ಕ್ರಿಕೆಟ್ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಿಕ್ಸರ್, ಕೋಟಿ ಕೋಟಿ ವ್ಯವಹಾರ ಕಟ್ಟಿದ ಭಾರತದ 5 ಕ್ರಿಕೆಟಿಗರು

Published : Jul 02, 2026, 10:36 AM IST

ಭಾರತೀಯ ಕ್ರಿಕೆಟ್ ಕ್ರಿಕೆಟಿಗರು, ಕ್ರಿಕೆಟ್ ವೃತ್ತಿಜೀವನದ ಜೊತೆಯಲ್ಲೇ ಹಲವು ಮಂದಿ ಯಶಸ್ವಿ ಉದ್ಯಮಿಗಳಾಗಿಯೂ ಹೊರಹೊಮ್ಮಿದ್ದಾರೆ. ಫ್ಯಾಷನ್, ಫಿಟ್ನೆಸ್, ಶಿಕ್ಷಣ, ಸ್ಟಾರ್ಟ್‌ಅಪ್‌, ರೆಸ್ಟೋರೆಂಟ್‌, ಸಿನಿಮಾ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಬಿಸಿನೆಸ್ ಸಾಮ್ರಾಜ್ಯ ಕಟ್ಟಿದ್ದಾರೆ. 

PREV
15
ವಿರಾಟ್ ಕೊಹ್ಲಿ – ಫ್ಯಾಷನ್‌ನಿಂದ ಫಿಟ್ನೆಸ್‌ವರೆಗೆ ಬೃಹತ್ ಉದ್ಯಮ

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್‌ನಲ್ಲಷ್ಟೇ ಅಲ್ಲ, ಬಿಸಿನೆಸ್‌ನಲ್ಲೂ ದೊಡ್ಡ ಹೆಸರು ಮಾಡಿದ್ದಾರೆ.

ಅವರ ಪ್ರಮುಖ ಉದ್ಯಮಗಳು:

Wrogn ಫ್ಯಾಷನ್ ಬ್ರ್ಯಾಂಡ್‌ನಲ್ಲಿ ಪಾಲುದಾರಿಕೆ, 2014ರಲ್ಲಿ ಆರಂಭವಾದ Wrogn ಇಂದು ಭಾರತದ ಜನಪ್ರಿಯ ಕ್ಯಾಶುಯಲ್ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಟ್ರೆಂಡಿ ಟಿ-ಶರ್ಟ್‌, ಜೀನ್ಸ್‌, ಜಾಕೆಟ್‌, ಶೂಸ್‌ ಮತ್ತು ಆಕ್ಸೆಸರೀಸ್‌ಗಳನ್ನು ಈ ಬ್ರ್ಯಾಂಡ್ ಮಾರಾಟ ಮಾಡುತ್ತದೆ.

One8 ಸ್ಪೋರ್ಟ್ಸ್‌ವೇರ್ ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್ One8 ವಿರಾಟ್ ಕೊಹ್ಲಿಯ ಅತ್ಯಂತ ದೊಡ್ಡ ಬ್ರ್ಯಾಂಡ್‌. ಆರಂಭದಲ್ಲಿ ಅಥ್ಲೀಷರ್ ಮತ್ತು ಸ್ಪೋರ್ಟ್ಸ್‌ವೇರ್ ಬ್ರ್ಯಾಂಡ್ ಆಗಿದ್ದ ಇದು ಈಗ ಶೂಗಳು, ಪರಿಮಳ ಉತ್ಪನ್ನಗಳು, ಲೈಫ್‌ಸ್ಟೈಲ್ ಉತ್ಪನ್ನಗಳು.

One8 Commune ರೆಸ್ಟೋರೆಂಟ್ ಸರಣಿ, One8 Commune ಭಾರತದ ಹಲವು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೀಮಿಯಂ ರೆಸ್ಟೋರೆಂಟ್ ಸರಣಿಯಾಗಿದೆ. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಇದರ ಶಾಖೆಗಳಿವೆ. ಉತ್ತಮ ಆಹಾರ ಮತ್ತು ಐಷಾರಾಮಿ ವಾತಾವರಣದಿಂದ ಈ ರೆಸ್ಟೋರೆಂಟ್‌ಗಳು ಜನಪ್ರಿಯವಾಗಿವೆ.

