ಅರ್ಜುನ್ ತೆಂಡೂಲ್ಕರ್ ಸಾನಿಯಾ ರೊಮ್ಯಾನ್ಸ್ ಶುರುವಾಗಿದ್ದು ಹೇಗೆ? ಅಕ್ಕ ಸಾರಾ ನೆರವು ಬಹಿರಂಗ, ಅರ್ಜುನ್ -ಸಾನಿಯಾ ಪ್ರೀತಿ ಮಾಧ್ಯಮಗಳಲ್ಲೂ ಎಲ್ಲೂ ಸದ್ದು ಮಾಡಿರಲಿಲ್ಲ. ಇವರ ಬೇಟಿಯೂ ಗೌಪ್ಯವಾಗಿತ್ತು. ಈ ಪ್ರೀತಿ ಶುರುವಾಗಿದ್ದು ಹೇಗೆ?
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಉದ್ಯಮಿ ಪುತ್ರಿ ಸಾನಿಯಾ ಚಂದೋಕ್ ಮದುವೆ ಮಾರ್ಚ್ 5 ರಂದು ನಡೆಯಲಿದೆ. ಈಗಾಗಲೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದೆ. ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಪ್ರೀತಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಸದ್ದು ಮಾಡಿಲ್ಲ. ಇನ್ನು ಅರ್ಜುನ್ ಹೆಸರು ಹೆಚ್ಚಾಗಿ ಯಾರ ಜೊತೆಗೂ ಥಳಕು ಹಾಕಿಕೊಂಡಿಲ್ಲ. ಹೀಗಾಗಿ ಇವರ ಪ್ರೀತಿ ಹುಟ್ಟಿದ ರೀತಿ ಕುತೂಹಲಕ್ಕೆ ಕಾರಣವಾಗಿದೆ.
26
ಪ್ರೀತಿ ಶುರುವಾಗಿದ್ದು ಹೇಗೆ
ಅರ್ಜುನ್ ತೆಂಡೂಲ್ಕರ್ ಸಾನಿಯಾ ನಡುವಿನ ಪ್ರೀತಿ ಶುರುವಾಗುವ ಮುನ್ನವೇ ಸಚಿನ್ ಕುಟುಂಬದ ಜೊತೆ ಸಾನಿಯಾ ಚಂದೋಕ್ ಆಪ್ತರಾಗಿದ್ದರು. ಇದಕ್ಕೆ ಕಾರಣ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್. ಸಾರಾ ಹಾಗೂ ಸಾನಿಯಾ ಬೆಸ್ಟ್ ಫ್ರೆಂಡ್ಸ್. ಇಬ್ಬರು ಹಲವರು ವರ್ಷಗಳಿಂದ ಆತ್ಮೀಯರಾಗಿದ್ದಾರೆ. ಅರ್ಜುನ್ ಪ್ರೀತಿಗೆ ಸಾರಾ ತೆಂಡೂಲ್ಕರ್ ಹಾಗೂ ಸಚಿನ್ ತೆಂಡೂಲ್ಕರ್ ಸ್ನೇಹ ಕೂಡ ಕಾರಣವಾಗಿದೆ.
36
ಸಾರಾ ಗೆಳೆತನ, ತಮ್ಮನ ಪ್ರೀತಿ
ಸಾರಾ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಹಲವು ವರ್ಷಗಳ ಸ್ನೇಹ. ಹೀಗಾಗಿ ಸಾರಾ ಜೊತೆ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದರು. ಇದು ಲಂಡನ್ ಇರಲಿ, ಕೀನ್ಯಾ ಪ್ರವಾಸವಿರಲಿ ಸಾರಾ ಜೊತೆ ಸಾನಿಯಾ ಇದ್ದರು. ಸಾರಾ ಹಾಗೂ ಸಾನಿಯಾ ನಡುವಿನ ಗೆಳತನದಲ್ಲೇ ಅರ್ಜುನ್ ತೆಂಡೂಲ್ಕರ್‌ಗೆ ಪ್ರೀತಿ ಶುರುವಾಗಿದೆ. ಸಾರಾ ಜೊತೆ ಹಲವು ಬಾರಿ ಸಚಿನ್ ಮನೆಗೆ ಆಗಮಿಸಿದ್ದಾರೆ. ಸಚಿನ್ ಮನೆಯ ಕಾರ್ಯಕ್ರಮ, ಪೂಜೆಗಳಲ್ಲಿ ಪಾಲ್ಗೊಂಡಿದ್ದಾರೆ. ಇತ್ತ ಸಾನಿಯಾ ಕುಟುಂಬದ ಹಲವು ಕಾರ್ಯಕ್ರಮಗಳಲ್ಲಿ ಸಚಿನ್ ಕುಟುಂಬ ಪಾಲ್ಗೊಂಡಿದೆ. ಇಲ್ಲೇ ಅರ್ಜುನ್ ಹಾಗೂ ಸಾನಿಯಾ ಪ್ರೀತಿ ಶುರುವಾಗಿದೆ.
ಸಚಿನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ತಾತ ರವಿ ಘಯಿ ಇಬ್ಬರು ಗೆಳೆಯರು. ಸಚಿನ್ ಕ್ರಿಕೆಟ್ ದಿಗ್ಗಜರಾದರೆ, ರವಿ ಘಯಿ ಗ್ರಾವಿಸ್ ಗ್ರೂಪ್ ಚೇರ್ಮೆನ್. ಇಬ್ಬರು ಮುಂಬೈ ಮೂಲದವರು. ಹೀಗಾಗಿ ತೆಂಡೂಲ್ಕರ್ ಹಾಗೂ ರವಿ ಘಯಿ ಕುಟುಂಬದ ಜೊತೆ ಹಲವು ವರ್ಷಗಳಿಂದಲೇ ಗೆಳೆತನವಿದೆ.
56
ಪೋಷಕರಿಂದ ಗ್ರೀನ್ ಸಿಗ್ನಲ್
ಅಕ್ಕ ಸಾರಾಳ ಮೂಲಕ ಸಾನಿಯಾ ಚಂದೋಕ್ ಜೊತೆಗಿನ ಅರ್ಜುನ್ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ಇದೀಗ ಮದುವೆ ಅರ್ಥ ಪಡೆಯುತ್ತಿದೆ. ಇವರ ಪ್ರೀತಿಗೆ ಎರಡೂ ಕುಟುಂಬ ಅಷ್ಟೇ ವೇಗದಲ್ಲಿ ಗ್ರಿನ್ ಸಿಗ್ನಲ್ ನೀಡಿದೆ. ಅದ್ಧೂರಿ ಮದುವೆಗೆ ತಯಾರಿ ನಡೆಯುತ್ತಿದೆ. ಮುಂಬೈನಲ್ಲಿ ಮದುವೆ ಆಯೋಜನೆಗೊಂಡಿದೆ.
66
ಮದುವೆಗೆ ಹಲವು ಗಣ್ಯರು
ಅರ್ಜುನ್ ತೆಂಡೂಲ್ಕರ್ ಸಾನಿಯಾ ಮದುವೆಗೆ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ. ಇನ್ನು ಬಾಲಿವುಡ್ ಸೆಲೆಬ್ರೆಟಿಗಲು, ಕ್ರಿಕೆಟ್ ಗಣ್ಯರು ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುತ್ತಿದ್ದಾರೆ.
ಮದುವೆಗೆ ಹಲವು ಗಣ್ಯರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.