ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪಾಲಿಗೆ ಇದೀಗ ಒಂದು ರೀತಿ ಗಾಯದ ಮೇಲೆ ಬರೆ ಎಳೆದಂತ ಪರಿಸ್ಥಿತಿ ಎದುರಾಗಿದೆ. ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ, ಮತ್ತೋರ್ವ ಮಾರಕ ವೇಗಿ ಭಾರತ ಎದುರಿನ ಸೀಮಿತ ಓವರ್‌ಗಳಿಂದ ಹೊರಬಿದ್ದಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಗೆ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ನಾಯಕ ಪ್ಯಾಟ್ ಕಮಿನ್ಸ್ ಗಾಯಗೊಂಡಿದ್ದಾರೆ.
29
ಸೊಂಟದ ಗಾಯದಿಂದಾಗಿ ಕಮಿನ್ಸ್ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಂದ ಹೊರಗುಳಿಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.
39
ಈಗಾಗಲೇ ತಂಡದ ಪ್ರಮುಖ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಾರತ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಅನುಭವಿ ವೇಗಿ ಪ್ಯಾಟ್ ಕಮಿನ್ಸ್ ಕೂಡಾ ಹೊರಬಿದ್ದಿರುವುದು ಕಾಂಗರೂ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯಿದೆ.
ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯಲ್ಲಿ ಮೂರು ಪಂದ್ಯಗಳಿವೆ.
59
ಟೆಸ್ಟ್ ಮತ್ತು ಟಿ20ಯಿಂದ ನಿವೃತ್ತಿ ಹೊಂದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮರಳುತ್ತಿರುವ ಸರಣಿ ಕೂಡ ಇದಾಗಿದೆ.
69
23 ರಂದು ಅಡಿಲೇಡ್‌ನಲ್ಲಿ ಮತ್ತು 25 ರಂದು ಸಿಡ್ನಿಯಲ್ಲಿ ಏಕದಿನ ಸರಣಿಯ ಇತರ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಯ ನಂತರ ಭಾರತ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನೂ ಆಸ್ಟ್ರೇಲಿಯಾ ಆಡಲಿದೆ.
79
29 ರಂದು ಕ್ಯಾನ್‌ಬೆರಾ, 31 ರಂದು ಮೆಲ್ಬೋರ್ನ್, ನವೆಂಬರ್ 2 ರಂದು ಹೊಬಾರ್ಟ್, 6 ರಂದು ಗೋಲ್ಡ್ ಕೋಸ್ಟ್ ಮತ್ತು 8 ರಂದು ಬ್ರಿಸ್ಬೇನ್‌ನಲ್ಲಿ ಟಿ20 ಸರಣಿಯ ಪಂದ್ಯಗಳು ನಡೆಯಲಿವೆ.
89
ಸೊಂಟದ ಗಾಯದಿಂದಾಗಿ ಭಾರತದ ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಯನ್ನೂ ಕಮಿನ್ಸ್ ತಪ್ಪಿಸಿಕೊಳ್ಳಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈ ವರ್ಷ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಸರಣಿಗೆ ಮುನ್ನ ಕಮಿನ್ಸ್ ಗಾಯ ಗುಣವಾಗದಿದ್ದರೆ ಆಸ್ಟ್ರೇಲಿಯಾಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
99
ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಆಡಿದ ನಂತರ ಕಮಿನ್ಸ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಕಮಿನ್ಸ್ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು.