ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?

Published : Dec 05, 2025, 11:12 PM IST

ಇಸೈಜ್ಞಾನಿ ಇಳಯರಾಜಾ, ಕಮಲ್ ಹಾಸನ್ ಅವರ ಸೂಪರ್ ಹಿಟ್ ಚಿತ್ರಕ್ಕಾಗಿ ಒಂದು ಹಾಡನ್ನು ಕಂಪೋಸ್ ಮಾಡುವಾಗ ಸಖತ್ ಖುಷಿಯಿಂದ ಕುಣಿದು ಕುಪ್ಪಳಿಸಿ ಸಂಯೋಜನೆ ಮಾಡಿದ್ದರಂತೆ. ಅದು ಯಾವ ಹಾಡು ಅಂತ ಈ ಲೇಖನದಲ್ಲಿ ನೋಡೋಣ.

PREV
14
ಇಳಯರಾಜಾ ಹಾಡುಗಳು ಹೆಚ್ಚು ವಿಶೇಷ

ಇಸೈಜ್ಞಾನಿ ಇಳಯರಾಜಾ ಅತಿ ಹೆಚ್ಚು ಹಿಟ್ ಹಾಡುಗಳನ್ನು ಕೊಟ್ಟ ನಟರೆಂದರೆ ಅದು ರಜನಿಕಾಂತ್ ಮತ್ತು ಕಮಲ್ ಹಾಸನ್. ರಜನಿಗೆ ಮಾತ್ರ ಒಳ್ಳೊಳ್ಳೆ ಹಾಡುಗಳನ್ನು ಕೊಡುತ್ತಾರೆ ಎಂದು ಕಮಲ್, ಕಮಲ್‌ಗೆ ಮಾತ್ರ ಸೂಪರ್ ಹಾಡುಗಳನ್ನು ಹಾಕುತ್ತಾರೆ ಎಂದು ರಜನಿ ಇಳಯರಾಜಾ ಬಳಿ ಜಗಳವಾಡುತ್ತಿದ್ದರಂತೆ. ರಜನಿಗೆ ಹಲವು ಮಾಸ್ ಹಾಡುಗಳನ್ನು ನೀಡಿರುವ ಇಳಯರಾಜಾ, ಕಮಲ್ ಚಿತ್ರಗಳಲ್ಲಿ ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದರು. ಅದಕ್ಕಾಗಿಯೇ ಆ ಹಾಡುಗಳು ಹೆಚ್ಚು ವಿಶೇಷವಾಗಿರುತ್ತಿದ್ದವು. ಅದೇ ರೀತಿ ಕಮಲ್ ನಿರ್ದೇಶಿಸಿ, ನಟಿಸಿದ ಚಿತ್ರಕ್ಕೆ ಇಳಯರಾಜಾ ಸಂಗೀತ ಸಂಯೋಜನೆ ಮಾಡಿದ ಒಂದು ಹಿಟ್ ಹಾಡಿನ ಬಗ್ಗೆ ನೋಡೋಣ.

24
ಇದರಲ್ಲಿ ನನಗೇನು ಕೆಲಸ

ಕಮಲ್ ಹಾಸನ್ ನಿರ್ದೇಶನದಲ್ಲಿ 2004ರಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಹಿಟ್ ಆದ ಚಿತ್ರ ವಿರುಮಾಂಡಿ. ಆರಂಭದಲ್ಲಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಇಳಯರಾಜಾ ನಿರಾಕರಿಸಿದ್ದರಂತೆ. ಯಾಕಂದ್ರೆ ಚಿತ್ರದ ಕಥೆ ಕೇಳಿ, ಸಿನಿಮಾ ಪೂರ್ತಿ ಹೊಡೆದಾಟ, ಬಡಿದಾಟವೇ ಇದೆ, ಇದರಲ್ಲಿ ನನಗೇನು ಕೆಲಸ ಎಂದು ಕೇಳಿದ್ದರಂತೆ. ಆಮೇಲೆ ಕಮಲ್ ಹಾಡುಗಳಿಗಾಗಿ ಒಂದೊಂದೇ ಸನ್ನಿವೇಶ ಹೇಳಿದಾಗ, ಇಳಯರಾಜಾ ಸಂಗೀತ ಸಂಯೋಜಿಸಲು ಒಪ್ಪಿಕೊಂಡರು. ಈ ಚಿತ್ರದ ಯಶಸ್ಸಿಗೆ ಅದರಲ್ಲಿನ ಹಾಡುಗಳು ಮತ್ತು ಹಿನ್ನೆಲೆ ಸಂಗೀತವೂ ಒಂದು ಪ್ರಮುಖ ಕಾರಣ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

