ICC T20 World Cup: ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 10 ಕ್ರಿಕೆಟಿಗರು..!

Published : Oct 10, 2022, 03:47 PM IST

ಬೆಂಗಳೂರು(ಅ.10): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ನಡೆದಿದ್ದು, ಹೊಡಿಬಡಿಯಾಟದಲ್ಲಿ ಹಲವು ಕ್ರಿಕೆಟಿಗರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈವರೆಗೂ ಒಟ್ಟು 7 ಟಿ20 ವಿಶ್ವಕಪ್ ಟೂರ್ನಿಯು ಜರುಗಿದ್ದು, ಲಂಕಾದ ಮಹೇಲಾ ಜಯವರ್ಧನೆ, ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟರ್‌ಗಳ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ...  

PREV
110
ICC T20 World Cup: ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 10 ಕ್ರಿಕೆಟಿಗರು..!
1. ಮಹೇಲಾ ಜಯವರ್ಧನೆ: 1,016 ರನ್

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳನ್ನಾಡಿ 1 ಶತಕ ಹಾಗೂ 6 ಅರ್ಧಶತಕ ಸಹಿತ 39.07ರ ಬ್ಯಾಟಿಂಗ್‌ ಸರಾಸರಿಯಲ್ಲಿ 1,016 ರನ್‌ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

210
2. ಕ್ರಿಸ್ ಗೇಲ್‌: 965 ರನ್‌

ಯೂನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌, 33 ಟಿ20 ವಿಶ್ವಕಪ್ ಪಂದ್ಯಗಳನ್ನಾಡಿ 2 ಶತಕ ಹಾಗೂ 7 ಅರ್ಧಶತಕ ಸಹಿತ 34.36ರ ಬ್ಯಾಟಿಂಗ್ ಸರಾಸರಿಯಲ್ಲಿ 965 ರನ್ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

310
3. ತಿಲಕರತ್ನೆ ದಿಲ್ಷ್ಯಾನ್‌: 847 ರನ್‌

ಲಂಕಾದ ಮತ್ತೋರ್ವ ಸ್ಪೋಟಕ ಬ್ಯಾಟರ್ ತಿಲಕರತ್ನೆ ದಿಲ್ಷ್ಯಾನ್‌, 35 ಪಂದ್ಯಗಳನ್ನಾಡಿ, 6 ಅರ್ಧಶತಕ ಸಹಿತ 30.93ರ ಬ್ಯಾಟಿಂಗ್ ಸರಾಸರಿಯಲ್ಲಿ 897 ರನ್ ಬಾರಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

410
4. ರೋಹಿತ್ ಶರ್ಮಾ: 847 ರನ್

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಆವೃತ್ತಿಯಿಂದಲೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, 8 ಅರ್ಧಶತಕ ಸಹಿತ 38.50ರ ಬ್ಯಾಟಿಂಗ್ ಸರಾಸರಿಯಲ್ಲಿ 847 ರನ್ ಬಾರಿಸಿದ್ದು, ಈ ಬಾರಿ ಅಬ್ಬರಿಸಿದರೆ, ಜಯವರ್ಧನೆ ದಾಖಲೆ ಮುರಿಯಬಹುದು.

510
5. ವಿರಾಟ್ ಕೊಹ್ಲಿ: 845 ರನ್

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 21 ಪಂದ್ಯಗಳನ್ನಾಡಿ 10 ಅರ್ಧಶತಕ ಸಹಿತ 76.81ರ ಬ್ಯಾಟಿಂಗ್ ಸರಾಸರಿಯಲ್ಲಿ 845 ರನ್ ಸಿಡಿಸಿದ್ದಾರೆ. 
 

610
6. ಡೇವಿಡ್ ವಾರ್ನರ್: 762 ರನ್‌

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌, 30 ಪಂದ್ಯಗಳನ್ನಾಡಿ 6 ಅರ್ಧಶತಕ ಸಹಿತ 27.21ರ ಬ್ಯಾಟಿಂಗ್ ಸರಾಸರಿಯಲ್ಲಿ 762 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ

710
7. ಎಬಿ ಡಿ ವಿಲಿಯರ್ಸ್‌: 717 ರನ್‌

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡಿವಿಲಿಯರ್ಸ್‌, ಒಟ್ಟು 30 ಪಂದ್ಯಗಳನ್ನಾಡಿ 5 ಅರ್ಧಶತಕ ಸಹಿತ 29.87ರ ಬ್ಯಾಟಿಂಗ್ ಸರಾಸರಿಯಲ್ಲಿ 717 ರನ್ ಬಾರಿಸಿ, ಈ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ.

810
8. ಶಕೀಬ್ ಅಲ್ ಹಸನ್‌: 698 ರನ್

ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್‌, 31 ಪಂದ್ಯಗಳನ್ನಾಡಿ 3 ಅರ್ಧಶತಕ ಸಹಿತ 26.84ರ ಬ್ಯಾಟಿಂಗ್ ಸರಾಸರಿಯಲ್ಲಿ 698 ರನ್ ಬಾರಿಸಿ 8ನೇ ಸ್ಥಾನದಲ್ಲಿದ್ದಾರೆ.

910
9. ಕುಮಾರ ಸಂಗಕ್ಕರ: 661 ರನ್‌

ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ 31 ಪಂದ್ಯಗಳನ್ನಾಡಿ 4 ಅರ್ಧಶತಕ ಸಹಿತ 25.42ರ ಬ್ಯಾಟಿಂಗ್ ಸರಾಸರಿಯಲ್ಲಿ 661 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

1010
10. ಶೋಯೆಬ್ ಮಲಿಕ್: 646 ರನ್

ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, 34 ಪಂದ್ಯಗಳನ್ನಾಡಿ 3 ಅರ್ಧಶತಕ ಸಹಿತ 34.00ರ ಬ್ಯಾಟಿಂಗ್ ಸರಾಸರಿಯಲ್ಲಿ 646 ರನ್‌ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

Read more Photos on
click me!

Recommended Stories