ಸೈಫ್‌ ಜೊತೆ ಯಾಕಿಲ್ಲ ಮಗಳು ಸಾರಾ, ಅವಳೇ ಹೇಳ್ತಾಳೆ ಕೇಳಿ...

Published : May 30, 2020, 05:50 PM ISTUpdated : Aug 28, 2020, 10:55 AM IST

ಸಾರಾ ಅಲಿ ಖಾನ್‌ ನಟ ಸೈಫ್‌ ಅಲಿ ಖಾನ್‌ ಹಾಗೂ ನಟಿ ಅಮೃತಾ ಸಿಂಗ್‌ರ ಪುತ್ರಿ. ಅಪ್ಪ ಅಮ್ಮರಂತೆ ನಟನೆಯನ್ನು ಆರಿಸಿಕೊಂಡು ಯಶಸ್ವಿಯಾಗಿರುವ ಸ್ಟಾರ್‌ಕಿಡ್‌. ಕೇದಾರ್‌ನಾಥ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಾರಾ ನಿಧಾನವಾಗಿ ನೆಲೆ ಕಂಡುಕೊಂಡಿದ್ದಾರೆ. ಸಾರಾಳ ಪೋಷಕರಾದ ಸೈಫ್‌ ಹಾಗೂ ಅಮೃತಾ ಡಿವೋರ್ಸ್‌ ಪಡೆದು ಬೇರೆಯಾಗಿದ್ದು, ಸೈಫ್‌ ಕರೀನಾಳನ್ನು ಮದುವೆಯಾದರೆ ಅಮೃತಾ ಮಕ್ಕಳ ಜೊತೆ ಇದ್ದಾರೆ. ಸಾರಾ ಅಪ್ಪ ಸೈಫ್‌ ಜೊತೆ ಏಕಿಲ್ಲವೆಂಬುದಕ್ಕೆ ಇಂಟರ್‌ವ್ಯೂವ್‌ವೊಂದರಲ್ಲಿ ಕಾರಣ ಹೇಳಿದ್ದಾಳೆ.

PREV
111
ಸೈಫ್‌ ಜೊತೆ ಯಾಕಿಲ್ಲ ಮಗಳು ಸಾರಾ, ಅವಳೇ ಹೇಳ್ತಾಳೆ ಕೇಳಿ...

ಪೋಷಕರ ಡಿವೋರ್ಸ್‌ ನಂತರ ತಾಯಿ ಅಮೃತಾ ಸಿಂಗ್ ಮತ್ತು ಸಹೋದರ ಇಬ್ರಾಹಿಂ ಜೊತೆ ವಾಸಿಸುತ್ತಿದ್ದಾಳೆ  ಸಾರಾ. 

211

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯಳಾಗಿದ್ದಾಳೆ ಮತ್ತು ತನ್ನ ಸಹೋದರನ ಜೊತೆಯ ಅನೇಕ ಪೋಟೋ ವೀಡಿಯೊಗಳನ್ನು ಫೋಸ್ಟ್‌ ಮಾಡುತ್ತಿರುತ್ತಾಳೆ.

311

ಸೈಫ್ 1991 ರಲ್ಲಿ ತನಗಿಂತ 13 ವರ್ಷ ಹಿರಿಯ ಅಮೃತಾ ಸಿಂಗ್‌ರನ್ನು ವಿವಾಹವಾಗಿದ್ದರು. 2 ಮಕ್ಕಳಾದ ನಂತರ ದಂಪತಿ 2004ರಲ್ಲಿ ವಿಚ್ಛೇದನ ಪಡೆದರು.

411

ಅಮೃತಾ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದರೆ.  2012ರಲ್ಲಿ ಸೈಫ್ ತನಗಿಂತ 10 ವರ್ಷ ಚಿಕ್ಕವಳಾದ ಕರೀನಾ ಕಪೂರ್‌ ಜೊತೆ ಮದುವೆಯಾದರು.

511

ತಂದೆ ಸೈಫ್ ಅಲಿ ಖಾನ್ ಜೊತೆ ಏಕೆ ವಾಸಿಸುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಸಾರಾ  ಬಹಿರಂಗಪಡಿಸಿದಳು. 

611

'ನನ್ನ ತಾಯಿ ಬಾಲ್ಯದಿಂದಲೂ ನನ್ನನ್ನು ಬೆಳೆಸಿದ್ದಾರೆ. ಸಹೋದರ ಇಬ್ರಾಹಿಂ ಜನಿಸಿದ ನಂತರ ತಾಯಿ ಪೂರ್ತಿ ಸಮಯವನ್ನು ನಮಗೆ ನೀಡಿದರು. ನಮ್ಮನ್ನು ಬೆಳೆಸಲು ತನ್ನ ವೃತ್ತಿಜೀವನವನ್ನು ತ್ಯಜಿಸಿದರು, ಮತ್ತು ನನ್ನ ಹೆತ್ತವರು ಒಟ್ಟಿಗೆ ಸಂತೋಷವಾಗಿರದ ಮನೆಯಲ್ಲಿ ನಾನು ವಾಸಿಸಲು ಸಾಧ್ಯವಿಲ್ಲ ಎಂದ ಸಿಂಬಾ ನಟಿ.

711

'ಪೋಷಕರು ಸಂತೋಷವಾಗಿರದೇ ಒಟ್ಟಿಗೆ  ಮನೆಯಲ್ಲಿರುವುದಕ್ಕಿಂತ, ಬೇರೆ ಬೇರೆ ಮನೆಯಲ್ಲಿ ಉಳಿದು ಸಂತೋಷವಾಗಿರುವುದು ಒಳ್ಳೆಯದು. ನನಗೆ ಯಾವುದಕ್ಕೂ ಕೊರತೆಯಿಲ್ಲ. ಪಪ್ಪಾ ಸಿಕ್ಕಾಗ ಅವರ ಜೊತೆಯೂ  ಸಂತೋಷಪಡುತ್ತೇವೆ' ಎಂದಿದ್ದಾಳೆ ಯುವ ನಟಿ ಸಾರಾ.

811

ಸೈಫ್ ತೈಮೂರ್ ಜೊತೆ  ಹೆಚ್ಚು ಸಮಯ ಕಳೆಯುವುದರ ಬಗ್ಗೆ ಸಾರಾಳನ್ನು ಕೇಳಿದಾಗ, 'ತೈಮೂರ್ ನನ್ನ ಕಿರಿಯ ಸಹೋದರ ಮತ್ತು ಪಪ್ಪಾ ಅವನೊಂದಿಗಿದ್ದಾಗ,  ಅವನಿಗೆ ಪೂರ್ಣ ಸಮಯವನ್ನು ನೀಡುತ್ತಾರೆ. ನಮ್ಮ ಜೊತೆ ಇದ್ದರೆ ನಮಗೆ ಪೂರ್ಣ ಸಂತೋಷವನ್ನು ನೀಡುತ್ತಾರೆ. ಅವರೊಂದಿಗೆ ನನಗೆ ಯಾವುದೇ ದೂರುಗಳಿಲ್ಲ' ಎಂದಿದ್ದಾಳೆ.

911

ಸಾರಾ ನ್ಯೂಯಾರ್ಕ್‌ನ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಹಿಸ್ಟರಿ ಹಾಗೂ ಪೊಲಿಟಿಕಲ್‌ ಸೈನ್ಸ್‌ ಪದವಿ ಪಡೆದಿದ್ದಾಳೆ.

1011

ತೂಕ ಇಳಿಸಿಕೊಂಡು ಎಲ್ಲರ ಗಮನ ಸೆಳೆದ ಸಾರಾ   2018 ರಲ್ಲಿ 'ಕೇದಾರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು.  

1111

'ಲವ್ ಆಜ್ ಕಲ್ 2' ನಂತರ, ಡೇವಿಡ್ ಧವನ್ ನಿರ್ದೇಶಿಸುತ್ತಿರುವ 'ಕೂಲಿ ನಂ 1' ನಲ್ಲಿ ವರುಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.ಇದಲ್ಲದೆ, ಅಕ್ಷಯ್ ಕುಮಾರ್ ಮತ್ತು ಧನುಷ್ ಅವರೊಂದಿಗೆ ಅಟ್ರಂಗಿ ರೇನಲ್ಲಿ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories