ಕಿಮೋಥೆರಪಿ ನಂತರ ಹೇಗಾಗಿದ್ದಾರೆ ನೋಡಿ ನಟ ಸಂಜಯ್‌ದತ್‌!

Suvarna News   | Asianet News
Published : Sep 19, 2020, 07:33 PM IST

ಸಂಜಯ್ ದತ್ ಈ ದಿನಗಳಲ್ಲಿ ಲಂಗ್ಸ್‌ ಕ್ಯಾನ್ಸರ್‌ಗೆ  ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮೊದಲ ಕೀಮೋಥೆರಪಿಗೆ ಒಳಗಾಗಿರುವ ನಟ ಪ್ರಸ್ತುತ ಪತ್ನಿ ಮಾನ್ಯತಾ ದತ್ ಜೊತೆ ದುಬೈನಲ್ಲಿದ್ದಾರೆ. ವರದಿ ಪ್ರಕಾರ, ಸಂಜಯ್ ತಮ್ಮ ಮಕ್ಕಳು ಶಹರನ್ ಮತ್ತು ಇಕ್ರಾರನ್ನು ಭೇಟಿ ಮಾಡಲು ಚಾರ್ಟರ್ಡ್ ಪ್ಲೈನ್‌ನಲ್ಲಿ ಅಲ್ಲಿಗೆ ಹೋಗಿದ್ದಾರೆ. ಮಾನ್ಯತಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ  ಕುಟುಂಬದ ಫೋಟೋದಲ್ಲಿ, ಸಂಜಯ್ ತುಂಬಾ ಸುಸ್ತಾದಂತೆ ಕಾಣುತ್ತಿದ್ದಾರೆ.  

PREV
111
ಕಿಮೋಥೆರಪಿ ನಂತರ ಹೇಗಾಗಿದ್ದಾರೆ ನೋಡಿ ನಟ ಸಂಜಯ್‌ದತ್‌!

ಮಾನ್ಯತಾ ಹಂಚಿಕೊಂಡ ಫೋಟೋದಲ್ಲಿ ಸಂಜಯ್  ಕೆನ್ನೆಯ ಮೂಳೆಗಳು ಎದ್ದು ಕಾಣುತ್ತಿದ್ದು, ಮುಖದ ಬಣ್ಣ ಮಾಸಿದೆ. ಅನಾರೋಗ್ಯದಿಂದಾಗಿ ಅವರು ತುಂಬಾ ವೀಕ್‌ ಆಗಿದ್ದಾರೆ. ಆದರೂ, ಫೋಟೋದಲ್ಲಿ, ತಮ್ಮ ದುಃಖ ಮರೆಮಾಚಿ ನಗಲು ಪ್ರಯತ್ನಿಸುತ್ತಿದ್ದಾರೆ.

211

ಮಾನ್ಯತಾ ಅವರು ಫೋಟೋವನ್ನು ಹಂಚಿಕೊಂಡು 'ಇಂತಹ ಒಳ್ಳೆಯ ಕುಟುಂಬವನ್ನು ನೀಡಿದ ದೇವರಿಗೆ ಇಂದು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಯಾವುದೇ ದೂರುಗಳಿಲ್ಲ, ವಿನಂತಿಯಿಲ್ಲ,  ಶಾಶ್ವತವಾಗಿ ಎಲ್ಲರೂ ಒಟ್ಟಿಗೆ ಇರಲಿ ... ಆಮೆನ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ

311

ಸಂಜಯ್ ದತ್‌ ಲಂಗ್ಸ್‌ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ, ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಸಿನಿಮಾ ಶಂಶೇರಾ ಚಿತ್ರದ ಚಿತ್ರೀಕರಣದ ಜೊತೆಗೆ ಚಿಕಿತ್ಸೆಯತ್ತ ಗಮನ ಹರಿಸಿದ್ದಾರೆ.

411

ಇತ್ತೀಚೆಗೆ ಶಂಶೇರಾ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡ ಅವರು ಎರಡು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿದ್ದರು.

511

ಮಾನ್ಯತಾ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್‌ ಮಾಡಿದ್ದರು.  ಪೋಸ್ಟ್‌ನಲ್ಲಿ, ಸಂಜಯ್ ದತ್ ಅವರ ಮನೆಯಲ್ಲಿ ನಿಂತಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ದಿನಗಳನ್ನು ಮರಳಿ ತರಲು ನಾವು ಕೆಟ್ಟ ದಿನಗಳನ್ನು ಹೋರಾಡಬೇಕಾಗಿದೆ. ಎಂದಿಗೂ  ಸೋಲು ಒಪ್ಪಿಕೊಳ್ಳಬೇಡ ಎಂದು ಬರೆದಿದ್ದರು.

611

ಮೊದಲ ಹಂತದ ಚಿಕಿತ್ಸೆ ಪೂರ್ಣಗೊಂಡ ಕೂಡಲೇ ಎರಡನೇ ಹಂತ ಪ್ರಾರಂಭವಾಗಲಿದೆ.  ಸುಮಾರು 10 ದಿನಗಳಲ್ಲಿ ದುಬೈನಿಂದ ಹಿಂದಿರುಗಲಿದ್ದಾರೆ, ನಂತರ ಅವರ ಎರಡನೇ ಕೀಮೋಥೆರಪಿ ಪ್ರಾರಂಭವಾಗುತ್ತದೆ.
 
711

ಚಿಕಿತ್ಸೆಯ ಸಮಯದಲ್ಲಿ, ಲೀಲಾವತಿ ಆಸ್ಪತ್ರೆಯ ವೈದ್ಯರು ಅವರ ಶ್ವಾಸಕೋಶದಿಂದ ಸುಮಾರು 1.5 ಲೀಟರ್ ದ್ರವವನ್ನು ಹೊರತೆಗೆದಿದ್ದರು. ಸುದ್ದಿಯ ಪ್ರಕಾರ, ಅವರ ಶ್ವಾಸಕೋಶದಲ್ಲಿ ಅನಗತ್ಯ ದ್ರವ ಸಂಗ್ರಹವಾಗುತ್ತಿದೆ.

811

ಸಂಜಯ್‌ರ ಈ ಕಷ್ಟದ ಸಮಯದಲ್ಲಿ ಪತ್ನಿ ಮಾನ್ಯತಾ ದತ್ ಅವರ ಜೊತೆ ದೃಢವಾಗಿ ನಿಂತಿದ್ದಾರೆ.

911

ಮಾನ್ಯತಾ ಯಾವಾಗಲೂ  ನಟನನ್ನು ಪ್ರೋತ್ಸಾಹಿಸುತ್ತ  ಗಂಡನ ಆರೋಗ್ಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್‌ಡೇಟ್‌ ಮಾಡುತ್ತಾರೆ.

1011

ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಸಂಜಯ್‌ರನ್ನು ಲೀಲಾವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ  ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅಂದಿನಿಂದ ಸಂಜಯ್ ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದಾರೆ.

1111

ಸಂಜಯ್ ದತ್ ಅವರ ಮುಂಬರುವ ಚಿತ್ರಗಳೆಂದರೆ ಶಂಶೇರಾ, ಕೆಜಿಎಫ್- 2, ಪೃಥ್ವಿರಾಜ್, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಮತ್ತು ಟೊರ್ಬಾಜ್  ಈ ಚಿತ್ರಗಳಲ್ಲಿ ಕೆಲವು ಪೂರ್ಣಗೊಂಡಿದ್ದರೆ, ಕೆಲವು ಶೂಟಿಂಗ್‌ ಕೊನೆ ಹಂತದಲ್ಲಿದೆ.

click me!

Recommended Stories