ಇತ್ತೀಚೆಗೆ ಉಪಾಸನಾ ನೀಡಿದ ಹೇಳಿಕೆಯೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳನ್ನು ಹೊಂದುವ ಬಗ್ಗೆ ಮಹಿಳೆಯರಿಗೆ ಮೆಗಾ ಸೊಸೆ ಉಪಾಸನಾ ನೀಡಿದ ಸಲಹೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅವರು ಹೇಳಿದ ಎಗ್ ಫ್ರೀಜಿಂಗ್ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಇತ್ತೀಚೆಗೆ ಹೈದರಾಬಾದ್ ಐಐಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಉಪಾಸನಾ, ಮಹಿಳೆಯರು ತಮ್ಮ ವೃತ್ತಿಜೀವನದ ಮೇಲೆ ಗಮನ ಹರಿಸಲು ಬಯಸಿದರೆ, ಅಂಡಾಣುಗಳನ್ನು ಫ್ರೀಜ್ ಮಾಡಿಸುವುದು ಉತ್ತಮ ಉಪಾಯ ಎಂದು ಹೇಳಿದರು. ಇದು 'ಮಹಿಳೆಯರಿಗೆ ಅತಿದೊಡ್ಡ ವಿಮೆ' ಇದ್ದಂತೆ ಎಂದು ಅವರು ಹೇಳಿದ್ದಾರೆ. ಇದರಿಂದ ಈಗ ಇದರ ಬಗ್ಗೆ ಚರ್ಚೆ ಶುರುವಾಗಿದೆ.
210
ಬೆಂಬಲದ ಜೊತೆಗೆ ವಿರೋಧವೂ..
ಉಪಾಸನಾ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಕೆಲವರು ಉಪಾಸನಾರನ್ನು ಬೆಂಬಲಿಸಿದರೆ, ಇನ್ನು ಕೆಲವರು ಟೀಕಿಸುತ್ತಿದ್ದಾರೆ. ಇದು ಶ್ರೀಮಂತರಿಗೆ ಮಾತ್ರ ಸರಿಹೊಂದುತ್ತದೆ, ಸಾಮಾನ್ಯರಿಗೆ ಸಾಧ್ಯವಿಲ್ಲ ಎನ್ನುತ್ತಾರೆ ಮತ್ತೆ ಕೆಲವರು.
310
ಸ್ಪಷ್ಟನೆ ನೀಡಿದ ಉಪಾಸನಾ
ಟೀಕೆಗಳಿಗೆ ಪ್ರತಿಕ್ರಿಯಿಸಿದ ಉಪಾಸನಾ, ಆರೋಗ್ಯಕರ ಚರ್ಚೆ ಖುಷಿ ತಂದಿದೆ ಎಂದರು. ವೈಯಕ್ತಿಕ ನಿರ್ಧಾರಗಳನ್ನು ಗೌರವಿಸಬೇಕು ಎಂದರು. ತಾನು 29ನೇ ವಯಸ್ಸಿನಲ್ಲಿ ಅಂಡಾಣು ಫ್ರೀಜ್ ಮಾಡಿಸಿ, 36ರಲ್ಲಿ ಮಗುವಿಗೆ ಜನ್ಮ ನೀಡಿದ್ದಾಗಿ ತಿಳಿಸಿದರು.
ಅಂಡಾಣುಗಳನ್ನು ಸಂಗ್ರಹಿಸಿ, ಕ್ರಯೋಜೆನಿಕ್ ತಂತ್ರಜ್ಞಾನ ಬಳಸಿ ಅತಿ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸುವುದೇ ಎಗ್ ಫ್ರೀಜಿಂಗ್. ಭವಿಷ್ಯದಲ್ಲಿ ಬೇಕೆಂದಾಗ, ಫ್ರೀಜ್ ಮಾಡಿದ ಅಂಡಾಣುಗಳನ್ನು ವೀರ್ಯಾಣುಗಳೊಂದಿಗೆ ಫಲೀಕರಣಗೊಳಿಸಿ, ಐವಿಎಫ್ ಮೂಲಕ ಗರ್ಭಧಾರಣೆಗೆ ಬಳಸಲಾಗುತ್ತದೆ.
510
ಎಗ್ ಫ್ರೀಜಿಂಗ್ ಪ್ರಕ್ರಿಯೆ ಹೇಗಿರುತ್ತೆ?
ಥೈರಾಯ್ಡ್, ಶುಗರ್ ಪರೀಕ್ಷೆ ನಂತರ AMH ಟೆಸ್ಟ್ ಮಾಡುತ್ತಾರೆ. ಅಲ್ಟ್ರಾಸೌಂಡ್ ಮೂಲಕ ಫಾಲಿಕಲ್ ಕೌಂಟ್ ಚೆಕ್ ಮಾಡಿ, ಹಾರ್ಮೋನ್ ಇಂಜೆಕ್ಷನ್ ನೀಡುತ್ತಾರೆ. ಅರಿವಳಿಕೆ ನೀಡಿ ಅಂಡಾಣುಗಳನ್ನು ಸಂಗ್ರಹಿಸಿ ಫ್ರೀಜ್ ಮಾಡಲಾಗುತ್ತದೆ.
