ಚಿತ್ರಗಳು: ಕೇವಲ 10 ನಿಮಿಷದಲ್ಲಿ ಮುಗಿದ ಮದ್ವೆ, ಈ ನವ ಜೋಡಿಗೆ ಶುಭ ಹಾರೈಸಿ

First Published | Apr 1, 2020, 7:28 PM IST
ಮದ್ವೆಯಾಗುವುದು ಜೀವನದಲ್ಲಿ ಒಂದೇ ಬಾರಿ. ಹೀಗಾಗಿ ಮದುವೆ ಎಂಬುವುದು ಭಾರತೀಯರಿಗೆ ಇನ್ನಿಲ್ಲದ ಸಡಗರ-ಸಂಭ್ರಮದ ಸಮಾರಂಭ. ಅದರಲ್ಲೂ ಯಾವುದೇ ಕೊರತೆ ಉಂಟಾಗಬಾರದು ಎಂದೇ ಪ್ರತಿಯೊಬ್ಬರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮದ್ವೆಗೆ ತಿಂಗಳು ಇರುವ ಮುಂಚೆಯೇ ತಯಾರಿ ಶುರುವಾಗಲಿದ್ದು,  ಸಂಭ್ರಮ ಹೆಚ್ಚಿಸುವ ಭರದಲ್ಲಿ ನಾವು ನಮ್ಮ ಉಳಿತಾಯದ ಹಣವನ್ನೆಲ್ಲ ಖಾಲಿ ಮಾಡಿ ಬಿಡುತ್ತೇವೆ.  ಆದ್ರೆ, ಇಲ್ಲೊಂದು ಮದ್ವೆ ಕೇವಲ ಹತ್ತೇ-ಹತ್ತು ನಿಮಿಷದಲ್ಲಿ ಮುಗಿದುಹೋಗಿದೆ. ಅಚ್ಚರಿ ಎನಿಸಿದರೂ ಸತ್ಯ.
ಎರಡು ಜೋಡಿಗಳ ವಿವಾಹ ಸೋಮವಾರ ಕುಟುಂಬ ಸದಸ್ಯರು ಮತ್ತು ಕೆಲ ಆಪ್ತರ ಸಮ್ಮುಖದಲ್ಲಿ ಕೇವಲ ಹತ್ತೇ ನಿಮಿಷದಲ್ಲಿ ನೆರವೇರಿತು.
ಕೊರೋನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಇರುವುದರಿಂದ ಮೊದಲೇ ನಿಶ್ಚಯವಾಗಿದ್ದ ಮದುವೆಯನ್ನು ಅತಿ ಸರಳ ಮತ್ತು ಸಂಕ್ಷಿಪ್ತವಾಗಿ ಮುಗಿಸಲಾಯಿತು.
Tap to resize

ರಟಕಲ್‍ನ ಮಲ್ಲಿಕಾರ್ಜುನ ಮತ್ತು ಯಶೋಧಾ ಹಾಗೂ ಲಲಿತಾ ಮತ್ತು ಮಹೇಶ ಅವರ ವಿವಾಹ ಈ ಹಿಂದೆಯೇ ನಿಶ್ಚಯಿಸಲಾಗಿತ್ತು.
ಲಾಕ್‍ಡೌನ್ ನಿಯಮ ಪಾಲಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ವಿವಾಹ ರದ್ದುಪಡಿಸಿ ಮುಂಜಾಗ್ರತಾ ಕ್ರಮಗಳೊಂದಿಗೆ ವಧು-ವರರ ಮನೆಯವರು ಸೇರಿ ವಧುವಿನ ಮನೆಯಲ್ಲಿ ನಿಶ್ಚಯಿಸಿದ ಮಹೂರ್ತದಲ್ಲಿ ಮದುವೆ ಶಾಸ್ತ್ರ ಮುಗಿಸಿದರು.
ಅಷ್ಟಕ್ಕೂ ಇದು ನಡೆದಿದ್ದು ಕಲಬುರಗಿ ಜಿಲ್ಲೆಉ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ
ಕೊರೋನಾ ಭೀತಿಯ ಮಧ್ಯೆ ಸರ್ಕಾರದ ನಿಯಮ ಪಾಲಿಸಿದ ರಟಕಲ್ ಗಾಮದ ಹಿರಿಯರ ಮತ್ತು ವಧು ವರರ ಮನೆಯವರ ನಿರ್ಧಾರವನ್ನು ಶ್ಲಾಘಿಸಲಾಯಿತು.

Latest Videos

click me!