ಅಪ್ಪನಾದ ಖುಷಿಯಲ್ಲಿ ಟಾಲಿವುಡ್ ಸ್ಟಾರ್ ನಿತಿನ್... ಆದರೆ ನಟಿ ಸಮಂತಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

Published : Sep 07, 2024, 06:54 PM IST

ಟಾಲಿವುಡ್ ಯುವ ನಟ ಸದ್ಯ ನಿತಿನ್ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ನಿತಿನ್ ಪತ್ನಿ ಶಾಲಿನಿ ಕಂಡುಕೂರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

PREV
14
ಅಪ್ಪನಾದ ಖುಷಿಯಲ್ಲಿ ಟಾಲಿವುಡ್ ಸ್ಟಾರ್ ನಿತಿನ್... ಆದರೆ ನಟಿ ಸಮಂತಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಯುವ ನಟ ನಿತಿನ್ ಕೆಲವು ಕಾಲದಿಂದ ಬಿಗ್ ಹಿಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ ನಿತಿನ್ ನಟಿಸಿದ ಕೊನೆಯ ಚಿತ್ರ ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್ ನಿರಾಸೆ ಮೂಡಿಸಿತು. ಪ್ರಸ್ತುತ ನಿತಿನ್ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಕೀಲ್ ಸಾಬ್ ನಿರ್ದೇಶಕ ವೇಣು ಶ್ರೀರಾಮ್ ನಿರ್ದೇಶನದಲ್ಲಿ ತಮ್ಮುಡು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ಭೀಷ್ಮದಂತಹ ಹಿಟ್ ನೀಡಿದ್ದ ವೆಂಕಿ ಕುಡುಮುಲ ನಿರ್ದೇಶನದಲ್ಲಿ ರಾಬಿನ್ ಹುಡ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳ ಮೇಲೆ ನಿತಿನ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

 

24

ಸದ್ಯ ಇದೀಗ ನಿತಿನ್ ಕುಟುಂಬದಲ್ಲಿ ಸಂತೋಷ ತುಂಬಿ ತುಳುಕುತ್ತಿದೆ. ನಿತಿನ್ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ನಿತಿನ್ ಪತ್ನಿ ಶಾಲಿನಿ ಕಂಡುಕೂರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 2020ರಲ್ಲಿ ನಿತಿನ್, ಶಾಲಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಾಲ್ಕು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಕುಟುಂಬದ ಸದಸ್ಯರನ್ನು ಒಪ್ಪಿಸಿ ವಿವಾಹವಾದರು. 

 

34

ಆದರೆ ನಿತಿನ್ ಪತ್ನಿ ಶಾಲಿನಿ ಗರ್ಭಿಣಿ ಎಂದು ಎಲ್ಲಿಯೂ ಬಹಿರಂಗಪಡಿಸಲಿಲ್ಲ. ಒಮ್ಮೆಲೆ ಮಗು ಜನಿಸಿದೆ ಎಂದು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ರೋಮಾಂಚನಗೊಂಡರು ಮತ್ತು ಅಚ್ಚರಿಗೊಂಡರು. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ನಿತಿನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗುವಿನ ಬೆರಳುಗಳನ್ನು ಮುಟ್ಟುತ್ತಿರುವ ಫೋಟೋವನ್ನು ನಿತಿನ್ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

 

44

ನಿತಿನ್ ಪೋಸ್ಟ್‌ಗೆ ಹಲವಾರು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಶ್ರೇಯಾ ಶರಣ್, ವೆನ್ನೆಲ ಕಿಶೋರ್, ಸಮಂತಾ, ವರುಣ್ ತೇಜ್, ಸಾಯಿ ಧರಮ್ ತೇಜ್ ನಿತಿನ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇವರಲ್ಲಿ ಸಮಂತಾ ಅವರ ಪ್ರತಿಕ್ರಿಯೆ ಹೈಲೈಟ್ ಎನ್ನಬಹುದು. ಒಮ್ಮೆಲೆ ನಿತಿನ್ ತನಗೆ ಗಂಡು ಮಗು ಜನಿಸಿದೆ ಎಂದು ಹೇಳಿದಾಗ.. ಓ ಮೈ ಗಾಡ್.. ಕಂಗ್ರಾಟ್ಸ್ ಎಂದು ಸಮಂತಾ ಕಾಮೆಂಟ್ ಮಾಡಿದ್ದಾರೆ. 

 

Read more Photos on
click me!

Recommended Stories