ಚಿತ್ರಗಳು: ಕೊರೋನಾ ಸೋಂಕಿತರಿಗೆ ರೈಲು ಬೋಗಿಯಲ್ಲಿ ರೆಡಿಯಾಯ್ತು ಐಸೋಲೇಶನ್ ವಾರ್ಡ್

First Published | Mar 28, 2020, 4:30 PM IST

ದೇಶದಲ್ಲಿ ಗಂಟೆಗೊಮ್ಮೆ ರಕ್ತಬೀಜಾಸುರನಂತೆ ಕೊರೋನಾ ಸೋಂಕಿತರ ಸಂಖ್ಯೆಗಳು ಹುಟ್ಟಿಕೊಳ್ಳುತ್ತಿವೆ. ಲಾಕ್‌ಡೌನ್ ಮಾಡಿದ್ರೂ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಎಲ್ಲಿ ಮೂರನೇ ಹಂತಕ್ಕೆ ತಲುಪಿಡುತ್ತೋ ಎನ್ನುವ ಆತಂಕ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಜತೆಗೆ ರೈಲ್ವೆ ಇಲಾಖೆಯೂ ಕೈ ಜೋಡಿಸಿದ್ದು, ಬೋಗಿಗಳಲ್ಲಿ ಕೊರೋನಾ ಸೋಂಕಿತರಿಗೆ ಮತ್ತು ಶಂಕಿತರಿಗಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುದೆ. ಎಲ್ಲಿ..? ಏನು..? ಹೇಗಿರಲಿದೆ ಎನ್ನುವ ಮಾಹಿತಿ ಚಿತ್ರಗಳೇ ತಿಳಿಸುತ್ತವೆ ನೋಡಿ.

ರೈಲಿನಲ್ಲಿರುವ ವಿವಿಧ ಬೋಗಿಗಳನ್ನ ಐಸೋಲೇಶನ್ ವಾರ್ಡ್​ಗಳಾಗಿ ಮಾರ್ಪಾಡು ಮಾಡಲು ಸಿದ್ಧ ಎಂದು ರೈಲ್ವೆ ಇಲಾಖೆ ಹೇಳಿದೆ. ಈಗಾಗಲೇ ಕೆಲ ಪ್ರೋಟೋಟೈಪ್​ಗಳನ್ನ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿಕೊಟ್ಟಿದೆ.
undefined
ಪೇಷೆಂಟ್ ಇರುವ ಕ್ಯಾಬಿನ್​ನಲ್ಲೂ ಮೇಲೇರುವ ಏಣಿಯನ್ನು ತೆಗೆಯಲಾಗಿದೆ. ಪ್ಲಾಸ್ಟಿಕ್ ಕರ್ಟನ್​ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ.
undefined

Latest Videos


ಹೆಚ್ಚುವರಿ ಬಾಟಲ್ ಹೋಲ್ಡರ್​ಗಳು, ಕೋಟ್ ಹ್ಯಾಂಗರ್​ಗಳನ್ನು ಹಾಕಲಾಗಿದೆ. ಮೆಡಿಕಲ್ ಉಪಕರಣ ಇಟ್ಟುಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ.
undefined
ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ಕೊಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.
undefined
ಇಂಡಿಯನ್ ಸ್ಟೈಲ್ ಟಾಯ್ಲೆಟ್​ಗಳನ್ನು ಬಾಥ್ ರೂಮ್ ಆಗಿ ಪರಿವರ್ತಿಸಲಾಗಿದೆ.
undefined
ಹ್ಯಾಂಡ್ ಶವರ್​ಗಳನ್ನ ಹಾಕಲಾಗಿದೆ.
undefined
ಕೆಳಗಿದ್ದ ಟ್ಯಾಪ್​ನ ಎತ್ತರವನ್ನು ಸಹ ಹೆಚ್ಚಿಸಲಾಗಿದೆ.
undefined
ಈ ಮಾದರಿಗೆ ಕೇಂದ್ರ ಸರ್ಕಾರ ಒಪ್ಪಿದರೆ ರೈಲ್ವೆ ಇಲಾಖೆಯು ತನ್ನಲ್ಲಿರುವ 20 ಸಾವಿರ ಬೋಗಿಗಳನ್ನು 10 ಸಾವಿರ ಐಸೋಲೇಶನ್ ವಾರ್ಡ್​ಗಳಾಗಿ ಮಾರ್ಪಡಿಸಬಹುದು. ಇದರಿಂದ ಕೊರೋನಾ ಎದುರಿಸಲು ಹೆಚ್ಚು ಸಹಾಯಕವಾಗುವ ನಿರೀಕ್ಷೆ ಇದೆ.
undefined
ರೈಲ್ವೆಯ ಪ್ರತೀ ವಲಯದಲ್ಲೂ ವಾರದೊಳಗೆ 10 ಬೋಗಿಗಳನ್ನು ಐಸೋಲೇಶನ್ ವಾರ್ಡ್‌ಗಳನ್ನಾಗಿ ಪರಿವರ್ತಿಸುವುದಾಗಿ ಇಲಾಖೆ ತಿಳಿಸಿದೆ.
undefined
click me!