ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಓದಿನಲ್ಲೂ ಹಿಂದಿದ್ದಾರೆ ಪಾಕಿಸ್ತಾನದ ಈ ಕ್ರಿಕೆಟರ್ಸ್‌..!

First Published Jun 11, 2024, 1:42 PM IST

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸತತ ಎರಡು ಸೋಲು ಕಂಡು ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. ಪಾಕ್ ಆಟಗಾರರು ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಓದಿನಲ್ಲೂ ಸಾಕಷ್ಟು ಹಿಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

1. ಬಾಬರ್ ಅಜಂ:

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಕಳೆದೆರಡು ಪಂದ್ಯದಲ್ಲೂ ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿಯಲ್ಲಿ ಫೇಲ್ ಆಗಿದ್ದಾರೆ. ಇನ್ನು ಬಾಬರ್ ಅಜಂ ಶಿಕ್ಷಣ ಪಡೆದಿದ್ದು ಕೇವಲ 8ನೇ ತರಗತಿವರೆಗೂ ಮಾತ್ರ ಎಂದು ವರದಿಯಾಗಿದೆ.

2. ಹ್ಯಾರಿಸ್ ರೌಫ್:

ಪಾಕಿಸ್ತಾನ ತಂಡದ ಮಾರಕ ವೇಗಿ ಹ್ಯಾರಿಸ್ ರೌಫ್‌, ತಮ್ಮ ಬಾಲ್ಯದಲ್ಲಿ ತಾವೊಬ್ಬ ಫುಟ್ಬಾಲ್ ಆಟಗಾರನಾಗಬೇಕು ಎಂದು ಕನಸು ಕಂಡಿದ್ದರು. ಇನ್ನು ರೌಫ್, ಇಸ್ಲಾಮಾಬಾದ್‌ ಮಾಡೆಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ ಎನ್ನಲಾಗಿದ್ದು, ಎಲ್ಲಿಯವರೆಗೆ ಓದಿದ್ದಾರೆ ಎನ್ನುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.

Latest Videos


3. ಶದಾಬ್ ಖಾನ್:

ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟೈಲೀಷ್ ಆಲ್ರೌಂಡರ್ ಶಾದಾಬ್ ಖಾನ್, ಪದವಿ ಶಿಕ್ಷಣ ಪೂರೈಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶದಾಬ್ ಖಾನ್ ಯಾವ ವಿಷಯದಲ್ಲಿ ಪದವಿ ಪಡೆದಿದ್ದಾರೆ ಎನ್ನುವುದು ಸಾರ್ವಜನಿಕ ಡೊಮೈನ್‌ನಲ್ಲಿ ಲಭ್ಯವಿಲ್ಲ.

4. ಫಖರ್ ಜಮಾನ್:

ಪಾಕ್ ಅನುಭವಿ ಎಡಗೈ ಬ್ಯಾಟರ್ ಫಖರ್ ಜಮಾನ್, ಪಾಕಿಸ್ತಾನ ನೇವಿ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು, ನಾವಿಕನಾಗಿ ವೃತ್ತಿ ಬದುಕು ಆರಂಭಿಸಿದ್ದರು. ಇನ್ನು 2020ರಲ್ಲಿ ಅವರಿಗೆ ಪಾಕಿಸ್ತಾನ ತಂಡಕ್ಕೆ ನೀಡಿದ ಅವರ ಕೊಡುಗೆಯನ್ನು ಪರಿಗಣಿಸಿ ಪಾಕಿಸ್ತಾನ ನೌಕಾ ಸೇನೆಯಲ್ಲಿ ಗೌರವಾರ್ಥವಾಗಿ ಲೆಫ್ಟಿನೆಂಟ್ ಹುದ್ದೆ ನೀಡಿ ಗೌರವಿಸಿದೆ.

5. ಇಮಾಮ್ ಉಲ್ ಹಕ್‌:

ಇಂಜಮಾಮ್ ಉಲ್ ಹಕ್ ಅವರ ಸೋದರ ಸಂಬಂಧಿ ಇಮಾಮ್ ಉಲ್ ಹಕ್ ಅವರು ಕಾಮರ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇಮಾಮ್ ಉಲ್ ಹಕ್ ಲಾಹೋರ್‌ ವಿವಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ.

6. ಮೊಹಮ್ಮದ್ ರಿಜ್ವಾನ್;

ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರ ಕಾಲೇಜು ಶಿಕ್ಷಣದ ಮಾಹಿತಿ ಕೂಡಾ ಸಾರ್ವಜನಿಕವಾಗಿ ಲಭ್ಯವಿಲ್ಲ. ಕೆಲ ಮೂಲಗಳ ಪ್ರಕಾರ, ರಿಜ್ವಾನ್, ಹಾವರ್ಡ್‌ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಪೂರೈಸಿದ್ದಾರೆ.

7. ಶಾಹೀನ್ ಶಾ ಅಫ್ರಿದಿ:

ಪಾಕಿಸ್ತಾನದ ನೀಳಕಾಯದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ, ತಮ್ಮ ಬದುಕಿನ ಆರಂಭದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದರಿಂದ, ಅವರ ವಿದ್ಯಾರ್ಹತೆಯ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಿಲ್ಲ.

8. ಇಫ್ತಿಕಾರ್ ಅಹಮದ್:

ಪಾಕಿಸ್ತಾನದ ಅನುಭವಿ ಆಟಗಾರ ಇಫ್ತಿಕಾರ್ ಅಹಮದ್ ಪದವಿ ಶಿಕ್ಷಣವನ್ನು ಪೂರೈಸಿದ ಬಳಿಕ ಪಾಕಿಸ್ತಾನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಫ್ತಿಕಾರ್ ಎಜುಕೇಷನ್ ಬಗ್ಗೆಯೂ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ.

click me!