T20 World Cup: Ban vs SL ಬೌಲಿಂಗ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಶಕೀಬ್ ಅಲ್ ಹಸನ್‌..!

First Published | Oct 24, 2021, 6:46 PM IST

ಶಾರ್ಜಾ: 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿ ಭರ್ಜರಿಯಾಗಿಯೇ ಸಾಗುತ್ತಿದೆ. ಟಿ20 ಕ್ರಿಕೆಟ್‌ ಎಂದರೆ ಅದು ಹೊಡಿಬಡಿಯಾಟಕ್ಕೆ ಹೆಸರುವಾಸಿ. ಇದಕ್ಕೆ ಅಪವಾದ ಎನ್ನುವಂತೆ ಅಲ್ಲೊಮ್ಮೆ ಇಲ್ಲೊಮ್ಮೆ ಬೌಲರ್‌ಗಳು ಮಿಂಚಿದ್ದಿದೆ. ಇದೀಗ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್‌ ಹಸನ್‌ (Shakib Al Hasan) ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಂಕಾ ಎದುರು ಶಕೀಬ್ 2 ವಿಕೆಟ್ ಕಬಳಿಸುವುದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್‌ಗಳ ವಿವರ ಇಲ್ಲಿದೆ ನೋಡಿ

1. ಶಕೀಬ್ ಅಲ್ ಹಸನ್
ಬಾಂಗ್ಲಾದೇಶದ ಸ್ಟಾರ್ ಸ್ಪಿನ್ನರ್ ಶಕೀಬ್ ಅಲ್ ಹಸನ್‌ 2007ರಿಂದ 2021ರ ಅವಧಿಯಲ್ಲಿ ಒಟ್ಟು 29 ಪಂದ್ಯಗಳನ್ನಾಡಿ 41 ವಿಕೆಟ್ ಕಬಳಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್‌ ಎನ್ನುವ ವಿಶ್ವದಾಖಲೆ ಬರೆದಿದ್ದಾರೆ.

2. ಶಾಹಿದ್ ಅಫ್ರಿದಿ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ 2007ರಿಂದ 2016ರ ಅವಧಿಯಲ್ಲಿ ಒಟ್ಟು 34 ಪಂದ್ಯಗಳನ್ನಾಡಿ 39 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿರುವವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ್ದಾರೆ.

Tap to resize

Lasith Malinga

3. ಲಸಿತ್ ಮಾಲಿಂಗ
ಶ್ರೀಲಂಕಾ ಮಾಜಿ ವೇಗಿ ಲಸಿತ್ ಮಾಲಿಂಗ 2007ರಿಂದ 2014ರ ಅವಧಿಯಲ್ಲಿ 31 ವಿಶ್ವಕಪ್ ಟಿ20 ಪಂದ್ಯಗಳನ್ನಾಡಿ 38 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮಾಲಿಂಗ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ 

Speaking about the dismissal, Gould told ESPNCricinfo, "Don't go down that road. I get teased about that. People send me pictures of my reaction after I was told in my ear by Billy Bowden that it was missing leg stump. It makes me laugh. It didn't make me laugh at the time, I can assure you. But I'd give it out again with my back to the wall. It was dead. I don't know what happened."

4. ಸಯೀದ್ ಅಜ್ಮಲ್‌
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್‌ 2009ರಿಂದ 2014ರ ಅವಧಿಯಲ್ಲಿ 23 ಟಿ20 ವಿಶ್ವಕಪ್ ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸುವುದರೊಂದಿಗೆ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

Ajantha Mendis

5. ಅಜಂತ ಮೆಂಡೀಸ್‌
ಲಂಕಾದ ಮಾಜಿ ಮಾಂತ್ರಿಕ ಸ್ಪಿನ್ನರ್ ಅಜಂತ ಮೆಂಡೀಸ್‌ 2009ರಿಂದ 2014ರ ಅವಧಿಯಲ್ಲಿ 21 ಪಂದ್ಯಗಳನ್ನಾಡಿ 35 ವಿಕೆಟ್‌ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ

Umar Gul

5 ಉಮರ್‌ ಗುಲ್‌
ಪಾಕಿಸ್ತಾನದ ಮಾಜಿ ವೇಗಿ ಉಮರ್ ಗುಲ್‌ 2007ರಿಂದ 2014ರ ಅವಧಿಯಲ್ಲಿ 24 ಪಂದ್ಯಗಳನ್ನಾಡಿ 35 ವಿಕೆಟ್ ಕಬಳಿಸುವ ಮೂಲಕ ಜಂಟಿ 5ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್‌ಗಳ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ವೇಗಿ ಎನ್ನುವ ಹಿರಿಮೆಗೆ ಗುಲ್ ಪಾತ್ರರಾಗಿದ್ದಾರೆ. 

Latest Videos

click me!