ಕೊಹ್ಲಿ ಗಂಭೀರ್ ಮಾತನಾಡುತ್ತಿಲ್ಲವೇ? ಸ್ಪಷ್ಟನೆ ವೇಳೆ ಬ್ಯಾಟಿಂಗ್ ಕೋಚ್ ಸಿತಾಂಶು "10 ಬಾರಿ" ಎಂದಿದ್ದೇಕೆ?

Published : Jul 17, 2026, 11:42 AM IST

ಕೊಹ್ಲಿ ಹಾಗೂ ಗಂಭೀರ್ ನಡುವೆ ಮನಸ್ತಾಪ ತೀವ್ರಗೊಂಡಿದೆಯಾ? ಏಕದಿನ ಸರಣಿಗಾಗಿ ಕೊಹ್ಲಿ ತಂಡ ಸೇರಿಕೊಂಡ ಬಳಿಕ ಇಬ್ಬರು ಮಾತನಾಡಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಬ್ಯಾಟಿಂಗ್ ಕೋಚ್ ಸ್ಪಷ್ಟನೆ ನೀಡಿದ್ದು, ಅನುಮಾನಗಳು ಹೆಚ್ಚಾಗಿದೆ.

PREV
16
ಗಂಭೀರ್ ಹಾಗೂ ಕೊಹ್ಲಿ ನಡುವೆ ಮನಸ್ತಾಪ?

ಸೀನಿಯರ್ ಕ್ರಿಕೆಟರ್ಸ್ ಹಾಗೂ ಕೋಚ್ ಗಂಭೀರ್, ಟೀಂ ಇಂಡಿಯಾ ಮ್ಯಾನೇಜ್ಮೆಂಟ್, ಬಿಸಿಸಿಐ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಂದೆಡೆ ರೋಹಿತ್ ಶರ್ಮಾಗೆ ಬಿಸಿಸಿಐ ನಿವೃತ್ತಿ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ನಡುವೆ ಯಾವುದೇ ಮಾತುಕತೆ ಇಲ್ಲ ಎನ್ನಲಾಗುತ್ತಿದೆ. ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಹಲವು ಬಾರಿ ಮನಸ್ತಾಪಗಳಿರುವುದು ಗೊತ್ತೇ ಇದೆ. ಆದರೆ ಈ ಬಾರಿ ಸಮಸ್ಯೆ ಉಲ್ಭಣಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಭಾರತದ ಬ್ಯಾಟಿಂಗ್ ಕೋಚ್ ಸ್ಪಷ್ಟನೆ ನೀಡಿದ್ದಾರೆ.

26
ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟನೆ

ಕೊಹ್ಲಿ ಗಂಭೀರ್ ನಡುವಿನ ಮನಸ್ತಾಪ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿತಾಂಶು ಕೋಟಕ್, ಸೋಶಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಬರುವಂತೆ ಯಾವುದೇ ಸಮಸ್ಯೆಗಳು ಇಲ್ಲ. ಕೊಹ್ಲಿ ಹಾಗೂ ಗಂಭೀರ್ ಇಂದು 10ಕ್ಕೂ ಹೆಚ್ಚು ಬಾರಿ ಮಾತನಾಡಿದ್ದಾರೆ ಎಂದು 2ನೇ ಏಕದಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

