ಜನರಿಗೆ ಇಷ್ಟವಾಗಿದ್ದೇ ಗುಂಗುರು ಕೂದಲು ಅದನ್ನೇ ಬದಲಾಯಿಸಿಬಿಟ್ರಾ ಸಾಯಿ ಪಲ್ಲವಿ? ಫೋಟೋ ವೈರಲ್

Published : Feb 14, 2025, 04:35 PM ISTUpdated : Feb 14, 2025, 04:37 PM IST

ಲುಕ್ ಬದಲಾಯಿಸಿಕೊಂಡ ಸಾಯಿ ಪಲ್ಲವಿ ...ಗುಂಗುರು ಕೂದಲು ಇಲ್ಲದೇ ನೋಡಲು ಆಗುತ್ತಿಲ್ಲ ಎಂದ ನೆಟ್ಟಿಗರು.... 

PREV
16
ಜನರಿಗೆ ಇಷ್ಟವಾಗಿದ್ದೇ ಗುಂಗುರು ಕೂದಲು ಅದನ್ನೇ ಬದಲಾಯಿಸಿಬಿಟ್ರಾ ಸಾಯಿ ಪಲ್ಲವಿ? ಫೋಟೋ ವೈರಲ್

ಸೌತ್ ಚಿತ್ರರಂಗದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮೇಕಪ್ ಹಚ್ಚದ ಹುಡುಗಿ, ಕೈಯಲ್ಲಿ ರುದ್ರಾಕ್ಷಿ, ಸದಾ ಗುಂಗುರು ಕೂದಲು ಬಿಟ್ಟಿರುವ ಸುಂದರಿ. 

26

ಸಾಯಿ ಪಲ್ಲವಿ ಗುಂಗುರು ಕೂದಲು ಮತ್ತು ಪಿಂಕ್ ಚೀಕ್ಸ್‌ ಬಿಗ್ ಹೈಲೈಟ್. ಆದರೆ ಇದ್ದಕ್ಕಿದ್ದಂತೆ ಕೂದಲು ಸ್ಟ್ರೈಟ್ ಮಾಡಿಸಿಕೊಂಡಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತಂದಿದೆ.

36

ಸ್ಟ್ರೈಟ್ ಹೇರ್ ಅಥವಾ ಗಂಟು...ಇಷ್ಟೇ ಪಲ್ಲವಿ ಕರ್ಲಿ ಕೂದಲಿಗೆ ಸದಾ ಮಾಡುವ ಸ್ಟೈಲ್. ಆದರೆ ಕೆಲವೊಂದು ಫೋಟೋಗಳಿಗೆ ಕೂದಲು ಸ್ಟ್ರೈಟ್‌ ಮಾಡುತ್ತಾರೆ. ಅದೇ ಜನರಿಗೆ ಇಷ್ಟವಾಗಿಲ್ಲ.

46

ಪಲ್ಲವಿ ನಿನ್ನ ಕೂದಲು ಲುಕ್ ಹೆಚ್ಚಿಸುತ್ತದೆ ಯಾಕೆ ಬದಲಾಯಿಸಿರುವುದು? ಪಲ್ಲವಿ ಯಾವುದೇ ಕಾರಣಕ್ಕೂ ಕೂದಲು ಕಟ್ ಮಾಡಬೇಡ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

56

ಇದುವರೆಗೂ ಸಾಯಿ ಪಲ್ಲವಿ ಯಾವುದೇ ಬ್ರಾಂಡ್ ಪ್ರಮೋಷನ್‌ಗಳಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಪಲ್ಲವಿ ಹೀಗಿರುವುದೇ ಜನರಿಗೆ ಇಷ್ಟವಾಗುತ್ತದೆ. ಮೇಕಪ್ ಹಾಕಿದ್ದರೂ ಕೂಡ ಜನರಿಗೆ ಇಷ್ಟವಾಗುವುದಿಲ್ಲ.

66

ನಾನು ಸನ್‌ಕ್ರೀಮ್, ಐ ಲೈನರ್ ಮತ್ತು ಲಿಪ್‌ಬಾಮ್ ಬಿಟ್ಟರೆ ಏನೂ ಹಚ್ಚಿಕೊಳ್ಳುವುದಿಲ್ಲ. ನನಗೆ ಮೇಕಪ್ ಸೂಟ್ ಆಗುವುದಿಲ್ಲ ಅಲ್ಲದೆ ಜನರಿಗೆ ಸಿಂಪಲ್ ಮತ್ತು ನ್ಯಾಚುರಲ್ ಆಗಿರುವುದಕ್ಕೆ ಇಷ್ಟ ಪಟ್ಟಿದ್ದಾರೆ ಎಂದು ಪಲ್ಲವಿ ಈ ಹಿಂದೆ ಹೇಳಿದ್ದರು. 

Read more Photos on
click me!

Recommended Stories