ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್ ಗಂಭೀರ್!

First Published Jan 21, 2021, 9:03 PM IST

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಸಂಗ್ರಹ ಆರಂಭಗೊಂಡಿದೆ. ಮೂರೇ ದಿನದಲ್ಲಿ ಭಕ್ತರು 100 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ದೇಣಿಕೆ ಸಂಗ್ರಹಿಸಲಾಗಿದೆ. ಇದೀಗ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 1 ಕೋಟಿ ರೂಪಾಯಿ ನೀಡಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
undefined
ರಾಮ ಮಂದಿರ ನಿರ್ಮಾಣ ಶತ ಶತಮಾನಗಳ ಕನಸಾಗಿದೆ. ಇದೀಗ ಈ ಕನಸು ಸಾಕಾರಗೊಳ್ಳುತ್ತಿದೆ. ಇದು ಭಾರತೀಯರಿಗೆ ಸಂತಸ ಹಾಗೂ ಸಂಭ್ರಮದ ಕ್ಷಣವಾಗಿದೆ ಎಂದು ಗಂಭೀರ್ ಹೇಳಿದ್ದಾರೆ.
undefined
ರಾಮ ಮಂದಿರ ನಿರ್ಮಾಣ ಎಲ್ಲಾ ಭಾರತೀಯರಂತೆ ನನ್ನ ಕಸು ಕೂಡ ಆಗಿತ್ತು. ಇದೀಗ ವಿವಾದ ಬಗೆ ಹರಿದು ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಇದಕ್ಕಾಗಿ ನನ್ನ ಕುಟುಂದ ಸಣ್ಣ ಸಹಾಯ ಎಂದು ಗಂಭೀರ್ ಹೇಳಿದ್ದಾರೆ.
undefined
ಜನವರಿ 14 ರಿಂದ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ಆರಂಭಗೊಂಡಿದೆ. ಸಂಕ್ರಾಂತಿಯಂದು ದೇಣಿಗೆ ಸಂಗ್ರಹಕ್ಕೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಚಾಲನೆ ನೀಡಿದೆ.
undefined
ಫೆಬ್ರವರಿ 27ರ ವೆರೆಗೆ ದೇಶದ ಹಳ್ಳಿ ಹಳಿಗೂ ಕಾರ್ಯಕರ್ತರು ತೆರಳಿ ದೇಣಿಗೆ ಸಂಗ್ರಹ ಮಾಡಲಿದ್ದಾರೆ. ಆರಂಭಿಕ ಮೂರು ದಿನದಲ್ಲಿ 100 ಕೋಟಿ ರೂಪಾಯಿ ದೇಣಿಗೆ ಸಂಗ್ರವಾಗಿದೆ.
undefined
ರಾಮ ಮಂದಿರ ನಿರ್ಮಾಣಕ್ಕೆ 300 ರಿಂದ 400 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಇನ್ನು ರಾಮ ಮಂದಿರ ಸೇರಿದಂತೆ ಒಟ್ಟು ಸಂಕೀರ್ಣಕ್ಕೆ 1,100 ರೂಪಾಯಿ ವೆಚ್ಚವಾಗಲಿದೆ.
undefined
5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾರತದ ಹಳ್ಳಿ ಹಳ್ಳಿಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಿದ್ದಾರೆ. ಭಕ್ತರ ದೇಣಿಗೆಯಿಂದಲೇ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
undefined
ರಾಷ್ಟ್ರಪ್ರತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸದಾ ರಾಮ ಮಂದಿರ ಹಾಗೂ ರಾಮ ಜನ್ಮ ಭೂವಿ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
undefined
click me!