36
ತುಂಬಾ ತಲೆಗೆ ತುಂಬಿ ಕದಲು ಸಾಧ್ಯವಿಲ್ಲ

ವಿರಾಟ್ ಕೊಹ್ಲಿ ಟೆಕ್ನಿಕಲಿ ಉತ್ತಮ ಕ್ರಿಕೆಟಿಗ. ಜೊತೆಗೆ ತಮ್ಮ ತಪ್ಪುಗಳನ್ನು ಅರಿತು ಅದಕ್ಕಾಗಿ ಅಭ್ಯಾಸ ಮಾಡುತ್ತಾರೆ. ಇಂಪ್ರೂವ್ ಮಾಡಬೇಕಾದ ಏರಿಯಾ ಕುರಿತು ಚರ್ಚಿಸುತ್ತಾರೆ. ಆದರೆ ಪಂದ್ಯ ಆರಂಭಕ್ಕೂ ಮೊದಲು ನಡೆಯುವ ನೆಟ್ ಅಭ್ಯಾಸದಲ್ಲಿ ಯಾವುದೇ ಕ್ರಿಕೆಟಿಗನ ತಲೆಗೆ ಹೆಚ್ಚು ತುಂಬಿ ಅವರ ಏಕಾಗ್ರತೆ ಕದಡಲು, ಆತ್ಮವಿಶ್ವಾಸ ಧಕ್ಕೆ ಮಾಡುವಂತ ಪ್ರಯತ್ನ ಮಾಡುವುದಿಲ್ಲ ಎಂದು ಕೋಟಕ್ ಹೇಳಿದ್ದಾರೆ.

46
ಕೋಟಕ್ ಜೊತೆ ಮಾತನಾಡಿದ್ದು ಯಾಕೆ?

ವಿರಾಟ್ ಕೊಹ್ಲಿ ತಮ್ಮ ಫೂಟ್‌ವರ್ಕ್ ಕುರಿತು ನನ್ನ ಬಳಿ ಕೇಳಿದ್ದಾರೆ. ಹೀಗಾಗಿ ಕೊಹ್ಲಿಗೆ ಟೆಕ್ನಿಲ್ ವಿಚಾರ ಹೇಳಿದ್ದೆ. ನೆಟ್ಸ್‌ನಲ್ಲಿ ಕ್ರಿಕೆಟಿಗರು ಗಂಭೀರವಾಗಿ ಅಭ್ಯಾಸ ಮಾಡುತ್ತಾರೆ. ಪಂದ್ಯದಲ್ಲಿ ಆಡುವಂತೆ ಗಂಭೀರವಾಗಿರುತ್ತಾರೆ. ಆದರೆ ಈ ಊಹಾಪೋಹ ಯಾಕೆ ಬಂತು ಅನ್ನೋದು ಅರ್ಥವಾಗುತ್ತಿಲ್ಲ. ಈ ರೀತಿಯ ಯಾವುದೇ ಮನಸ್ತಾಪಗಳು ಇಲ್ಲ ಎಂದು ಕೋಟಕ್ ಹೇಳಿದ್ದಾರೆ.

56
ಅನುಮಾನಕ್ಕೆ ಕಾರಣವೇನು?

ನೆಟ್ ಸೆಶನ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವಿಡಿಯೋದಲ್ಲಿ ಕೊಹ್ಲಿ ಹಾಗೂ ಗಂಭೀರ್ ಇಬ್ಬರು ಹತ್ತರದಲ್ಲೇ ಇತ್ತರು ಮುಖ ನೋಡುತ್ತಿಲ್ಲ, ಮಾತನಾಡುತ್ತಿಲ್ಲ. ಇದು ಅನುಮಾನಕ್ಕೆ ಕಾರಣವಾಗಿತ್ತು. ಇದೇ ವೇಳೆ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ಕೊಹ್ಲಿ ಜೊತೆ ಮಾತನಾಡಿದ್ದರು. ಆದರೆ ಗಂಭೀರ್ ಒಂದು ಮಾತು ಆಡಿರಲಿಲ್ಲ. ಈ ವಿಡಿಯೋದಿಂದಲೇ ಅನುಮಾನಗಳು ಹೆಚ್ಚಾಗಿತ್ತು.

66
ಕೊನೆಯ ಪಂದ್ಯದ ಕುತೂಹಲ

ಇಂಗ್ಲೆಡ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಈ ಮೂಲಕ ಪಂದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ. ಆದರೆ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಟಿ20 ಸರಣಿ ಹೀನಾಯವಾಗಿ ಸೋತಿರುವ ಭಾರತ, ಕೊನೆ ಪಕ್ಷ ಏದದಿನ ಸರಣಿ ಗೆದ್ದು ಮಾನ ಉಳಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories