Ind vs NZ: ಎರಡನೇ ಟಿ20 ಪಂದ್ಯದಲ್ಲಿ ನಿರ್ಮಾಣವಾದ 3 ಇಂಟ್ರೆಸ್ಟಿಂಗ್ ದಾಖಲೆಗಳಿವು..!

Published : Jan 30, 2023, 12:17 PM IST

ಲಖನೌ(ಜ.30): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಅಲ್ಪ ಸ್ಕೋರಿನ ಮ್ಯಾಚ್ ಆಗಿದ್ದರೂ, ರೋಚಕತೆಗೇನೂ ಕೊರತೆ ಇರಲಿಲ್ಲ. ಈ ಎರಡನೇ ಏಕದಿನ ಪಂದ್ಯದಲ್ಲಿ ದಾಖಲಾದ 3 ಕುತೂಹಲಕಾರಿ ರೆಕಾರ್ಡ್ಸ್‌ಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ  

PREV
16
Ind vs NZ: ಎರಡನೇ ಟಿ20 ಪಂದ್ಯದಲ್ಲಿ ನಿರ್ಮಾಣವಾದ 3 ಇಂಟ್ರೆಸ್ಟಿಂಗ್ ದಾಖಲೆಗಳಿವು..!

1. ಒಂದೂ ಸಿಕ್ಸ್ ಇಲ್ಲದೇ ಮುಗಿದ ಅಂತಾರಾಷ್ಟ್ರೀಯ ಟಿ20 ಪಂದ್ಯ:

ಭಾರತ ಕ್ರಿಕೆಟ್‌ ತಂಡವು 2007ರಿಂದ ಅಂತಾರಾಷ್ಟ್ರೀಯ ಟಿ20 ಆಡುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಭಾರತ ತಂಡವು ಇನಿಂಗ್ಸ್‌ವೊಂದರಲ್ಲಿ ಒಂದೂ ಸಿಕ್ಸರ್‌ ಇಲ್ಲದೇ ಇನಿಂಗ್ಸ್‌ ಮುಗಿಸಿದೆ. 
 

26

ಎರಡೂ ತಂಡದಲ್ಲೂ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್‌, ಹಾರ್ದಿಕ್ ಪಾಂಡ್ಯ, ಫಿನ್ ಅಲೆನ್, ಗ್ಲೆನ್‌ ಫಿಲಿಫ್ಸ್‌ ಅವರಂತ ಸ್ಪೋಟಕ ಬ್ಯಾಟರ್‌ಗಳನ್ನು ಹೊಂದಿದ್ದರೂ ಒಂದೇ ಒಂದು ಸಿಕ್ಸರ್‌ ಬಾರಿಸದಿದ್ದದ್ದು ವಿಶೇಷ.
 

36

2. ಮೊದಲ ಬಾರಿಗೆ ಲಖನೌನಲ್ಲಿ ಯಶಸ್ವಿಯಾಗಿ ರನ್ ಚೇಸ್:

ಈ ಪಂದ್ಯಕ್ಕೂ ಮುನ್ನ ಲಖನೌದಲ್ಲಿ ಇದುವರೆಗೂ 5 ಟಿ20 ಪಂದ್ಯಗಳು ಜರುಗಿದ್ದವು, 5 ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್‌ ಮಾಡಿದ ತಂಡವು ಗೆಲುವಿನ ನಗೆ ಬೀರಿದ್ದವು. 
 

46
Image credit: PTI

ಆದರೆ ಇದೇ ಮೊದಲ ಬಾರಿಗೆ ತಂಡವೊಂದು ಗುರಿ ಬೆನ್ನತ್ತಿ ಗೆಲುವಿನ ನಗೆ ಬೀರಿದೆ. ಅದು ರನ್ ಚೇಸ್ ಮಾಡಿದ್ದು ಅಷ್ಟೇನೂ ಸುಲಭವಾಗಿರಲಿಲ್ಲ. ಒಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಿಟ್ಟುಸಿರು ಬಿಟ್ಟಿದೆ.
 

56

3. ಟೀಂ ಇಂಡಿಯಾ ಎದುರು ಅತೀ ಕಡಿಮೆ ಸ್ಕೋರ್ ದಾಖಲಿಸಿದ ನ್ಯೂಜಿಲೆಂಡ್:

2007ರಿಂದಲೂ ಟೀಂ ಇಂಡಿಯಾ ಎದುರು ಸೆಣಸುತ್ತಿರುವ ನ್ಯೂಜಿಲೆಂಡ್ ತಂಡವು ಇದೇ ಮೊದಲ ಬಾರಿಗೆ 100+ ರನ್ ಬಾರಿಸಲು ವಿಫಲವಾಗಿದೆ. 
 

66

ಲಖನೌದಲ್ಲಿ ಕಿವೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 99 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊದಲು ಕಿವೀಸ್‌ ತಂಡವು 2021ರಲ್ಲಿ ಭಾರತ ಎದುರು 111 ರನ್ ಬಾರಿಸಿದ್ದು, ಅತಿ ಕಡಿಮೆ ಮೊತ್ತ ಎನಿಸಿಕೊಂಡಿತ್ತು.
 

Read more Photos on
click me!

Recommended Stories