610
ಸಕ್ಸಸ್ ರೇಟ್ ಎಷ್ಟಿದೆ?
ಎಗ್ ಫ್ರೀಜಿಂಗ್ ನಂತರ ಅಂಡಾಣು ಖಚಿತವಾಗಿ ಫಲೀಕರಣಗೊಳ್ಳುತ್ತದೆ ಎಂದು ಹೇಳಲಾಗದು. ಕಡಿಮೆ ವಯಸ್ಸಿನಲ್ಲಿ ಯಶಸ್ಸಿನ ಪ್ರಮಾಣ ಹೆಚ್ಚಿದ್ದರೂ, ವಯಸ್ಸು ಹೆಚ್ಚಾದಂತೆ ಸಕ್ಸಸ್ ರೇಟ್ ಕಡಿಮೆಯಾಗುತ್ತದೆ. 35 ವರ್ಷದೊಳಗೆ ಫ್ರೀಜ್ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
710
ಎಷ್ಟು ಖರ್ಚಾಗುತ್ತೆ?
ಕ್ಲಿನಿಕ್, ಔಷಧಿ ಬ್ರ್ಯಾಂಡ್ ಮತ್ತು ಅಗತ್ಯವಿರುವ ಸೈಕಲ್‌ಗಳ ಸಂಖ್ಯೆಯನ್ನು ಅವಲಂಬಿಸಿ ವೆಚ್ಚ ಬದಲಾಗುತ್ತದೆ. ಸಾಮಾನ್ಯವಾಗಿ ಪ್ರಕ್ರಿಯೆಗೆ ₹2.5 ಲಕ್ಷದಿಂದ ₹3 ಲಕ್ಷದವರೆಗೆ ಖರ್ಚಾಗುತ್ತದೆ. ಜೊತೆಗೆ, ವಾರ್ಷಿಕ ಸಂಗ್ರಹಣಾ ಶುಲ್ಕ ಸುಮಾರು ₹10,000 ದಿಂದ ಆರಂಭವಾಗುತ್ತದೆ.
810
ವೈದ್ಯರು ಏನು ಹೇಳ್ತಾರೆ?
ಫ್ರೀಜ್ ಮಾಡಿದ ಅಂಡಾಣುಗಳು ಭವಿಷ್ಯದಲ್ಲಿ 100% ಗರ್ಭಧಾರಣೆಗೆ ಗ್ಯಾರಂಟಿ ನೀಡುವುದಿಲ್ಲ. ಐವಿಎಫ್ ವೈಫಲ್ಯ, ಪುನರಾವರ್ತಿತ ಇಂಜೆಕ್ಷನ್‌ಗಳು ಮತ್ತು ವೈದ್ಯಕೀಯ ಪ್ರಕ್ರಿಯೆಗಳಿಂದ ಭಾವನಾತ್ಮಕ ನೋವು, ಆರ್ಥಿಕ ಒತ್ತಡ ಉಂಟಾಗಬಹುದು.
910
ಯಾರಿಗೆ ಇದು ಉಪಯುಕ್ತ?
* ವೈದ್ಯಕೀಯ ಕಾರಣಗಳಿಂದ ಸಂತಾನೋತ್ಪತ್ತಿ ಅಪಾಯದಲ್ಲಿರುವವರು (ಕ್ಯಾನ್ಸರ್ ಚಿಕಿತ್ಸೆ ಇತ್ಯಾದಿ).
* ಕುಟುಂಬದಲ್ಲಿ ಅಕಾಲಿಕ ಋತುಬಂಧದ ಇತಿಹಾಸವಿದ್ದವರು.
* ವೃತ್ತಿ ಕಾರಣಗಳಿಂದ ತಡವಾಗಿ ಮಕ್ಕಳನ್ನು ಬಯಸುವವರಿಗೆ ಈ ಪ್ರಕ್ರಿಯೆ ಉಪಯುಕ್ತ.
1010
ಭಾವನಾತ್ಮಕ ಅಂಶಗಳು, ಕುಟುಂಬದ ಬೆಂಬಲ
ಹಾರ್ಮೋನ್ ಇಂಜೆಕ್ಷನ್‌ಗಳ ಸಮಯದಲ್ಲಿ ಭಾವನಾತ್ಮಕ ಬದಲಾವಣೆ, ಹೊಟ್ಟೆ ಉಬ್ಬರ, ಅಸ್ವಸ್ಥತೆ ಉಂಟಾಗಬಹುದು. ಭಾವನಾತ್ಮಕ ಬೆಂಬಲ, ಸಂಗಾತಿಯ ಬೆಂಬಲ, ಕೌನ್ಸೆಲಿಂಗ್ ಅಗತ್ಯವಿರುತ್ತದೆ. ಆರ್ಥಿಕ ಯೋಜನೆ ಇಲ್ಲದಿದ್ದರೆ ಒತ್ತಡ ಹೆಚ್ಚಾಗುತ್ತದೆ.