34
ಕುಣಿದು ಕುಪ್ಪಳಿಸಿದ ಇಳಯರಾಜಾ

ಆ ಚಿತ್ರಕ್ಕೆ ಇಳಯರಾಜಾರ ಸಂಗೀತ ಅಷ್ಟೊಂದು ಬೂಸ್ಟ್ ನೀಡಿತ್ತು. ಕಂಪೋಸಿಂಗ್ ವೇಳೆ, 'ವಿರುಮಾಂಡಿಗಾಗಿ ಒಂದು ಹಾಡು ಮಾಡಿದ್ದೇನೆ ಬನ್ನಿ ಕೇಳಿ' ಎಂದು ಖುಷಿಯಿಂದ ಕಮಲ್ ಕೈ ಹಿಡಿದು ಕರೆದೊಯ್ದರಂತೆ ಇಳಯರಾಜಾ. ಸಾಮಾನ್ಯವಾಗಿ ಹಾರ್ಮೋನಿಯಂ ಅನ್ನು ನೆಲದ ಮೇಲೆ ಕುಳಿತು ನುಡಿಸುವ ಅವರು, ಅಂದು ಟೇಬಲ್ ಮೇಲೆ ಇಟ್ಟು, ತಾವು ಸಂಯೋಜಿಸಿದ ಟ್ಯೂನ್‌ಗೆ ಸಾಹಿತ್ಯ ಸೇರಿಸಿ ಕುಣಿಯುತ್ತಾ ನುಡಿಸಿ ತೋರಿಸಿದರಂತೆ. ಆಗ ಪಂಚೆ ಕಳಚಿ ಬೀಳುತ್ತಿದ್ದರೂ, ಅದನ್ನು ಎತ್ತಿ ಕಟ್ಟಿಕೊಂಡು ನುಡಿಸಿ ತೋರಿಸಿದರಂತೆ.

44
ಜಲ್ಲಿಕಟ್ಟು ಸ್ಪರ್ಧೆ ಮಾಸ್ಟರ್‌ಪೀಸ್ ಹಾಡು

ಇಳಯರಾಜಾ ಆ ಹಾಡನ್ನು ಪೂರ್ತಿಯಾಗಿ ಹಾಡಿ ಮುಗಿಸಿದ ನಂತರ, 'ಇದರ ಸಾಹಿತ್ಯವೂ ಅದ್ಭುತವಾಗಿದೆ, ಯಾರು ಬರೆದಿದ್ದು?' ಎಂದು ಕಮಲ್ ಹಾಸನ್ ಕೇಳಿದಾಗ, ಅದು ತಾನೇ ಬರೆದ ಹಾಡು ಎಂದು ಇಳಯರಾಜಾ ಹೇಳಿದರಂತೆ. ಹೀಗೆ ಅವರು ಮಜವಾದ ಮೂಡ್‌ನಲ್ಲಿ ಸೃಷ್ಟಿಸಿದ್ದೇ 'ಕೊಂಬುಳ ಪೂವ ಸುತ್ತಿ' ಹಾಡು. ವಿರುಮಾಂಡಿ ಚಿತ್ರದ ಜಲ್ಲಿಕಟ್ಟು ದೃಶ್ಯದಲ್ಲಿ ಈ ಹಾಡನ್ನು ಬಳಸಲಾಗಿದೆ. ಇಂದಿಗೂ ಜಲ್ಲಿಕಟ್ಟು ಸ್ಪರ್ಧೆ ನಡೆದರೆ ಈ ಹಾಡು ಪ್ಲೇ ಆಗದೆ ಇರುವುದಿಲ್ಲ. ಅಷ್ಟರಮಟ್ಟಿಗೆ ಇದು ಮಾಸ್ಟರ್‌ಪೀಸ್ ಹಾಡಾಗಿದೆ.

Read more Photos on
click me!

Recommended Stories