ನನ್ನ ಭಾರತ ಬೆಳಗುತಿರಲಿ: ಕೊರೋನಾ ಸಮರಕ್ಕೆ ಮತ್ತೆ ಒಗ್ಗಟ್ಟಿನ ಮಂತ್ರ!

First Published | Apr 6, 2020, 7:58 AM IST

ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೋನಾ ವೈರಸ್‌ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ದೀಪ ಹಚ್ಚುವ ಆಂದೋಲನಕ್ಕೆ ನಿರೀಕ್ಷೆಯಂತೆಯೇ ಅಭೂತಪೂರ್ವ ಸ್ಪಂದನೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ದೇಶದ ಮೂಲೆ ಮೂಲೆಯಲ್ಲೂ ದೀಪಗಳು ಬೆಳಗಿವೆ. ಸಿನಿ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಮಾತ್ರವಲ್ಲದೇ ದೇಶದ ಪ್ರತಿಯೊಬ್ಬ ನಾಗರಿಕರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಂದು ಕೊರೋನಾ ಯೋಧರಿಗೆ ಅಭಿನಂದಿಸಿ ಚಪ್ಪಾಳೆ ಹೊಡೆಯಲು ಭಿಕ್ಷುಕನೂ ಸಾಥ್ ನೀಡಿದ್ದ, ಈ ಬಾರಿ ರಸ್ತೆ ಬದಿಯ ಜೋಪಡಿಗಳಿಂದಲೂ ದೀಪದ ಬೆಳಕು ಹರಡಿತ್ತು. ಇಲ್ಲಿದೆ ನೋಡಿ, ಭಾರತ ಬೆಳಗಿದ ಒಂದು ನೋಟ

ಕೊರೋನಾ ಸಮರಕ್ಕೆ ಸಾಥ್ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷಕ್ಕೆ ದೀಪ ಬೆಳಗಿಸಿ ಎಂದು ಕೊಟ್ಟ ಕರೆಗೆ ಸಿಕ್ಕ ಅಭೂತಪೂರ್ವ ಬೆಂಬಲ.
undefined
ದೇಶದ ಮೂಲೆ ಮೂಲೆಯಲ್ಲೂ ದೀಪದ ಬೆಳಕು ಪಸರಿಸಿದೆ.
undefined

Latest Videos


ಬಡ ವರ್ಗದ ಜನರೂ ತಮ್ಮ ಮನೆ ಬಾಗಿಲಿನಲ್ಲಿ ದೀಪ ಬೆಳಗಿ ಒಗ್ಗಟ್ಟ ಪ್ರದರ್ಶಿಸಿದ್ದಾರೆ.
undefined
ರಸ್ತೆ ಬದಿಯ ಜೋಪಡಿಗಳಲ್ಲೂ ಕಂಡು ಬಂದ ದೀಪದ ಬೆಳಕು.
undefined
ಒಗ್ಗಟ್ಟಿನ ಮಂತ್ರ ಜಪಿಸಿದ ಭಾರತೀಯರು.
undefined
ನನ್ನ ಭಾರತ ಯಾವತ್ತೂ ಬೆಳಗುತ್ತಿರಲಿ ಎಂಬ ಸಂದೇಶ ಕೊಟ್ಟ ಬಡ ವರ್ಗದ ಜನ
undefined
ಮನೆಯ ಬಾಗಿಲಲ್ಲಿ ದೀಪ ಬೆಳಗಿದ ವೃದ್ಧ ದಂಪತಿ.
undefined
ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರುಬಡ್ನಿಯಲ್ಲಿ ದೀಪ ಬೆಳಗಿಸಿದ ಸಿಂಗರ್ ಹನುಮಂತ. ಕುರಿಗಾಯಿ‌ ಸಿಂಗರ್ ಮನೆಯ ಮುಂದೆ ಕುಟುಂಬದ ಸದಸ್ಯರ ಜೊತೆಗೆ ದೀಪ ಬೆಳೆಗಿದ ಹನುಮಂತ ಲಮಾಣಿ. ದೀಪ ಬೆಳಗಿಸೋ ಮೂಲಕ ಕೊರೊನಾ ಸೋಂಕು ಹರಡೋದನ್ನ ತಡೆಯುವಂತೆ ಮನವಿ.
undefined
ಸದ್ಯ ಈ ಎಲ್ಲಾ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ಒಗ್ಗಟ್ಟು ಕೊರೋನಾ ಮಾತ್ರವಲ್ಲ ಅದೆಷ್ಟೇ ದೊಡ್ಡ ಸಂಕಟವಿದ್ದರೂ ನಾವೆಲ್ಲಾ ಒಂದಾಗಿ ಎದುರಿಸುತ್ತೇವೆ ಎಂಬ ಸಂದೇಶ ನೀಡಿದೆ.
undefined
click me!