿ ಮೇಜರ್‌ ಸರ್ಜರಿ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.
undefined
2021ರ ಐಪಿಎಲ್‌ ಟೂರ್ನಿಗೆ ಸುರೇಶ್‌ ರೈನಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
undefined
ಸುರೇಶ್ ರೈನಾ ಲಯದ ಸಮಸ್ಯೆ ಎದುರಿಸುತ್ತಿರುವುದರಿಂದ ಅವರನ್ನು ಕೈಬಿಡಲು ತಂಡ ನಿರ್ಧರಿಸಬಹುದು ಎನ್ನಲಾಗಿದೆ. ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಿಂದ ರೈನಾ ಕೇವಲ 90 ರನ್‌ ಗಳಿಸಿದ್ದಾರೆ.
undefined
ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.
undefined
2018ರ ಐಪಿಎಲ್‌ ಆಟಗಾರರ ಹರಾಜಿನ ನಿಯಮದಂತೆ ಮೊದಲು ರೀಟೈನ್‌ ಮಾಡಿಕೊಂಡ ಆಟಗಾರ ಎಂ ಎಸ್‌. ಧೋನಿ(15 ಕೋಟಿ ರುಪಾಯಿ), ಎರಡನೇ ರೀಟೈನ್ ಆಟಗಾರ ಸುರೇಶ್ ರೈನಾ(11 ಕೋಟಿ) ಹಾಗೂ ಮೂರನೇ ರೀಟೈನ್ ಆಟಗಾರ ರವೀಂದ್ರ ಜಡೇಜಾಗೆ(7 ಕೋಟಿ) ರುಪಾಯಿ ನೀಡಿತ್ತು.
undefined
ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಿಎಸ್‌ಕೆ ತಂಡಕ್ಕೆ ಹಣದ ಅಭಾವವಿದೆ. ಯಾವ ಆಟಗಾರರನ್ನು ಸಿಎಸ್‌ಕೆ ಕೈಬಿಡದೇ ಇದ್ದರೆ ತಂಡದ ಬಳಿ ಕೇವಲ 15 ಲಕ್ಷ ರುಪಾಯಿ ಬಾಕಿ ಉಳಿಯಲಿದೆ.
undefined
ಹೀಗಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡಲು ಸಿಎಸ್‌ಕೆ ಚಿಂತನೆ ನಡೆಸುತ್ತಿದೆ. ರೈನಾ ಕೈಬಿಟ್ಟರೆ ತಂಡಕ್ಕೆ 11 ಕೋಟಿ ರು. ಉಳಿಯಲಿದೆ.
undefined
ಸುರೇಶ್ ರೈನಾ ಜತೆಗೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಕೇದಾರ್‌ ಜಾದವ್‌ಗೂ ತಂಡದಿಂದ ಗೇಟ್‌ಪಾಸ್‌ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
undefined
click me!