ಕೊಹ್ಲಿ ಸಚಿನ್‌ಗೆ ಬ್ಯಾಟ್‌ ರೆಡಿ ಮಾಡುತ್ತಿದ್ದಾತನ ಸ್ಥಿತಿ ಗಂಭೀರ, ನೆರವಿಗೆ ಬಂದ ನಟ ಸೋನು ಸೂದ್..!

First Published | Aug 24, 2020, 3:05 PM IST

ಮುಂಬೈ: ಬಾಲಿವುಡ್ ಖ್ಯಾತ ನಟ ಸೋನು ಸೂದ್ ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರ ಪಾಲಿಗೆ ಅಕ್ಷರಶಃ ಆಸರೆಯಾಗಿ ನಿಂತಿದ್ದಾರೆ. ಅದು ವಲಸೆ ಕಾರ್ಮಿಕರೇ ಆಗಿರಲಿ, ಅಥವಾ ವಿದೇಶದಲ್ಲಿ ಸಿಲುಕಿರುವ ವಿದ್ಯಾರ್ಥಿಗಳೇ ಆಗಿರಲಿ, ಇನ್ನು ಕೆಲಸ ಕಳೆದಕೊಂಡು ನಿರ್ಗತಿಕರೇ ಆಗಿರಲಿ ಎಲ್ಲರ ಪಾಲಿಗೂ ಸೋನು ಸೂದ್ ಎನ್ನುವ ಹೆಸರು ಆಪತ್ಭಾಂಧವನಂತೆ ಕಾಪಾಡುತ್ತಿದೆ. ಇದೀಗ ಸೋನು ಸೂದ್ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್‌ಗೆ ಬ್ಯಾಟ್‌ ತಯಾರು ಮಾಡಿಕೊಡುತ್ತಿದ್ದ ಅಶ್ರಫ್‌ ಚೌಧರಿ(ಅಶ್ರಫ್ ಬಾಯ್) ಅವರ ನೆರವಿಗೆ ಧಾವಿಸಿದ್ದಾರೆ.
 

ಅಶ್ರಫ್ ಎನ್ನುವವರು ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ನ್ಯೂಸ್‌ ಪೇಪರ್ ವರದಿ ಮಾಡಿದೆ.
ಇದೀಗ ಅಶ್ರಫ್ ಅವರು ಚಿಕಿತ್ಸೆಗಾಗಿ ಹಣಕಾಸನ್ನು ಹೊಂದಾಣಿಸಲು ಸಾಕಷ್ಟು ಪರದಾಡುತ್ತಿದ್ದಾರೆ.
Tap to resize

ಅಶ್ರಫ್ ಅವರ ಪರಿಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಸೇರಿದಂತೆ ಹಲ ಎದುರಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರ ಬ್ಯುಸಿನೆಸ್ ಕೂಡಾ ಅಷ್ಟೇನು ಚೆನ್ನಾಗಿ ನಡೆಯುತ್ತಿಲ್ಲ.
ಲಾಕ್‌ಡೌನ್‌ನಿಂದಾಗಿ ನಗರದಾದ್ಯಂತ ಎಲ್ಲೂ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿಲ್ಲ. ಇಲ್ಲಿಯವರೆಗೂ ಅವರು ಸಂಪಾದಿಸಿದ್ದ ಹಣವೆಲ್ಲಾ ಖರ್ಚಾಗಿ ಹೋಗಿದೆ. ಹೀಗಾಗಿ ಅವರ ಹಣವೆಲ್ಲಾ ಖರ್ಚಾಗಿ ಹೋಗಿದೆ ಎಂದು ಅವರ ಹಿತ ಚಿಂತರಕರಾದ ಪ್ರಶಾಂತ್ ಜೇಠ್ಮಲಾನಿ ನ್ಯೂಸ್‌ ಪೇಪರ್‌ಗೆ ತಿಳಿಸಿದ್ದಾರೆ.
ಇಲ್ಲಿಯವರೆಗೆ ಯಾವೊಬ್ಬ ಕ್ರಿಕೆಟಿಗರು ಅಶ್ರಫ್ ಬಾಯ್‌ ಸಹಾಯಕ್ಕೆ ಬಂದಿಲ್ಲ.
ಕ್ರಿಕೆಟಿಗರಿಂದ ಯಾವುದೇ ಹಣ ತೆಗೆದುಕೊಳ್ಳದೇ ಅವರಿಗೆ ಬೇಕಾದ ಹಾಗೆ ಬ್ಯಾಟ್‌ಗಳನ್ನು ತಯಾರು ಮಾಡಿಕೊಡುತ್ತಿದ್ದರು.
ಈ ವಿಚಾರವನ್ನು ಟ್ವಿಟರ್ ಮೂಲಕ ನಟ ಸೋನು ಸೂದ್ ಗಮನ ಸೆಳೆಯುವಲ್ಲಿ ಓರ್ವ ವ್ಯಕ್ತಿ ಯಶಸ್ವಿಯಾಗಿದ್ದಾರೆ.
ಇದು ಗಮನಕ್ಕೆ ಬರುತ್ತಿದ್ದಂತೆ ಅಶ್ರಫ್ ಅವರು ಎಲ್ಲಿದ್ದಾರೆ, ಅವರ ವಿಳಾಸ ತಿಳಿಸಿ ಎಂದು ಟ್ವೀಟ್ ಮಾಡುವ ಮೂಲಕ ತಾವು ಅವರ ನೆರವಿಗೆ ಸಿದ್ದ ಎನ್ನುವಂತಹ ಸಂದೇಶವನ್ನು ಸೋನು ರವಾನಿಸಿದ್ದಾರೆ.

Latest Videos

click me!