ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಸದ್ಯ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಈ ನಡುವೆಯೇ ಫೋಟೋಶೂಟ್ ವಿಚಾರದಲ್ಲಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಟ್ರೆಂಡಿ ಡ್ರೆಸ್‌ನಲ್ಲಿ ಅಂದ ಹೊರಹಾಕಿದ್ದಾರೆ.
ಹೌದು! ಮೃಣಾಲ್ ಠಾಕೂರ್ ಟಾಲಿವುಡ್‌ನಲ್ಲಿ ದಿನದಿಂದ ದಿನಕ್ಕೆ ತಮ್ಮ ಸ್ಟಾರ್‌ಡಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಸಿನಿಮಾ ಅವಕಾಶ ಗಿಟ್ಟಿಸಿಕೊಂಡು, ತೆಲುಗಿನಲ್ಲಿಯೇ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಸಿನಿಮಾ ಹೊರತುಪಡಿಸಿದರೆ, ಫ್ಯಾಷನ್ ವಿಚಾರದಲ್ಲೂ ಮೃಣಾಲ್ ಅಷ್ಟೇ ಮುಂದು. ಆಗಾಗ ಗ್ಲಾಮರಸ್ ಮತ್ತು ಹಾಟ್ ಲುಕ್‌ನಲ್ಲಿ ಮಿಂಚುತ್ತಿರುತ್ತಾರೆ. ಇದೀಗ ಹೊಸ ಆಕರ್ಷಕ ಫೋಟೋಶೂಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅನಾರ್ಕಲಿ ಕುರ್ತಾ ಸೆಟ್‌ನಲ್ಲಿ ಮೃಣಾಲ್ ಠಾಕೂರ್ ಮಿಂಚಿದ್ದಾರೆ. ಜಾರ್ಜೆಟ್, ಸಿಲ್ಕ್ ಫ್ಯಾಬ್ರಿಕ್, ಡೀಪ್ ವಿ- ನೆಕ್ಲೈನ್, ಮಲ್ಟಿ ಕಲರ್ ಥ್ರೆಡ್ ಎಂಬ್ರಾಯ್ಡರಿಯೊಂದಿಗೆ ಈ ಉಡುಗೆ ಆಕರ್ಷಕವಾಗಿದೆ. ಅದಕ್ಕೆ ಹೊಂದುವ ದುಪಟ್ಟಾ ಕೂಡಾ ಗಮನ ಸೆಳೆಯುವಂತಿದೆ.
ತರುಣ್ ತಾಹಿಲಿಯನ್ ವಿನ್ಯಾಸಗೊಳಿಸಿದ ಈ ಅನಾರ್ಕಲಿ ಡ್ರೆಸ್‌ನಲ್ಲಿ ಮೃಣಾಲ್ ಪಡ್ಡೆಹೈಕ್ಳ ನಿದ್ದೆ ಕದಿಯುತ್ತಿದ್ದಾರೆ. ಅಷ್ಟೇ ಅಲ್ಲ ಈ ಉಡುಪಿನ ಬೆಲೆ ಕೇಳಿದರೆ ನಿಮಗೆ ಶಾಕ್ ಆಗಬಹುದು.ಈ ಡ್ರೆಸ್‌ನ ಬೆಲೆ ಬರೋಬ್ಬರಿ 3 ಲಕ್ಷ 29 ಸಾವಿರ ರೂ.
ಸೀತಾ ರಾಮಂ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಮೃಣಾಲ್, ಮೊದಲ ಸಿನಿಮಾದಲ್ಲಿಯೇ ಹಿಟ್ ಪಟ್ಟ ಪಡೆದುಕೊಂಡರು. ಅದಾದ ಬಳಿಕ ನಾನಿ ಮತ್ತು ಮೃಣಾಲ್ ನಾಯಕಿಯರಾಗಿ ನಟಿಸಿದ ಹಾಯ್ ನಾನ್ನ ಚಿತ್ರವೂ ಕೈ ಹಿಡಿಯಿತು.
ಸದ್ಯ ವಿಜಯ್ ದೇವರಕೊಂಡ ಅವರೊಂದಿಗೆ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ನಾಯಕಿಯಾಗಿ ಮೃಣಾಲ್ ನಟಿಸುತ್ತಿದ್ದಾರೆ. ಈ ಚಿತ್ರವು ಮಾರ್ಚ್ 2024ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನು ಮೃಣಾಲ್ ಹೈದರಾಬಾದ್ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ.