ಕೊರೋನಾ ವೈರಸ್ ದೇಶದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಇಂದು(ಮಾ.29) ಮೂವರು ಬಲಿಯಾಗೋ ಮೂಲಕ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ವೈರಸ್ ಹರಡುವುದನ್ನು ತಡೆಯಲು ಹಾಗೂ ಸೋಂಕಿತರ ಚಿಕಿತ್ಸೆಗೆ ಶ್ರಮವಹಿಸುತ್ತಿದೆ. ಸರ್ಕಾರದ ಹೋರಾಟಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ದಿಗ್ಗಜರು ಕೈಜೋಡಿಸಿದ್ದಾರೆ. ಇದೀಗ ಸರ್ಕಾರದ ನೆರವಿಗೆ ಅಜಿಂಕ್ಯ ರಹಾನೆ ಧಾವಿಸಿದ್ದಾರೆ.