ಲಾಕ್‌ಡೌನ್‌ ಇದ್ರೂ ನೆಪ ಹೇಳಿ ರೋಡಿಗಿಳಿಯೋ ಮುನ್ನ ಇವರನ್ನೊಮ್ಮೆ ನೋಡಿ

First Published Mar 26, 2020, 10:19 AM IST

ಕೊರೋನಾ ವೈರಸ್‌ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೇಶವನ್ನೇ ಲಾಕ್‌ಡೌನ್ ಮಾಡಿದ ಮೇಲೂ ಜನರಿಗೆ ಇದರ ಗಂಭೀರತೆ ಅರ್ಥವಾಗುತ್ತಿಲ್ಲ. ಜೀವ ಪಣಕ್ಕಿಟ್ಟು ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರೊಂದೆಡೆಯಾದ್ರೆ, ಹೊಸತಡ್ಕು ಎಂದು ಮಾಂಸಕ್ಕಾಗಿ ರಸ್ತೆಗಿಳಿವವರು ಒಂದೆಡೆ. ವಿಷಮ ಪರಿಸ್ಥಿತಿ ಬಗ್ಗೆ ಎಷ್ಟೇ ವಿವರಿಸಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಸ್ವತಃ ವೈದ್ಯವೇ ನಮ್ಮ ಸ್ಥಿತಿ ಹೀಗಿದೆ, ದಯವಿಟ್ಟು ಮನೆಯಲ್ಲಿರಿ ಎಂದು ಕೇಳಿಕೊಳ್ಳುತ್ತಿರುವ, ಮನಮುಟ್ಟುವ ಚಿತ್ರಗಳು ಇಲ್ಲಿವೆ.

ಒಂದಷ್ಟು ಹೊತ್ತು ಸಾಮಾನ್ಯ ಮಾಸ್ಕ್ ಧರಿಸುವಾಗಲೇ ಹಿಂಸೆ ಎನಿಸುತ್ತದೆ. ಆದರೆ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ತಮ್ಮನ್ನು ತಾವು ಸಂಪೂರ್ಣ ಕವರ್ ಮಾಡಿಕೊಂಡು ದಪ್ಪದ ಮಾಸ್ಕ್ ಧರಿಸಿ 24 ಗಂಟೆ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಈ ಸಂದರ್ಭ ನಾವು ಮನೆಯಲ್ಲಿ ಕುಳಿತು ವೈದ್ಯರಿಗೆ ಇನ್ನೊಬ್ಬ ರೋಗಿಯನ್ನು ಕಡಿಮೆಗೊಳಿಸುವುದೇ ದೊಡ್ಡ ಕೆಲಸ
undefined
ತಮ್ಮ ಜೀವವನ್ನೇ ಪಣಕ್ಕಿಟ್ಟು ರೋಗಿಗಳ ಸೇವೆ ಮಾಡುತ್ತಿದ್ದರೂ ಮುಗುಳ್ನಗು ಮರೆಯಾಗಿಲ್ಲ
undefined
ಮಾಸ್ಕ್‌ಗಳ ಬರೆಗಳು ಬಿದ್ದರೂ ರೋಗಿಗಳ ಸೇವೆ ಮಾಡುವ ಕಾರ್ಯ ಮಾತ್ರ ನಿಂತಿಲ್ಲ.
undefined
ಸದ್ಯ ಜನ ಸಾಮಾನ್ಯರು ಮನೆಯೊಳಗೇ ಉಳಿದುಕೊಂಡರೆ ಅದಕ್ಕಿಂತ ದೊಡ್ಡ ನೆರವು ಬೇರೆ ಇಲ್ಲ
undefined
ನಾವು ನಿಮಗಾಗಿ ಇಲ್ಲಿ ಉಳಿದಿದ್ದೇವೆ, ನೀವು ನಮಗಾಗಿ ಮನೆಯಲ್ಲಿ ಉಳಿಯಿರಿ ಎಂದು ಕೇಳಿಕೊಳ್ಳುತ್ತಿರುವ ವೈದ್ಯರು
undefined
ದಿನಪೂರ್ತಿ ಮಾಸ್ಕ್ ಧರಿಸಿ ಬರೆಗಳು ಬಿದ್ದಿರುವ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡ ವೈದ್ಯರು ಜನರು ಮನೆಯಲ್ಲಿರುವಂತೆ ಕೇಳಿಕೊಳ್ಳುತ್ತಿದ್ದಾರೆ
undefined
ಎಡೆಬಿಡದೆ ಕೊರೋನಾ ರೋಗಿಗಳ ಸೇವೆ ಮಾಡಿದ ಪರಿಣಾಮವಿದು. ವೈದ್ಯರು ಹಗಲಿರುಳು ಕಷ್ಟಪಡುತ್ತಿರುವಾಗ ಹೊರಗೆ ಓಡಾಡದೆ ಮನೆಯಲ್ಲಿ ಕೂರುವುದು ಪ್ರತಿಯೊಬ್ಬರ ಕರ್ತವ್ಯ
undefined
click me!