ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಗುಜರಾತ್ ಎದುರಾಳಿ, WPL ವೇಳಾಪಟ್ಟಿ ಪ್ರಕಟಿಸಿ ಬಿಸಿಸಿಐ

First Published | Jan 16, 2025, 10:00 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ದ ಹೋರಾಟ ನಡೆಸಲಿದೆ. ಫೆಬ್ರವರಿ 14ರಿಂದ  WPL 2025 ಟೂರ್ನಿ ಆರಂಭಗೊಳ್ಳುತ್ತಿದೆ. ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್ ಟೂರ್ನಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ WPL ವೇಳಾಪಟ್ಟಿ ಪ್ರಕಟಗೊಂಡಿದೆ. ಹಲವು ಸುತ್ತಿನ ಚರ್ಚೆ ಬಳಿಕ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ. ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಗುಜರಾತ್ ವಿರುದ್ ಹೋರಾಟ ನಡೆಸಲಿದೆ. 

2025ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಫೆಬ್ರವರಿ 14ರಿಂದ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಬೆಂಗಳೂರು ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಆತಿಥ್ಯವಹಿಸುತ್ತಿದೆ. ಬೆಂಗಳೂರು ಜೊತೆಗೆ ವಡೋದರ, ಲಖನೌ ಹಾಗೂ ಮುಂಬೈನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗಳು ನಡೆಯಲಿದೆ.

Tap to resize

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಒಟ್ಟು 22 ಪಂದ್ಯಗಳು ಆಯೋಜನೆಗೊಳ್ಳಲಿದೆ. ಉದ್ಘಾಟನಾ ಪಂದ್ಯ ವಡೋದರಲ್ಲಿ ಆಯೋಜಿಸಲಾಗಿದೆ. ಗುಜರಾತ್ ಜೈಂಟ್ಸ್ ವಿರುದ್ದ ಸ್ಮೃತಿ ಮಂಧನಾ ಆರ್‌ಸಿಬಿ ತಂಡ ಹೋರಾಟ ನಡೆಸಲಿದೆ. 2024ರ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿಯೂ ಟ್ರೋಫಿ ಮೇಲೆ ಕಣ್ಮಿಟ್ಟಿದೆ.

ಆರಂಭಿಕ 6 ಪಂದ್ಯಗಳ ಬಳಿಕ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ಬೆಂಗಳೂರಿಗೆ ಶಿಫ್ಟ್ ಆಗಲಿದೆ. ಬೆಂಗಳೂರಿನಲ್ಲಿ 8 ಲೀಗ್ ಪಂದ್ಯಗಳು ನೆಯಲಿದೆ. ಲೀಗ್ ಹಂತದ ಕೊನೆಯ ಪಂದ್ಯ ಮುಂಬೈನಲ್ಲಿ ಮಾರ್ಚ್ 11 ರಂದು ನಡೆಯಲಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸಲಿದೆ.
 

ನಾಕಾಟ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ. ಮಾರ್ಚ್ 13ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಮಾರ್ಚ್ 15 ರಂದು ಮುಂಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳ ಸಮಯ ಬಹಿರಂಗವಾಗಿಲ್ಲ. ವೇಳಾಪಟ್ಟಿಯಲ್ಲಿ ಸಂಜೆ ಎಂದು ಉಲ್ಲೇಖಿಸಲಾಗಿದೆ. ಶೀಘ್ರದಲ್ಲೇ ಸಮಯ ಬಹಿರಂಗವಾಗಲಿದೆ.

ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲ ನಾಲ್ಕು ತಂಡಗಳು ಪಾಲ್ಗೊಳ್ಳುತ್ತಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಜೊತೆ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಪಾಲ್ಗೊಳ್ಳುತ್ತಿದೆ.

Latest Videos

click me!