Chisel ಫಿಟ್ನೆಸ್ ಜಿಮ್ ಚೈನ್ ಫಿಟ್ನೆಸ್‌ಗೆ ಹೆಚ್ಚಿನ ಮಹತ್ವ ನೀಡುವ ವಿರಾಟ್ Chisel Fitness ಜಿಮ್ ಸರಣಿಯಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದಾರೆ. ಆಧುನಿಕ ಜಿಮ್‌, ವೈಯಕ್ತಿಕ ತರಬೇತಿ ಮತ್ತು ಫಿಟ್ನೆಸ್ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆ ದೇಶದ ವಿವಿಧ ನಗರಗಳಲ್ಲಿ ಸೇವೆ ನೀಡುತ್ತಿದೆ.

Blue Tribe Foods, Digit Insurance ಸೇರಿದಂತೆ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ

ಇಂಡಿಯನ್ ಸೂಪರ್ ಲೀಗ್ ತಂಡ FC Goaಯಲ್ಲಿ ಹೂಡಿಕೆದಾರರಾಗಿದ್ದಾರೆ.

25
ಎಂ.ಎಸ್. ಧೋನಿ – ಕ್ಯಾಪ್ಟನ್ ಕೂಲ್‌ನ ಬಿಸಿನೆಸ್ ಸಾಮ್ರಾಜ್ಯ

ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ಎಂ.ಎಸ್. ಧೋನಿ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಅವರ ಪ್ರಮುಖ ಉದ್ಯಮಗಳು:

SEVEN ಸ್ಪೋರ್ಟ್ಸ್‌ವೇರ್ ಬ್ರ್ಯಾಂಡ್, 2016ರಲ್ಲಿ ಧೋನಿ SEVEN ಎಂಬ ಸ್ಪೋರ್ಟ್ಸ್ ಹಾಗೂ ಲೈಫ್‌ಸ್ಟೈಲ್ ಬ್ರ್ಯಾಂಡ್ ಅನ್ನು ಪರಿಚಯಿಸಿದರು. ಈ ಬ್ರ್ಯಾಂಡ್‌ನಲ್ಲಿ ಕ್ರೀಡಾ ಉಡುಪುಗಳು, ಶೂಗಳು, ಟಿ-ಶರ್ಟ್‌, ಟ್ರ್ಯಾಕ್‌ಸೂಟ್‌, ಜಿಮ್‌ವೇರ್ ಹಾಗೂ ಆಕ್ಸೆಸರೀಸ್‌ಗಳು ಲಭ್ಯ.

SportsFit World ಜಿಮ್ ಚೈನ್, ಫಿಟ್ನೆಸ್‌ಗೆ ಹೆಚ್ಚಿನ ಒತ್ತು ನೀಡುವ ಧೋನಿ SportsFit World ಜಿಮ್ ಸರಣಿಯಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ. ದೇಶದ ಹಲವು ನಗರಗಳಲ್ಲಿ ಈ ಫಿಟ್ನೆಸ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಆಧುನಿಕ ಜಿಮ್‌, ಪರ್ಸನಲ್ ಟ್ರೈನಿಂಗ್ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ.

Dhoni Entertainment Pvt Ltd ಸಿನಿಮಾ ನಿರ್ಮಾಣ ಸಂಸ್ಥೆ, 2020ರಲ್ಲಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸೇರಿ Dhoni Entertainment Pvt Ltd ಅನ್ನು ಆರಂಭಿಸಿದರು. ಈ ಸಂಸ್ಥೆ ವೆಬ್‌ಸಿರೀಸ್‌, ಸಿನಿಮಾಗಳು ಮತ್ತು ಡಿಜಿಟಲ್ ಕಂಟೆಂಟ್ ನಿರ್ಮಾಣದಲ್ಲಿ ತೊಡಗಿದೆ.

Khatabook ಸೇರಿದಂತೆ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ

ಆಹಾರ ಮತ್ತು ಪಾನೀಯ ಕ್ಷೇತ್ರದ ಕಂಪನಿಗಳಲ್ಲೂ ಪಾಲುದಾರಿಕೆ.

35
ಸಚಿನ್ ತೆಂಡೂಲ್ಕರ್ – ಹೂಡಿಕೆಗಳ ಮೂಲಕ ಯಶಸ್ಸು

'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ನಿವೃತ್ತಿಯ ಬಳಿಕ ಹೂಡಿಕೆದಾರರಾಗಿ ಹೊಸ ಅಧ್ಯಾಯ ಆರಂಭಿಸಿದರು.

