ಬಾಲಿವುಡ್ ನಟಿ ಶ್ರೀದೇವಿ ಹಾಗೂ ಕೊರಿಯರ್‌ಗ್ರಾಫರ್ ಸರೋಜ್ ಖಾನ್ ನಡುವೆ ಉತ್ತಮ ಬಾಂಡಿಂಗ್ ಇತ್ತು.
ಆದರೆ ಇಬ್ಬರ ನಡುವೆ ಜಗಳವಾಗಿ ಒಟ್ಟಿಗೆ ಕೆಲಸ ಮಾಡುವುದನ್ನೇ ನಿಲ್ಲಿಸಿದ್ದರು ಆಮೇಲೆ.
ದಿವಂಗತ ನಟಿ ಶ್ರೀದೇವಿ ಹಾಗೂ ಸರೋಜ್ ಖಾನ್ ಪರಸ್ಪರ ಮಾತನಾಡುವುದನ್ನೂನಿಲ್ಲಿಸಿದ್ದರಂತೆ.
90ರ ದಶಕದ ಆರಂಭದಲ್ಲಿ, ಶ್ರೀದೇವಿ ದೊಡ್ಡ ತಾರೆಯಾಗಿದ್ದಾಗ, ಅವರ ನೃತ್ಯ ಪ್ರದರ್ಶನಗಳನ್ನು ನೋಡಲುಜನ ಕಾತುರದಿಂದ ಕಾಯುತ್ತಿದ್ದರು. ಅವುಗಳಲ್ಲಿ ಅನೇಕವನ್ನು ಸರೋಜ್ ಖಾನ್ ನೃತ್ಯ ಸಂಯೋಜಿಸಿದ್ದರು ಎನ್ನುವುದನ್ನು ಹೇಳುವುದೇ ಬೇಡ. ಆದರೂ ಈ ಸೂಪರ್ ಜೋಡಿ ನಡುವೆ ಜಗಳವಾಗಿತ್ತು.
ಮಿ.ಬೆಚರಾ, ಜುದಾಯಿ, ಖುದಾ ಗವಾ, ನಗಿನಾ, ಮಿಸ್ಟರ್ ಇಂಡಿಯಾ, ಚಾಂದನಿ, ಲಮ್ಹೆ ಮತ್ತು ಇತರ ಚಲನಚಿತ್ರಗಳಲ್ಲಿ ಶ್ರೀದೇವಿ ಮತ್ತು ಸರೋಜ್ ಇಬ್ಬರೂ ಹಾಡುಗಳನ್ನು ಹಿಟ್ ಮಾಡಲು ಕೊಡುಗೆ ನೀಡಿದ್ದಾರೆ. ಅವರು ಪರಸ್ಪರ ಉತ್ತಮ ಸಂಬಂಧವನ್ನು ಹಂಚಿಕೊಂಡರು, ಇವರ ಬಾಂಡಿಗ್ ನಗಿನಾ ಚಿತ್ರದ ಶೂಟಿಂಗ್ ಸಮಯದಿಂದ ಬೆಳೆಯಿತು.
ಆದರೆ ನಿರ್ದಿಷ್ಟ ಘಟನೆಗಳು ಅವರ ಸ್ನೇಹದ ಮೇಲೆ ಪರಿಣಾಮ ಬೀರಿತು. ಈ ಇಬ್ಬರು ಸ್ಟಾರ್‌ಗಳು ಸುಮಾರು ಒಂದು ವರ್ಷ ಪರಸ್ಪರ ಮಾತನಾಡಿರಲಿಲ್ಲ.
ಸಂದರ್ಶನವೊಂದರಲ್ಲಿ ಸರೋಜ್ ಖಾನ್ ಇವರಿಬ್ಬರ ನಡುವಿನ ವೈಮನಸ್ಸಿಗೆ ಕಾರಣ ಬಹಿರಂಗಪಡಿಸಿದರು. ಮಿಸ್ಟರ್ ಇಂಡಿಯಾದ ಶ್ರೀದೇವಿಯ ಫೇಮಸ್ ಹಾಡು ಹವಾ ಹವಾಯಿ, ನಂತರಬಿಡುಗಡೆಯಾದ ತೆಜಾಬ್ ಸಿನಿಮಾದ ಮಾಧುರಿ ದೀಕ್ಷಿತ್ ಹಾಡು ಏಕ್ ದೋ ತೀನ್ ಕೂಡ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮಾಧುರಿಗೆ ತಮಗಿಂತ ಉತ್ತಮ ಸ್ಟೆಪ್ಸ್ ಕಲಿಸಿದ್ದಾರೆಂದು ಶ್ರೀದೇವಿ ಉರಿದುಕೊಂಡಿದ್ದರಂತೆ
ಒಂದು ವರ್ಷದ ನಂತರ, ಶ್ರೀದೇವಿ ಸ್ವತಃ ಖಾನ್ ಅವರೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ಇಬ್ಬರ ಫ್ರೆಂಡ್‌ಶಿಪ್ ಮತ್ತೆ ಬೆಳೆಯಿತು.
ಕಾರ್ಡಿಯಕ್ ಆರೆಸ್ಟ್‌ನಿಂದ 71 ವರ್ಷದ ಸರೋಜ್ ಖಾನ್ ಇಂದು (ಜುಲೈ 3) ಮುಂಜಾನೆ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಶನಿವಾರ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಮುಂಜಾನೆ 2: 30 ರ ಸುಮಾರಿಗೆ ಹೃದಯ ಸ್ತಂಭನದಿಂದಾಗಿ ಅವರು ನಿಧನರಾದರು' ಎಂದು ಖಾನ್ ಸೋದರಳಿಯ ಮನೀಶ್ ತಿಳಿಸಿದ್ದಾರೆ.