Published : Apr 02, 2020, 09:02 PM ISTUpdated : Apr 02, 2020, 09:06 PM IST
ಎಲೆಕ್ಷನ್ ಇದ್ದಾಗ ಮತದಾನದ ದಿನ ಬಂದು ವೋಟು ಮಾಡಿ, ನಾವು ವಾಹನ ಕಳುಹಿಸಿಕೊಡುತ್ತೇವೆ, ನಂತರ ನಾವೇ ನಿಮ್ಮನ್ನು ಅದೇ ವಾಹನದಲ್ಲಿ ಬಿಟ್ಟು ಬರ್ತೇವೆ ಅಂತ ಕೈಕಾಲು ಹಿಡಿಯುವ ಜನಪ್ರತಿನಿಧಿಗಳು. ಆದ್ರೆ, ತನ್ನ ಮತದಾರನಿಗೆ ಕಷ್ಟ ಬಂದಾಗ ಕ್ಯಾರೇ ಎನ್ನದವರು ಹೆಚ್ಚು. ಇದೀಗ ಕೊರೋನಾ ಮಾಹಾಮಾರಿಯಿಂದ ಹಲವು ಬಡ, ನಿರ್ಗತಿಕ ಜನರು ಊಟ ಇಲ್ಲದೇ ಸಂಕಷ್ಟದಲ್ಲಿದ್ದಾರೆ.ಕೆಲ ರಾಜಕಾರಣಿಗಳು ಮಾತ್ರ ತಮಗೆ ಕೊರೋನಾ ಬಂದು ಬಿಡ್ತೋ ಎನ್ನುವ ರೀತಿಯಲ್ಲಿ ಮನೆಯೊಳಗೆ ಬೆಚ್ಚಗೆ ಮಲಗಿದ್ದಾರೆ. ಮತ್ತೊಂದೆಡೆ ಕೃಷ್ಣಬೈರೇಗೌಡ್ರು ತಮ್ಮ ವಾಹನದಲ್ಲಿ ತಿರುಗಾಡಿ ಬಡವರ ಸಂಕಷ್ಟವನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.