Boxing Day Test ಸೆಂಚೂರಿಯನ್‌ನಲ್ಲಿ ಶತಕ ಚಚ್ಚಿದ ರಾಹುಲ್; ತೆಂಡುಲ್ಕರ್ ಸಾಲಿಗೆ ಸೇರಿದ ಕನ್ನಡಿಗ

Published : Dec 27, 2023, 03:41 PM IST

ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಭಾರತದ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದ ಪಿಚ್‌ನಲ್ಲಿ ರಾಹುಲ್ ಸಮಯೋಚಿತ ಶತಕ ಸಿಡಿಸಿದ್ದಾರೆ. ಈ ಶತಕದಿಂದ ಹಲವು ದಾಖಲೆಗಳು ನಿರ್ಮಾಣವಾಗಿವೆ.  

PREV
15
Boxing Day Test ಸೆಂಚೂರಿಯನ್‌ನಲ್ಲಿ ಶತಕ ಚಚ್ಚಿದ ರಾಹುಲ್; ತೆಂಡುಲ್ಕರ್ ಸಾಲಿಗೆ ಸೇರಿದ ಕನ್ನಡಿಗ

ಕನ್ನಡಿಗ ಕೆ ಎಲ್ ರಾಹುಲ್, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ 133 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 8ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ರಾಹುಲ್ ಅವರ ಈ ಸೊಗಸಾದ ಇನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿವೆ.
 

25

ಒಂದು ಹಂತದಲ್ಲಿ 107 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿದ ರಾಹುಲ್, ಬಲಾಢ್ಯ ಹರಿಣಗಳ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸುವ ಮೂಲಕ ಶತಕ ಸಿಡಿಸಿ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾದರು.
 

35

ಹೌದು, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಅಜಿಂಕ್ಯ ರಹಾನೆ ತಲಾ ಎರಡು ಬಾರಿ ಶತಕ ಸಿಡಿಸಿದ್ದರು. ಇದೀಗ ಆ ಎಲೈಟ್ ಕ್ಲಬ್‌ಗೆ ಕನ್ನಡಿಗ ಕೆ ಎಲ್ ರಾಹುಲ್ ಸೇರ್ಪಡೆಯಾಗಿದ್ದಾರೆ. 

45

ಈ ಮೊದಲು ರಾಹುಲ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದವೇ ಆಕರ್ಷಕ 123 ರನ್ ಬಾರಿಸಿದ್ದರು. ಇದೀಗ ಹರಿಣಗಳ ಎದುರು ರಾಹುಲ್ ಮತ್ತೊಮ್ಮೆ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

55

ಇನ್ನು ಸೆಂಚೂರಿಯನ್‌ನಲ್ಲಿ ಎರಡು ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ. ಸೆಂಚೂರಿಯನ್‌ನಲ್ಲಿ ಕೆ ಎಲ್ ರಾಹುಲ್ ಹೊರತುಪಡಿಸಿ ಉಳಿದ್ಯಾವ ವಿದೇಶಿ ಬ್ಯಾಟರ್‌ ಟೆಸ್ಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ.

Read more Photos on
click me!

Recommended Stories