14ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
(photo source- iplt20.com)
13ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ಗೇರುವಲ್ಲಿ ವಿಫಲವಾಗಿದ್ದ ಸಿಎಸ್‌ಕೆ ತಂಡವು, ಕೇವಲ ಒಂದೇ ವರ್ಷದ ಅಂತರದಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ
ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ ಚೆನ್ನೈ ಪರ ಆಡುವುದನ್ನು ತಂಡದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು, ‘ಮುಂದಿನ ಮೆಗಾ ಹರಾಜಿನಲ್ಲಿ ಚೆನ್ನೈ ತಂಡ ಮೊದಲ ರಿಟೆನ್ಶನ್ ಕಾರ್ಡನ್ನು ಧೋನಿಯನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಳಸಲಿದೆ ಎಂದಿದ್ದಾರೆ
ರಿಟೆನ್ಶನ್ ಮೂಲಕ ಎಷ್ಟು ಮಂದಿಯನ್ನು ಉಳಿಸಿಕೊಳ್ಳಬಹುದು ಎಂಬುದು ತಿಳಿದಿಲ್ಲ. ಆದರೆ ಮೊದಲ ಕಾರ್ಡನ್ನು ನಾವು ಧೋನಿಗಾಗಿಯೇ ಬಳಸಲಿದ್ದೇವೆ. ಹಡಗಿಗೆ ಅದರ ಕ್ಯಾಪ್ಟನ್ ಅಗತ್ಯವಿದೆ ಹಾಗೂ ಧೋನಿ ಅವರಿಗಿಂತಹ ಶ್ರೇಷ್ಠ ಕ್ಯಾಪ್ಟನ್ ಇನ್ನೊಬ್ಬರಿಲ್ಲ’ ಎಂದಿದ್ದಾರೆ.
ಇತ್ತೀಚೆಗಷ್ಟೇ ‘ಚೆನ್ನೈನಲ್ಲಿ ಕೊನೆಯ ಐಪಿಎಲ್ ಪಂದ್ಯ ಆಡುತ್ತೇನೆ’ ಎಂದಿದ್ದ ಧೋನಿ, ಬಳಿಕ ಚೆನ್ನೈ ಪರ ಆಡುತ್ತೇನೋ ಇಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. 2 ಹೊಸ ತಂಡಗಳು ಬರಲಿರುವುದಿರಂದ ಹಲವು ಬದಲಾವಣೆಗಳು ನಡೆಯಲಿವೆ’ ಎಂದಿದ್ದರು.
(photo source- iplt20.com)
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಿರುವ 8 ತಂಡಗಳ ಜತೆಗೆ ಇನ್ನೆರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಅಕ್ಟೋಬರ್ 25ರಂದು ಬಿಡ್ಡಿಂಗ್ ನಡೆಯಲಿದ್ದು, ಅಂದೇ ಹೊಸ 2 ತಂಡಗಳ ಹೆಸರು ಘೋಷಣೆಯಾಗಲಿದೆ.