Ban vs NZ Test Series: 10 ವಿಕೆಟ್‌ ವೀರ ಅಜಾಜ್‌ ಪಟೇಲ್‌ ಕಿವೀಸ್‌ ತಂಡದಿಂದ ಔಟ್‌!

First Published Dec 24, 2021, 4:29 PM IST

ವೆಲ್ಲಿಂಗ್ಟನ್‌: ಭಾರತ ವಿರುದ್ದ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ಸರಿಗಟ್ಟಿದ ಅಜಾಜ್‌ ಪಟೇಲ್ (Ajaz Patel) ಇದೀಗ ತವರಿನಲ್ಲಿ ಬಾಂಗ್ಲಾದೇಶ (Bangladesh Cricket) ವಿರುದ್ದ ಸರಣಿಯಿಂದ ಹೊರಬಿದ್ದಿದ್ದಾರೆ. ಅಜಾಜ್‌ ಪಟೇಲ್ ತಂಡದಿಂದ ಹೊರಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ (New Zealand Cricket Pitch) ಪಿಚ್ ಕುರಿತಂತೆ ಎಡಗೈ ಆಫ್‌ ಸ್ಪಿನ್ನರ್‌ ಅಜಾಜ್ ಪಟೇಲ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. 

ಟೀಂ ಇಂಡಿಯಾ ವಿರುದ್ದ ಮುಂಬೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದರೂ ಸ್ಪಿನ್ನರ್‌ ಅಜಾಜ್‌ ಪಟೇಲ್‌ ನ್ಯೂಜಿಲೆಂಡ್‌ ಟೆಸ್ಟ್‌ ತಂಡದಿಂದ ಹೊರಬಿದ್ದಿದ್ದಾರೆ. 

ಬಾಂಗ್ಲಾದೇಶ ವಿರುದ್ಧ ಜನವರಿ 1ರಿಂದ ತವರಿನಲ್ಲಿ ಆರಂಭಗೊಳ್ಳಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಆತಿಥೇಯ ಕಿವೀಸ್‌ ತಂಡ ಪ್ರಕಟಗೊಂಡಿದ್ದು, ಅಜಾಜ್‌ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆ ಕಾರಣ ಕೇನ್‌ ವಿಲಿಯಮ್ಸನ್‌ ಅಲಭ್ಯರಾಗಿದ್ದು, ಟಾಮ್‌ ಲೇಥಮ್‌ ತಂಡ ಮುನ್ನಡೆಸಲಿದ್ದಾರೆ.

ನ್ಯೂಜಿಲೆಂಡ್ ಪಿಚ್‌ಗಳು ವೇಗಿಗಳಿಗೆ ನೆರವು ನೀಡುವುದರಿಂದಾಗಿ, ಎಡಗೈ ಆಫ್‌ ಸ್ಪಿನ್ನರ್ ಅಜಾಜ್‌ ಪಟೇಲ್‌ ನ್ಯೂಜಿಲೆಂಡ್ ಆಯ್ಕೆ ಸಮಿತಿಯು ಟೆಸ್ಟ್ ತಂಡದೊಳಗೆ ಮಣೆ ಹಾಕಿಲ್ಲ. ಭಾರತ ವಿರುದ್ದ ಮಿಂಚಿನ ಪ್ರದರ್ಶನ ತೋರಿದ್ದರೂ ಸಹಾ ಅಜಾಜ್‌ಗೆ ಅವಕಾಶ ಸಿಗದೇ ಇದ್ದಿದ್ದು ಅಚ್ಚರಿಗೆ ಕಾರಣವಾಗಿದೆ. 

‘ನನ್ನನ್ನು ಆಯ್ಕೆ ಮಾಡದೆ ಇರಲು ಕಾರಣವೇನು ಎನ್ನುವುದು ನನಗೆ ತಿಳಿದಿದೆ. ಆದರೆ ನಮ್ಮ ಕ್ಯುರೇಟರ್‌ಗಳು ಕೇವಲ ವೇಗದ ಬೌಲಿಂಗ್‌ಗೆ ಸಹಕಾರಿಯಾಗುವ ಪಿಚ್‌ಗಳನ್ನಷ್ಟೇ ಅಲ್ಲ, ಸ್ಪಿನ್‌ ಸ್ನೇಹಿ ಪಿಚ್‌ಗಳನ್ನೂ ಸಿದ್ಧಪಡಿಸಬೇಕು’ ಎಂದು ಅಜಾಜ್‌ ಹೇಳಿದ್ದಾರೆ.

ಭಾರತ ವಿರುದ್ದದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಜಾಜ್ ಪಟೇಲ್ 119 ರನ್‌ ನೀಡಿ ಟೀಂ ಇಂಡಿಯಾದ ಎಲ್ಲಾ 10 ವಿಕೆಟ್ ಕಬಳಿಸಿದ್ದರು.

ಈ ಮೂಲಕ ಇಂಗ್ಲೆಂಡ್‌ನ ಜಿಮ್ ಲೇಕರ್ ಹಾಗೂ ಭಾರತದ ಅನಿಲ್‌ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಪ್ರತಿಷ್ಠಿತ 10 ವಿಕೆಟ್‌ಗೆ ಅಜಾಜ್ ಪಟೇಲ್ ಸೇರ್ಪಡೆಯಾಗಿದ್ದರು. ಅಜಾಜ್‌ ಪ್ರದರ್ಶನಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.
 

ಬಾಂಗ್ಲಾದೇಶ ವಿರುದ್ದದ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ: ಟಾಮ್ ಲೇಥಮ್(ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್‌ವೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಡೇರೆಲ್ ಮಿಚೆಲ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ವಿಲ್ ಯಂಗ್.

click me!