ಇದುವರೆಗಿನ ಭವಿಷ್ಯ ನಿಜವಾದ ಬೆನ್ನಲ್ಲೇ ಫೈನಲ್ ಪಂದ್ಯ ವಿನ್ನರ್ ಪ್ರಿಡಿಕ್ಟ್ ಮಾಡಿದ ಚಹಾಲ್ ಗೆಳತಿ

Published : Jun 03, 2025, 05:49 PM IST

ಯಜುವೇಂದ್ರ ಚಹಾಲ್ ಗೆಳತಿ ಆರ್‌ಜೆ ಮಹ್ವಾಶ್ ಇದುವರೆಗೆ ಐಪಿಎಲ್ ವಿನ್ನರ್ ಕುರಿತು ಹೇಳಿದ ಭವಿಷ್ಯ ನಿಜವಾಗಿದೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಮುಖಾಮುಖಿಯಾಗಲಿದೆ ಎಂದಿದ್ದ ಭವಿಷ್ಯ ಕೂಡ ನಿಜವಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲಲಿದ್ದಾರೆ ಅನ್ನೋ ಭವಿಷ್ಯ ನುಡಿದಿದ್ದಾರೆ.

PREV
16

ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾರಿಗೆ ಗೆಲುವು? ಯಾರು ಟ್ರೋಫಿ ಗೆಲ್ಲುತ್ತಾರೆ? ಎರಡೂ ತಂಡದ ಅಭಿಮಾನಿಗಳು ತಮ್ಮ ತಮ್ಮ ತಂಡ ಗೆಲ್ಲಲಿ ಎಂದು ಪೂಜೆ, ಪಾರ್ಥನೆ ಸಲ್ಲಿಸುತ್ತಿದ್ದಾರೆ. ಎಲ್ಲೆಡೆ ಆರ್‌ಸಿಬಿ ಹವಾ ಜೋರಾಗಿದೆ. ಇದೀಗ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಗೆಳತಿ ಆರ್‌ಜೆ ಮಹ್ವಾಶ್ ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ. ಮಹ್ವಾಶ್ ಹೇಳಿದ ಇದುವರಿಗಿನ ಐಪಿಎಲ್ ಭವಿಷ್ಯ ನಿಜವಾದ ಬೆನ್ನಲ್ಲೇ ಫೈನಲ್ ಪಂದ್ಯಕ್ಕೂ ಭವಿಷ್ಯ ಹೇಳಿದ್ದಾರೆ.

26

ಆರ್‌ಜೆ ಮಹ್ವಾಶ್ ಪ್ಲೇ ಆಫ್ ಹಂತದ 2ನೇ ಕ್ವಾಲಿಫೈಯರ್ ಪಂದ್ಯಕ್ಕೂ ಮೊದಲೇ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಹಾಗೂ ಆರ್‌ಸಿಬಿ ಮುಖಾಮುಖಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದರಂತೆ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಜೆ ಮಹ್ವಾಶ್ ನುಡಿದ ಭವಿಷ್ಯವೇನು?

36

ಮಹ್ವಾಶ್ ಫೈನಲ್ ಪ್ರಿಡಿಕ್ಷನ್

ಪ್ಲೇ ಆಫ್, ಕ್ವಾಲಿಫೈಯರ್ ಸೇರದಂತೆ ಪ್ರಮುಖ ಪಂದ್ಯಗಳಿಗೆ ಭವಿಷ್ಯ ನುಡಿದ ಆರ್‌ಜೆ ಮಹ್ವಾಶ್ ಇದೀಗ ಫೈನಲ್ ಪಂದ್ಯಕ್ಕೆ ಒಂದೇ ಮಾತಿನಲ್ಲಿ ಮಾರ್ಮಿಕವಾಗಿ ಭವಿಷ್ಯ ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಫ್ಲ್ಯಾಗ್ ಹಿಡಿದು ಕೇವಲ ಒಂದು ಹೆಜ್ಜೆ ಎಂದಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯದ ಜೊತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

46

ಆರ್‌ಜೆ ಮಹ್ವಾಶ್ ಆಪ್ತ ಗೆಳೆಯ ಯಜುವೇಂದ್ರ ಚಹಾಲ್, ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್. ಐಪಿಎಲ್ 2025 ಟೂರ್ನಿಯಲ್ಲಿ ಆರ್‌ಜೆ ಮಹ್ವಾಶ್ ಕಿಂಗ್ಸ್ ಪಂಜಾಬ್ ತಂಡಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಬಹುತೇಕ ಪಂದ್ಯಗಳನ್ನು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸಿದ್ದಾರೆ. ಜೊತೆಗೆ ಪಂಜಾಬ್ ಕಿಂಗ್ಸ್ ಜರ್ಸಿ ಧರಿಸಿ ತಂಡವನ್ನು ಹಾಗೂ ಚಹಾಲ್‌ನನ್ನು ಹುರಿ ದುಂಬಿಸಿದ್ದಾರೆ.

56

ಮಹ್ವಾಶ್ ಭವಿಷ್ಯ ಉಲ್ಟಾ ಎಂದ ಆರ್‌ಸಿಬಿ ಫ್ಯಾನ್ಸ್

ಇದುವರೆಗೆ ಆರ್‌ಜೆ ಮಹ್ವಾಶ್ ನುಡಿದ ಭವಿಷ್ಯ ನಿಜವಾಗಿರಬಹುದು. ಆದರೆ ಇದು ಫೈನಲ್. ಎದುರಾಳಿ ಆರ್‌ಸಿಬಿ. ಹೀಗಾಗಿ ಆರ್‌ಜೆ ಮಹ್ವಾಶ್ ನುಡಿದ ಫೈನಲ್ ಭವಿಷ್ಯ ಉಲ್ಟಾ ಆಗಲಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಹೇಳಿದ್ದಾರೆ. ಆರ್‌ಸಿಬಿ ಯಾವುದೇ ಅಡ್ಡಿ ಆತಂಕವಿಲ್ಲದೆ ಪ್ರಶಸ್ತಿ ಗೆಲ್ಲಲಿದೆ ಎಂದಿದ್ದಾರೆ.

66

ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಮಳೆ ಭೀತಿ ಇರುವ ಕಾರಣ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. 2ನೇ ಕ್ವಾಲಿಫೈಯರ್ ಪಂದ್ಯ ಕೂಡ ಮಳೆಯಿಂದ ವಿಳಂಬವಾಗಿತ್ತು. ಇದೀಗ ಕುತೂಹಲ ಹೆಚ್ಚಾಗಿದೆ. ಯಾರಿಗೆ ಪ್ರಶಸ್ತಿ ಅನ್ನೋದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

Read more Photos on
click me!

Recommended Stories