ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

First Published | Mar 29, 2020, 8:09 AM IST

ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ಕೇರ್ಸ್ ನಿಧಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) 51 ಕೋಟಿ ರು. ದೇಣಿಗೆ ಘೋಷಣೆ ಮಾಡಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು, ಕೊರೋನಾ ತಡೆಗಾಗಿ ಸಂಶೋಧನೆಗಳಿಗೆ ಪ್ರೋತ್ಸಾಹ ಹಾಗೂ ದೇಶದ ಸುರಕ್ಷತೆಗಾಗಿ ಬಿಸಿಸಿಐ ವತಿಯಿಂದ 51 ಕೋಟಿ ರು. ನೀಡುವುದಾಗಿ ಹೇಳಿದ್ದಾರೆ. 

ಕೊರೋನಾ ವಿರುದ್ಧ ಹಾಗೂ ಸಾರ್ವಜನಿಕರ ಆರೋಗ್ಯ ತುರ್ತುಸ್ಥಿತಿ ಪರ ಹೋರಾಡುವುದು ಮೊದಲ ಆದ್ಯತೆಯಾಗಿದೆ. ಇಂಥ ಸಂದರ್ಭದಲ್ಲಿ ದೇಶಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಬಿಸಿಸಿಐ ಹೇಳಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ 

ಕೊರೋನಾ ಸಂಕಷ್ಟವನ್ನು ಕೊನೆಗೂ ಅರ್ಥ ಮಾಡಿಕೊಂಡ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ
ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ
Tap to resize

ದೇಶದ 32 ಸದಸ್ಯ ಕ್ರಿಕೆಟ್ ಸಂಸ್ಥೆ ಸೇರಿ ಒಟ್ಟು 51 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ನೀಡಿದ ಬಿಸಿಸಿಐ
ದೇಶದ ಎಲ್ಲಾ 32 ಕ್ರಿಕೆಟ್ ಸಂಸ್ಥೆಗಳಿಂದ ತಲಾ 50 ಲಕ್ಷ ರುಪಾಯಿ ದೇಣಿಗೆ ಪಡೆದುಕೊಂಡ ಬಿಸಿಸಿಐ
ಮತ್ತೊಮ್ಮೆ ದೇಶದ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಎಲ್ಲಾ 32 ಕ್ರಿಕೆಟ್ ಸಂಸ್ಥೆಗಳಿಂದ ಒಟ್ಟಾಗಿ 16 ಕೋಟಿ ಹಾಗೂ ಬಿಸಿಸಿಐ 35 ಕೋಟಿ, ಒಟ್ಟು 51 ಕೋಟಿ ರುಪಾಯಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ ದಾದ ಟೀಂ
ಈಗಾಗಲೇ ಮುಂಬೈ ಕ್ರಿಕೆಟ್ ಸಂಸ್ಥೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರುಪಾಯಿ ನೀಡಿದ್ದು, ಬಿಸಿಸಿಐ ಮನವಿಗೆ ಸ್ಪಂದಿಸಿ 50 ಲಕ್ಷ ನೀಡಲು ಮುಂದಾಗಿದೆ
ಈಗಾಗಲೇ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ ಸೇರಿದಂತೆ ಹಲವು ಕ್ರಿಕೆಟಿಗರು ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ

Latest Videos

click me!