ಅವರ ಪ್ರಮುಖ ಉದ್ಯಮಗಳು:

ಹಿಂದೆ Tendulkar's ಹೆಸರಿನ ರೆಸ್ಟೋರೆಂಟ್

Smaaash ಸ್ಪೋರ್ಟ್ಸ್ ಮತ್ತು ವರ್ಚುವಲ್ ರಿಯಾಲಿಟಿ ಎಂಟರ್‌ಟೈನ್‌ಮೆಂಟ್ ಕಂಪನಿಯಲ್ಲಿ ಹೂಡಿಕೆ

Smartron ಟೆಕ್ ಕಂಪನಿಯಲ್ಲಿ ಹೂಡಿಕೆ ಮತ್ತು ಬ್ರ್ಯಾಂಡ್ ಅಂಬಾಸಿಡರ್

Unacademy, Spinny, JetSynthesys ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

45
ವೀರೇಂದ್ರ ಸೆಹ್ವಾಗ್ – ಶಿಕ್ಷಣ ಮತ್ತು ಹೋಟೆಲ್ ಉದ್ಯಮ

ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಸೆಹ್ವಾಗ್, ಉದ್ಯಮದಲ್ಲೂ ತಮ್ಮದೇ ಗುರುತು ಮೂಡಿಸಿದ್ದಾರೆ.

ಅವರ ಪ್ರಮುಖ ಉದ್ಯಮಗಳು:

Sehwag's Favourites ರೆಸ್ಟೋರೆಂಟ್

Sehwag International School ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ

ವಿವಿಧ ಸಾಮಾಜಿಕ ಮತ್ತು ಉದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

55
ಯುವರಾಜ್ ಸಿಂಗ್ – ಕ್ಯಾನ್ಸರ್ ವಿರುದ್ಧ ಹೋರಾಟದಿಂದ ಸ್ಟಾರ್ಟ್‌ಅಪ್ ಹೂಡಿಕೆದಾರನ ತನಕ

ಕ್ಯಾನ್ಸರ್‌ನಿಂದ ಗುಣಮುಖರಾದ ಬಳಿಕ ಯುವರಾಜ್ ಸಿಂಗ್ ಉದ್ಯಮ ಕ್ಷೇತ್ರದಲ್ಲಿ ಹೊಸ ಗುರುತು ನಿರ್ಮಿಸಿದರು.

ಅವರ ಪ್ರಮುಖ ಉದ್ಯಮಗಳು:

YouWeCan Foundation ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವು

YouWeCan Ventures ಮೂಲಕ ಅನೇಕ ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ

Healthians, Holosuite ಸೇರಿದಂತೆ ಹಲವು ಕಂಪನಿಗಳಿಗೆ ಬೆಂಬಲ

Sports365.in ಸ್ಪೋರ್ಟ್ಸ್ ಇ-ಕಾಮರ್ಸ್ ವೇದಿಕೆ

YWC ಲೈಫ್‌ಸ್ಟೈಲ್ ಬ್ರ್ಯಾಂಡ್ ಆರಂಭಿಸಿದ್ದಾರೆ.

ಕ್ರಿಕೆಟ್‌ನಿಂದ ಕಾರ್ಪೊರೇಟ್‌ವರೆಗೆ ಯಶಸ್ಸಿನ ಪಯಣ

ಈ ಐವರು ಕ್ರಿಕೆಟಿಗರು ಕೇವಲ ಮೈದಾನದಲ್ಲಿ ಮಾತ್ರವಲ್ಲ, ಉದ್ಯಮ ಲೋಕದಲ್ಲೂ ತಮ್ಮದೇ ಬ್ರ್ಯಾಂಡ್ ನಿರ್ಮಿಸಿಕೊಂಡಿದ್ದಾರೆ. ಸರಿಯಾದ ಹೂಡಿಕೆ, ಹೊಸ ಆಲೋಚನೆ ಮತ್ತು ಬ್ರ್ಯಾಂಡ್ ಮೌಲ್ಯದ ಮೂಲಕ ಅವರು ಯಶಸ್ವಿ ಉದ್ಯಮಿಗಳಾಗಿರುವುದು ಅನೇಕ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories