ಫ್ಯಾಮಿಲಿ ಮ್ಯಾನ್ ನಿರ್ದೇಶಕನೊಂದಿಗೆ ಸಮಂತಾ ಮದುವೆ? ತಿರುಪತಿಗೆ ಬಂದ ಜೋಡಿ

Published : Apr 20, 2025, 01:57 PM ISTUpdated : Apr 20, 2025, 02:09 PM IST

ಸಮಂತಾ ಮತ್ತು ರಾಜ್ ನಿಡಿಮೂರು ಡೇಟಿಂಗ್ ಮಾಡ್ತಿದಾರೆ ಅನ್ನೋ ಸುದ್ದಿಗಳು ಸಾಕಷ್ಟು ದಿನಗಳಿಂದ ಹರಿದಾಡ್ತಿವೆ. ಕೆಲವು ಸಂದರ್ಭಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

PREV
15
ಫ್ಯಾಮಿಲಿ ಮ್ಯಾನ್ ನಿರ್ದೇಶಕನೊಂದಿಗೆ ಸಮಂತಾ ಮದುವೆ? ತಿರುಪತಿಗೆ ಬಂದ ಜೋಡಿ
ಸಮಂತಾ

ನಟಿ ಸಮಂತಾ ನಿರ್ಮಾಪಕಿಯಾಗಿಯೂ ಸಕ್ರಿಯರಾಗಿದ್ದಾರೆ. ಸಮಂತಾ ಅವರ ಬ್ಯಾನರ್ 'ಶುಭಂ' ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ. ಚೈತನ್ಯ ಜೊತೆ ಬೇರ್ಪಟ್ಟ ನಂತರ ಸಮಂತಾ ಸಿಂಗಲ್ ಆಗಿದ್ದಾರೆ.

25

ರಾಜ್ ನಿಡಿಮೂರು 'ಫ್ಯಾಮಿಲಿ ಮ್ಯಾನ್' ಸೀರೀಸ್ ನಿರ್ದೇಶಕರಲ್ಲಿ ಒಬ್ಬರು. ಈ ಸೀರೀಸ್ ನಲ್ಲಿ ಸಮಂತಾ ನಟಿಸಿದ್ದರು. ವಿಚ್ಚೇದನದ ಬಳಿಕ ಸಮಂತಾ ಹೆಸರು ರಾಜ್ ಜೊತೆ ಸುತ್ತುತ್ತಿದೆ.

35
ನಟಿ ಸಮಂತಾ

ಮೊದಲು ಗೆಳೆಯರಾಗಿದ್ದ ಸಮಂತಾ ಮತ್ತು ರಾಜ್ ಈಗ ಪ್ರೀತಿಸುತ್ತಿದ್ದಾರೆ ಮತ್ತು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.

45
ಸಮಂತಾ

ಮೇ ತಿಂಗಳಲ್ಲಿ ಸಮಂತಾ ಮತ್ತು ರಾಜ್ ನಿಡಿಮೂರು ಮದುವೆಯಾಗಲಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದೆ. ಆದರೆ ಇಬ್ಬರೂ ಇದನ್ನು ದೃಢಪಡಿಸಿಲ್ಲ.

55

ಚೈತನ್ಯ ಜೊತೆ ಬೇರ್ಪಟ್ಟ ನಂತರ ಸಮಂತಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈಗ ಹೊಸ ಜೀವನ ಶುರುಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈಗ ಇವರಿಬ್ಬರು ತಿರುಮಲಕ್ಕೆ ಭೇಟಿ ನೀಡಿದ್ದಾರೆ.

Read more Photos on
click me!

Recommended Stories