ಟೆಸ್ಟ್‌ಗೆ ಡೆಬ್ಯೂ ಮಾಡಿದ ಸರ್ಫರಾಜ್ ಖಾನ್ ತಂದೆಗೆ ಥಾರ್ ಗಿಫ್ಟ್ ಘೋಷಿಸಿದ ಆನಂದ್ ಮಹೀಂದ್ರ!

First Published | Feb 16, 2024, 6:58 PM IST

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಪದಾರ್ಪಣೆ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಸರ್ಫರಾಜ್ ತಂದೆ ಹಾಗೂ ಪತ್ನಿ ಭಾವುಕರಾಗಿ ಕಣ್ಮೀರಿಟ್ಟಿದ್ದರು. ಇತ್ತ ಸರ್ಫರಾಜ್ ಚೊಚ್ಚಲ ಪಂದ್ಯದಲ್ಲೇ ಹಾಫ್ ಸೆಂಚುರಿ ಸಿಡಿಸಿದ್ದರು. ಸರ್ಫರಾಜ್ ಕ್ರಿಕೆಟ್ ಪಯಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಈ ಸಂಭ್ರಮದ ಬೆನ್ನಲ್ಲೇ ಆನಂದ್ ಮಹೀಂದ್ರ ಸರ್ಫರಾಜ್ ಖಾನ್ ತಂದೆಗೆ ಮಹೀಂದ್ರ ಥಾರ್ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ.
 

ಕಠಿಣ ಪ್ರಯತ್ನ, ದೇಸಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ, ಫಿಟ್ನೆಸ್‌ಗಾಗಿ ಇನ್ನಿಲ್ಲದ ಪ್ರಯತ್ನ, ಇಷ್ಟಾದರೂ ಸರ್ಫರಾಜ್ ಖಾನ್‌ಗೆ ಸುಲಭವಾಗಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಸುದೀರ್ಘ ಹೋರಾಟದ ಬಳಿಕ ಸರ್ಫರಾಜ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಚೊಚ್ಚಲ ಪಂದ್ಯದಲ್ಲೇ ಹಾಫ್ ಸೆಂಚುರಿ ಸಿಡಿಸಿದರು. ಆದರೆ ರನೌಟ್‌ಗೆ ಬಲಿಯಾಗುವ ಮೂಲಕ ಶತಕ ಮಿಸ್ ಮಾಡಿಕೊಂಡರು. 

Tap to resize

ಸರ್ಫರಾಜ್ ಖಾನ್ ಪದಾರ್ಪಣೆ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತ್ತು. ಕಾರಣ ಸುದೀರ್ಘ ದಿನಗಳ ಬಳಿಕ ಸಿಕ್ಕದ ಅವಕಾಶ, ಸರ್ಫರಾಜ್ ತಂದೆ, ಪತ್ನಿ ಭಾವುಕರಾಗಿ ಕಣ್ಣಿರಿಟ್ಟಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ನೋಡಿ ಹೆಮ್ಮೆ ಪಟ್ಟಿದ್ದರು.

ಸರ್ಫರಾಜ್ ಖಾನ್ ಕ್ರಿಕೆಟ್ ಪಯಣ ಎಲ್ಲರಿಗೂ ಸ್ಪೂರ್ತಿ. ತಾಳ್ಮೆ, ಕಠಿಣ ಪರಿಶ್ರಮ, ಹೋರಾಟವೇ ಸರ್ಫರಾಜ್ ಖಾನ್ ಕ್ರಿಕೆಟ್ ಯಶಸ್ಸಿನ ಗುಟ್ಟು. ಒಬ್ಬ ತಂದೆಗೆ ಮಗನ ಟೆಸ್ಟ್ ಕ್ರಿಕೆಟ್ ಪಾದರ್ಪಣೆ ಸಂಭ್ರಮಕ್ಕಿಂತ ಇನ್ನೇನು ಬೇಕು. ಸರ್ಫರಾಜ್ ಸ್ಪೂರ್ತಿಯ ಕತೆ ಆನಂದ್ ಮಹೀಂದ್ರಾ ಗಮನ ಸೆಳೆದಿದೆ.

ಸರ್ಫರಾಜ್ ಯಶಸ್ಸಿನಲ್ಲಿ ತಂದೆ ನೌಶದ್ ಖಾನ್ ಪ್ರಯತ್ನ ಹೆಚ್ಚಿದೆ. ಅವರ ಅವಿರತ ಪ್ರಯತ್ನ, ಕೂಡುಗೆಯಿಂದ ಸರ್ಫರಾಜ್ ಈ ಮಟ್ಟಕ್ಕೆ ಬೆಳೆದಿದ್ದಾನೆ. ಹೀಗಾಗಿ ನೌಶದ್ ಖಾನ್‌ಗೆ ಮಹೀಂದ್ರ ಥಾರ್ ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರ ಹೇಳಿದ್ದಾರೆ. 
 

ಕಠಿಣ ಪರಿಶ್ರಮ, ತಾಳ್ಮೆ, ಧೈರ್ಯ. ಮಗುವಿನಲ್ಲಿ ಸ್ಪೂರ್ತಿ ತುಂಬಲು ತಂದೆಗಿಂತ ಉತ್ತಮವಾದ ಗುಣ ಯಾವುದು? ಸ್ಪೂರ್ತಿಯಾದಕ ಪೋಷಕರಾಗಿರುವ ನೌಶಾದ್ ಖಾನ್‌ ಸ್ವೀಕರಿಸಿದರೆ ಅವರಿಗೆ ಮಹೀಂದ್ರ ಥಾರ್ ಉಡುಗೊರೆಯಾಗಿ ನೀಡುವುದು ನನ್ನ ಗೌರವ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ನಿರ್ಭೀತ ಬ್ಯಾಟಿಂಗ್ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್ 66 ಎಸೆತದಲ್ಲಿ 62 ರನ್ ಸಿಡಿಸಿದ್ದರು. ಆದರೆ ಸಣ್ಣ ಎಡವಟ್ಟಿನಿಂದ ರನೌಟ್‌ಗೆ ಬಲಿಯಾದರು.

ಸರ್ಫರಾಜ್ ಖಾನ್ ಬ್ಯಾಟಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಫಿಯರ್‌ಲೆಸ್ ಕ್ರಿಕೆಟ್, ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿತ್ತು.

Latest Videos

click me!