ಮಡದಿ ಮಗನ ಜೊತೆ ಇರ್ಫಾನ್ ಪಠಾಣ್ ಮಸ್ತಿ, ಹೆಂಡ್ತಿ ಬುರ್ಖಾ ಹಾಕದ್ದಕ್ಕೆ ನೆಟ್ಟಿಗರ ತರಾಟೆ..!

Published : May 12, 2024, 11:30 AM IST

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಇರ್ಫಾನ್ ಪಠಾಣ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮಡಿದ ಹಾಗೂ ಮಗನ ಜತೆ ಕೆಫೆಯೊಂದಕ್ಕೆ ಭೇಟಿ ನೀಡಿದಾಗ ಪಠಾಣ್ ಪತ್ನಿ ಬುರ್ಖಾ  ಹಾಕದಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.  

PREV
18
ಮಡದಿ ಮಗನ ಜೊತೆ ಇರ್ಫಾನ್ ಪಠಾಣ್ ಮಸ್ತಿ, ಹೆಂಡ್ತಿ ಬುರ್ಖಾ ಹಾಕದ್ದಕ್ಕೆ ನೆಟ್ಟಿಗರ ತರಾಟೆ..!

ಟೀಂ ಇಂಡಿಯಾದ ಯಶಸ್ವಿ ಆಲ್ರೌಂಡರ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕರಾಗಿ ಗುರುತಿಸಿಕೊಂಡಿರುವ ಇರ್ಫಾನ್ ಪಠಾಣ್ ತಮ್ಮ ಮಗ ಹಾಗೂ ಮಡದಿ ಸಫಾ ಬೇಗ್ ಜತೆ ಮುಂಬೈನ ಬಾಂದ್ರಾದಲ್ಲಿನ ಕೆಫೆಗೆ ಭೇಟಿ ನೀಡಿದ್ದಾರೆ.

28

ಇರ್ಫಾನ್ ಪಠಾಣ್ ಕಪ್ಪು ಶರ್ಟ್ ಹಾಗೂ ಗುಲಾಬಿ ಬಣ್ಣದ  ಪ್ಯಾಂಟ್ ಧರಿಸಿದ್ದರೆ, ಪಠಾಣ್ ಪತ್ನಿ ಸಫಾ ಬೇಗ್ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಸಫಾ ಬೇಗ್ ಸಾಮಾನ್ಯ ಡ್ರೆಸ್‌ನಲ್ಲಿಯೇ ಕಾಣಿಸಿಕೊಂಡಿದ್ದರು.

38

ಇನ್ನು ಇರ್ಫಾನ್ ಪಠಾಣ್ ಅವರನ್ನು ಕಾಣುತ್ತಿದ್ದಂತೆಯೇ ಅಭಿಮಾನಿಗಳು ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆಗ ಸಫಾ ಬೇಗ್ ತಕ್ಷಣವೇ ಫೋಟೋ ಹಾಗೂ ವಿಡಿಯೋ ತೆಗೆಯುವವರಿಂದ ದೂರ ಸರಿದಿದ್ದಾರೆ.

48

ಪಠಾಣ್ ಪತ್ನಿ ಸಫಾ ಬೇಗ್ ಬುರ್ಖಾ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದು ಕೆಲವು ಮೂಲಭೂತವಾದಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪಠಾಣ್ ದಂಪತಿಗಳ ಮೇಲೆ ಕಿಡಿ ಕಾರಿದ್ದಾರೆ.

58

ಓರ್ವ ನೆಟ್ಟಿಗ ಈಕೆಯ ಬುರ್ಖಾ ಯಾಕೆ ತೆಗಿಸಿದೆ ಎಂದು ಪ್ರಶ್ನಿಸಿದ್ದಾರೆ. ನಕಾಬ್ ಹೋಯ್ತು ಈಗ ಬುರ್ಖಾವನ್ನು ತೆಗಿಸಿದ್ದೀಯ. ನಿಮ್ಮ ಮೇಲಿನ ನಂಬಿಕೆ ನನಗಿನ್ನು ಉಳಿದಿಲ್ಲ. ಇದು ಬೇಜಾರ್ ಆಯ್ತು ಎಂದು ಮತ್ತೋರ್ವ ನೆಟ್ಟಿಗ ಅಸಮಾಧಾನ ಹೊರಹಾಕಿದ್ದಾನೆ.

68

ಇನ್ನು ಮತ್ತೋರ್ವ ನೆಟ್ಟಿಗ ಬಡತನ ಪುರುಷನನ್ನು ಹಾಗೂ ಸಿರಿತನ ಮಹಿಳೆಯನ್ನು ಬೆತ್ತಲೆ ಮಾಡುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಠಾಣ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

78

ಇನ್ನು ಕೆಲವರು ಇರ್ಫಾನ್ ಪಠಾಣ್ ಬೆಂಬಲಕ್ಕೆ ನಿಂತಿದ್ದು, ಪಠಾಣ್ ಪತ್ನಿ ಸಾಮಾನ್ಯ ಡ್ರೆಸ್ ಹಾಕಿಕೊಂಡಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಅವರ ಮೇಲೆ ಕಿಡಿಕಾರುತ್ತಿದ್ದಾರೆ. ಇದು ಸರಿಯಲ್ಲ ಎಂದಿದ್ದಾರೆ.

88

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಇತ್ತೀಚೆಗಷ್ಟೇ ತಮ್ಮ 8ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ಮೊದಲ ಬಾರಿಗೆ ಪತ್ನಿಯ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ಅನಾವರಣ ಮಾಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories