ಕೊರೋನಾ ಗಲಾಟೆ ವೇಳೆಯಲ್ಲಿ 8 ಹಳ್ಳಿಗಳ ದತ್ತು ತೆಗೆದು ಕೊಂಡ ಹಿರಿಯ ನಟ

First Published Apr 9, 2020, 5:48 PM IST

ಕೊರೋನಾ ಹರಡದಂತೆ ತಡೆಯಲು ದೇಶವೇ ಲಾಕ್‌ಡೌನ್‌ ಆಗಿರುವ ಪರಿಸ್ಥಿತಿಯಲ್ಲಿ ಸೆಲಬ್ರೆಟಿಗಳು ಕಷ್ಟದಲ್ಲಿರುವವರಿಗೆ ಸಹಾಯಮಾಡಲು ಮುಂದಾಗಿದ್ದಾರೆ. ಅಗತ್ಯವಿರುವವರಿಗೆ ಆಹಾರ ಪೂರೈಸಲು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾರಂಗದ ನಟ-ನಟಿರು ಕೈಚಾಚಿದ್ದಾ‌ರೆ. ಹಲವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಗಳಿಗೆ ದೇಣಿಗೆ ನೀಡಿದರೆ, ಕೆಲವರು ಮಾಸ್ಕ್‌ ಸ್ಯಾನಿಟೈಜರ್‌ ಮತ್ತು ದಿನಸಿ ವಸ್ತುಗಳನ್ನು ತಲುಪಿಸಿ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಟಾಲಿವುಡ್‌ನ ಹಿರಿಯ ನಟ ಮೋಹನ್‌ ಬಾಬು ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.

8 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಕೊರೋನಾ ಸಂತ್ರಸ್ತರ ನೆರವಿಗೆ ಮುಂದಾದ ಹಿರಿಯ ನಟ ಮೋಹನ್‌ ಬಾಬು.
undefined
ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.
undefined
ಕಳೆದ ಹತ್ತು ದಿನಗಳಿಂದ ಆ ಹಳ್ಳಿಗಳ ಬಡ ಕುಟುಂಬಗಳಿಗೆ ಆಹಾರ ನೀಡುತ್ತಿದ್ದಾರೆ ಅಪ್ಪ ಮಗ.
undefined
ಈ ವ್ಯವಸ್ಥೆ ಲಾಕ್‌ಡೌನ್‌ ಮುಗಿಯುವ ವರೆಗೆ ಮುಂದುವರೆಯುತ್ತದೆ ಎಂಬ ಸುದ್ದಿ ಇದೆ.
undefined
ಇದಲ್ಲದೆ, ಪ್ರತಿನಿತ್ಯ 8 ಟನ್‌ ತರಕಾರಿಗಳನ್ನು ಸಹ ಸಪ್ಲೈ ಮಾಡುತ್ತಿರುವ ಮೋಹನ್‌ ಬಾಬು.
undefined
ಮುಖ್ಯ ಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಪುನೀತ್‌ ರಾಜ್‌ಕುಮಾರ್‌ ನೀಡಿದರೆ, ಅವರ ಜೊತೆ ದರ್ಶನ್‌ ಸೇರಿ ಸ್ಯಾಂಡಲ್‌ವುಡ್‌ನ ಹಲವು ನಟನಟಿಯರು ದೇಣಿಗೆ ನೀಡಿದ್ದಾರೆ.
undefined
ಕಾಲಿವುಡ್‌ನ ರಜನಿಕಾಂತ್‌ 50 ಲಕ್ಷ ನೀಡಿದ್ದಾರೆ.
undefined
ಬಾಲಿವುಡ್‌ನ ಅಕ್ಷಯ್‌ ಕುಮಾರ್‌ 25 ಕೋಟಿ ದಾನ ನೀಡಿದ್ದಾರೆ ಹಾಗೆ ಸಿನಿಮಾಕ್ಕೆ ಸಂಬಂಧಿಸಿದ 25000 ಡೈಲಿ ವರ್ಕರ್ಸ್‌ಗೆ ಸಹಾಯ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌.
undefined
ಮೆಗಾ ಸ್ಟಾರ್‌ ಚಿರಜೀವಿ ಸ್ಥಾಪಿಸಿರುವ ಕೊರೋನಾ ಕ್ರೈಸಿಸ್‌ ಚಾರಿಟಿಗೆ ಟಾಲಿವುಡ್‌ನ ಯಂಗ್‌ ಸ್ಟಾರ್‌ಗಳು ಸಹ ದಾನ ನೀಡುತ್ತಿದ್ದಾರೆ.
undefined
ಇತ್ತೀಚಿಗೆ 20 ಲಕ್ಷ ಹಣ ದಾನ ಮಾಡಿದ್ಗಾರೆ ನಟಿ ನಯನಾತಾರಾ. ಹೀಗೆ ಭಾರತದ ಎಲ್ಲಾ ಭಾಷೆಯ ಸಿನಿಮಾ ಸ್ಷಾರ್‌ಗಳು ಕೋವಿಡ್‌ 19 ವಿರುದ್ಧ ಹೋರಾಡಲು ಜನತೆಯ ಜೊತೆ ನಿಂತಿದ್ದಾರೆ.
undefined
click me!