ಮುರಳಿ ವಿಜಯ್‌ಗೂ ಮುನ್ನ ಪಾದಾರ್ಪಣೆ ಮಾಡಿ, ಇನ್ನೂ ನಿವೃತ್ತಿಯಾಗದೇ ಇರುವ ಟೀಂ ಇಂಡಿಯಾ ಕ್ರಿಕೆಟಿಗರಿವರು..!

First Published Jan 31, 2023, 3:49 PM IST

ಬೆಂಗಳೂರು(ಜ.31): ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಮುರಳಿ ವಿಜಯ್‌, ಜನವರಿ 30ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮುರಳಿ ವಿಜಯ್, 2018ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು.

ತಮಿಳುನಾಡು ಮೂಲದ ಮುರಳಿ ವಿಜಯ್ 2008ರಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಮುರಳಿ ವಿಜಯ್‌ಗಿಂತ ಮೊದಲೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ, ಇನ್ನೂ ನಿವೃತ್ತಿಯಾಗದೇ ಕ್ರಿಕೆಟ್ ಆಡುತ್ತಿರುವ 6 ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
 

1. ಅಮಿತ್ ಮಿಶ್ರಾ:

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ, 2003ರಲ್ಲಿ ಟೀಂ ಇಂಡಿಯಾ  ಪರ ಪಾದಾರ್ಪಣೆ ಮಾಡಿದ್ದರು. ಮುರಳಿ ವಿಜಯ್‌ಗಿಂತ 7 ವರ್ಷ ಮುಂಚಿತವಾಗಿ ಪಾದಾರ್ಪಣೆ ಮಾಡಿರುವ ಅಮಿತ್ ಮಿಶ್ರಾ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿಲ್ಲ.

2.ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2007ರ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಸಾಕಷ್ಟು ಏಳು-ಬೀಳು ಕಂಡಿರುವ ರೋಹಿತ್ ಶರ್ಮಾ, ಇದೀಗ, ಟೀಂ ಇಂಡಿಯಾದ ಯಶಸ್ವಿ ಆರಂಭಿಕರಾಗಿ ಹೊರಹೊಮ್ಮಿದ್ದಾರೆ. ರೋಹಿತ್ ಶರ್ಮಾ ಇನ್ನೂ ಮೂರು ಮಾದರಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 
 

3. ರವೀಂದ್ರ ಜಡೇಜಾ:

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಮುರುಳಿ ವಿಜಯ್ ಜತೆ ಕಣಕ್ಕಿಳಿಯುತ್ತಿದ್ದ ರವೀಂದ್ರ ಜಡೇಜಾ, ಮುರುಳಿ ವಿಜಯ್ ಅವರಿಗಿಂತ ಒಂದು ವರ್ಷ ಮುಂಚಿತವಾಗಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಇಂದಿಗೂ ಜಡ್ಡು, ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 
 

4. ದಿನೇಶ್ ಕಾರ್ತಿಕ್:

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌, 2004ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈಗಲೂ ಚುಟುಕು ಕ್ರಿಕೆಟ್‌ನಲ್ಲಿ ಡಿಕೆ ಬಾಸ್ ಅಬ್ಬರಿಸುತ್ತಿದ್ದಾರೆ. ಇನ್ನೂ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿಲ್ಲ.

5. ಇಶಾಂತ್ ಶರ್ಮಾ:

ಡೆಲ್ಲಿ ಮೂಲದ ನೀಳಕಾಯದ ವೇಗಿ ಇಶಾಂತ್ ಶರ್ಮಾ, 2007ರಲ್ಲಿ ಬಾಂಗ್ಲಾದೇಶ ಎದುರು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ದಶಕಗಳ ಕಾಲ ಟೀಂ ಇಂಡಿಯಾದಲ್ಲಿ ಏಳು-ಬೀಳು ಕಂಡಿರುವ ಇಶಾಂತ್ ಶರ್ಮಾ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿಲ್ಲ.

6. ಪೀಯೂಸ್ ಚಾವ್ಲಾ:

ಟೀಂ ಇಂಡಿಯಾ ಅನುಭವಿ ಲೆಗ್‌ ಸ್ಪಿನ್ನರ್ ಪೀಯೂಸ್ ಚಾವ್ಲಾ 2006ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಪೀಯೂಸ್ ಚಾವ್ಲಾ 2012ರ ಬಳಿಕ ಟೀಂ ಇಂಡಿಯಾ ಪರ ಕಣಕ್ಕಿಳಿದಿಲ್ಲವಾದರೂ, ಆಡುವುದನ್ನು ಕೈಬಿಟ್ಟಿಲ್ಲ.

click me!