ಕೊರೋನಾ ಚಿಕಿತ್ಸೆಗೆ 2 ವಾರದಲ್ಲಿ ಆಸ್ಪತ್ರೆ ಕಟ್ಟಿದ ಅಂಬಾನಿ: ಹೀಗಿದೆ ಹಾಸ್ಪಿಟಲ್!

First Published Mar 24, 2020, 3:00 PM IST

ಕೊರೋನಾ ವಿರುದ್ಧದ ಸಮರಕ್ಕರೆಭಾರತ ಒಂದಾಗಿ ಹೋರಾಟ ಆರಂಭಿಸಿದೆ. ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಇದೀಗ ಉದ್ಯಮಿಗಳೂ ಕೊರೋನಾ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಅನಿಲ್‌ ಅಗರ್‌ವಾಲ್ ನೂರು ಕೋಟಿ ಸೋಂಕಿತರ ಚಿಕಿತ್ಸೆಗೆ ನೀಡಿದ್ದ ಬೆನ್ನಲಲ್ಲೇ ಆನಂದ್ ಮಹೀಂದ್ರಾ ಕೂಡಾ ಈ ನಿಟ್ಟಿನಲ್ಲಿ ತಮ್ಮ ಸಹಾಯವನ್ನು ಘೋಷಿಸಿದ್ದರು. ಇದೀಗ ರಿಲಾಯನ್ಸ್ ಒಡೆಯ ಅಂಬಾನಿ ಸೋಂಕಿತರಿಗೆಂದೇ ಹೊಸ ಆಸ್ಪತ್ರೆ ನಿರ್ಮಿಸಿದ್ದಾರೆ. 

ಕೊರೊನಾ ವೈರಸ್​ನ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ದೇಶದ ಉದ್ಯಮಿಗಳು ತನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ.
undefined
ವೆಂಡೇಟಾದ ಚೇರ್​​ಮನ್​ ಅನಿಲ್​ ಅಗರ್​ವಾಲ್​, ಕೊರೊನಾ ವಿರುದ್ಧ ಹೋರಾಡಲು ನೂರು ಕೋಟಿ ನೀಡುವುದಾಗಿ ಘೋಷಿಸಿದ್ದಾರೆ.
undefined
ಮತ್ತೊಂದೆಡೆ ಆನಂದ್ ಮಹೀಂದ್ರಾ ಕೂಡಾ ವೆಂಟಿಲೇಟರ್ ನಿರ್ಮಿಸುವಲ್ಲಿ ಕೈಲಾದ ಸಹಾಯ ಮಾಡುತ್ತೇನೆ ಹಾಗೂ ರೆಸಾರ್ಟ್‌ಗಳನ್ನು ಕೆಲ ದಿನಗಳಿಗೆ ಆಸ್ಪತ್ರೆಗಳಾಗಿ ಮಾರ್ಪಾಡು ಮಾಡುತ್ತೇನೆ ಎಂದಿದ್ದಾರೆ.
undefined
ಹೀಗಿರುವಾಗ ಇತ್ತ ರಿಲಾಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್​ ಅಂಬಾನಿ ಕೂಡ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಕೆಲಸ ಆರಂಭಿಸಿದ್ದಾರೆ.
undefined
ಈಗಾಗಲೇ ಮಹಾರಾಷ್ಟ್ರ ಸಿಎಂ ನಿಧಿಗೆ ಐದು ಕೋಟಿ ನೀಡಿರುವ ಮುಖೇಶ್​ ಅಂಬಾನಿ, ಮುಂಬೈ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಹೆಚ್​.ಎನ್​ ರಿಲಾಯನ್ಸ್​ ಫೌಂಡೇಶನ್​ ಆಸ್ಪತ್ರೆಯನ್ನು ಕೊರೊನಾ ವೈರಸ್​ನ ನಿಗ್ರಹಕ್ಕೆಂದೇ ನಿರ್ಮಿಸಿದ್ದಾರೆ.
undefined
ಮುಂಬೈನ ಸೆವೆನ್​ ಹಿಲ್ಸ್​ ಏರಿಯಾದಲ್ಲಿ, ಕೇವಲ ಎರಡೇ ವಾರದಲ್ಲಿ ಈ ನೂತನ ಆಸ್ಪತ್ರೆ ತಲೆ ಎತ್ತಿದೆ.
undefined
ವಿಶೇಷವೆಂದರೆ ಈ ಆಸ್ಪತ್ರೆ ನೆಗೆಟಿವ್ ಪ್ರೆಷರ್​ ರೂಮ್​ ಸೌಲಭ್ಯವನ್ನೂ ಹೊಂದಿದೆ.
undefined
ಅಲ್ಲದೆ ಲೋದಿವಲಿಯಲ್ಲಿ ಆರ್​ಐಎಲ್​ ಇಂಡಸ್ಟ್ರಿಯ ವತಿಯಿಂದ ಐಸೋಲೇಷನ್​ ಫೆಸಿಲಿಟಿಯನ್ನು ತೆರೆಯಲಾಗಿದೆ.
undefined
ಮತ್ತೊಂದೆಡೆ ರಿಲಾಯನ್ಸ್​ ತಮ್ಮ ಸಂಸ್ಥೆಗಳ ಮೂಲಕ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್​ಗಳನ್ನು ತಯಾರಿಸುತ್ತಿದೆ.
undefined
ಹೀಗೆ ಕೊರೊನಾದ ವಿರುದ್ಧದ ಹೋರಾಟಕ್ಕೆ ನೆರವಾಗಲು ಮುಖೇಶ್​ ಅಂಬಾನಿಯ ಸಂಸ್ಥೆ ಹಲವು ರೀತಿಯಲ್ಲಿ ಶ್ರಮವಹಿಸುತ್ತಿದೆ
undefined
click me!