ಕೊರೋನಾ ಮಹಾಮಾರಿ ತೊಲಗಿಸಲು ಭಾರತವನ್ನೇ ಲಾಕ್‌ಡೌನ್ ಮಾಡಲಾಗಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಮೋದಿ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ದೇಶದ 9 ಗಂಟೆಗೆ ಭಾರತದ ಎಲ್ಲರ ಮನೆ-ಮನಗಳಲ್ಲಿ ದೀಪ ಬೆಳಗಿತು. ಈ ಮೂಲಕ ಕೊರೋನಾ ಹೋರಾಟದಲ್ಲಿ ಭಾರತದ 130 ಕೋಟಿ ಜನ ಒಗ್ಗಾಟ್ಟಾಗಿದ್ದೇವೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿತು. ಸ್ವತಃ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನಾಯಕರ ಏಕತಾ ದೀಪದ ಬೆಳಕು ಇಲ್ಲಿದೆ.