ಯಡಿಯೂರಪ್ಪ ಜತೆ ಪ್ರಧಾನಿ ಮೀಟಿಂಗ್: ಬಿಎಸ್‌ವೈಗೆ ಮೋದಿ ಕೊಟ್ಟ ಖಡಕ್ ಸೂಚನೆಗಳಿವು

First Published | Apr 2, 2020, 9:46 PM IST
ದೇಶದಲ್ಲಿ ವ್ಯಾಪಿಸುತ್ತಿರುವ ಕೊರೋನಾ ಮಾಹಾಮಾರಿಯನ್ನು ಕಟ್ಟಿಹಾಕು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ವೇಳೆ ನಮ್ಮ ರಾಜ್ಯದ ಸಿಎಂ ಬಿಎಸ್ ಯಡಿಯೂರಪ್ಪಗೆ ಕೆಲವೊಮದಿಷ್ಟು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಹಾಗಾದ್ರೆ ಮೋದಿ ಬಿಎಸ್‌ವೈಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ಯಡಿಯೂಪ್ಪನವರ ಬಾಯಿಂದಲೇ ಕೇಳಿ.
ಕೊರೋನಾ ವೈರಸ್ ನಿಯಂತ್ರಣಕ್ಕೆ ಮೋದಿ ಕೊಟ್ಟ ಕೆಲ ಸಲಹೆಗಳನ್ನು ಬಿಎಸ್‌ವೈ ಮಾಧ್ಯಮಗಳ ಜತೆ ಹಂಚಿಕೊಂಡರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕಾನ್ಫರೆನ್ಸ್ ಮಾಡಿದರು. ಕೊರೊನಾ ಲಾಕ್ ಡೌನ್ ಬಗ್ಗೆ ಮಾತನಾಡಿ ಯಾರಾದರೂ‌ ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ
Tap to resize

ವಲಸಿಗರನ್ನ ಪ್ರತ್ಯೇಕವಾಗಿರಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಬಾರದು
ಜನರಿಗೆ ಪ್ರತ್ಯೇಕ ಆಸ್ಪತ್ರೆ ಬಗ್ಗೆ ತಿಳಿಸಬೇಕು. ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಬ್ಯಾಂಕ್ ನೂಕು‌ನುಗ್ಗಲು ತಡೆಯುವುದು. ರೈತರ ಸಮಸ್ಯೆ ಪರಿಹರಿಸುವಂತೆ ನಮಗೆ ಸೂಚಿಸಿದರು
ರಾಜ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾವು ದೇಶದಲ್ಲಿ 9ನೇ ಸ್ಥಾನದಲ್ಲಿದ್ದೇವೆ ಎಂದರು‌.
ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಂವಾದದ ಮುಖ್ಯಾಂಶಗಳು ಇವು.

Latest Videos

click me!