ಮದುವೆ ಪರ್ಸನಲ್, ನೆಟ್ ಫ್ಲಿಕ್ಸ್ 60 ಕೋಟಿ ಆಫರ್ ನಿರಾಕರಿಸಿದ ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ

Published : Feb 14, 2026, 11:31 AM IST

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಎಂಗೇಜ್ಮೆಂಟ್ ಮಿಸ್ಮಾಡ್ಕೊಂಡ ಫ್ಯಾನ್ಸ್, ನೆಟ್ ಫ್ಲಿಕ್ಸ್ ನಲ್ಲಿ ಜೋಡಿ ಮದುವೆ ನೋಡ್ಬಹುದು ಅಂದ್ಕೊಂಡಿದ್ರು. ಆದ್ರೀಗ ನಿರಾಸೆಯಾಗಿದೆ.

PREV
16
ರಶ್ಮಿಕಾ – ವಿಜಯ್ ಮದುವೆ

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarakonda) ಮದುವೆ ವಿಷ್ಯ ಅನೇಕ ದಿನಗಳಿಂದ ಚರ್ಚೆಯಲ್ಲಿದೆ. ವಿಜಯ್ ಹಾಗೂ ರಶ್ಮಿಕಾ ಫೆಬ್ರವರಿ 26 ರಂದು ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯಿದೆ. ಆದ್ರೆ ಈ ಬಗ್ಗೆ ಅಧಿಕೃತ ಮೂಲಗಳಿಂದ ಯಾವುದೇ ಹೇಳಿಕೆ ಬಂದಿಲ್ಲ. ಈ ಮಧ್ಯೆ ರಶ್ಮಿಕಾ – ವಿಜಯ್ ದೇವರಕೊಂಡ ಮದುವೆ ವಿಡಿಯೋಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ನೆಟ್ಫ್ಲಿಕ್ಸ್, ಮದುವೆ ವಿಡಿಯೋ ರೈಟ್ಸ್ ಖರೀದಿಗೆ ಆಸಕ್ತಿ ತೋರಿಸಿತ್ತು. ಮದುವೆ ವಿಡಿಯೋ ಶೂಟ್ ಮಾಡಿ ಸ್ಕ್ರೀಮಿಂಗ್ ಮಾಡಲು 60 ಕೋಟಿ ಆಫರ್ ಕೂಡ ಮಾಡಿತ್ತು. ಆದ್ರೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈ ಆಫರ್ ನಿರಾಕರಿಸಿದ್ದಾರೆ. ಮದುವೆಯನ್ನು ಖಾಸಗಿಯಾಗಿಡಲು ಅವ್ರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

26
ನೆಟ್ ಫ್ಲಿಕ್ಸ್ ಆಫರ್ ನಿರಾಕರಿಸಿದ ಜೋಡಿ

ವಿಜಯ್ ದೇವರಕೊಂಡ, ನೆಟ್ಫ್ಲಿಕ್ಸ್ ನೀಡಿದ್ದ ಆಫರ್ ತಿರಸ್ಕರಿಸಿದ್ದಾರೆ. ಮದುವೆ ವೈಯಕ್ತಿಕ ಮತ್ತು ಅಮೂಲ್ಯವಾದದ್ದು. ಆ ಸುಂದರ ಕ್ಷಣಗಳನ್ನು ಯಾವುದೇ ವೇದಿಕೆಗೆ ಮಾರಾಟ ಮಾಡಲು ಬಯಸುವುದಿಲ್ಲ. ಈ ನೆನಪುಗಳು ಹಣಕ್ಕಿಂತ ಹೆಚ್ಚು ಮೌಲ್ಯಯುತವಾಗಿವೆ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ ಎನ್ನಲಾಗಿದೆ.

36
ಅಭಿಮಾನಿಗಳಿಗೆ ಅಚ್ಚರಿ

ಈ ಸುದ್ದಿ ಅನೇಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಸ್ಟ್ರೀಮಿಂಗ್ ವೇದಿಕೆಗಳು ಸೆಲೆಬ್ರಿಟಿಗಳ ಮದುವೆ ವಿಡಿಯೋಗಳಿಗೆ ದೊಡ್ಡ ಮಟ್ಟದ ಹಣ ಖರ್ಚು ಮಾಡಲು ಸಿದ್ಧವಿರುತ್ವೆ. ಈ ಹಿಂದೆ, ನೆಟ್ಫ್ಲಿಕ್ಸ್ 25 ಕೋಟಿಗೆ ನಯನತಾರಾ ಅವರ ವಿವಾಹದ ಹಕ್ಕುಗಳನ್ನು ಪಡೆದುಕೊಂಡಿತ್ತು. ಮದುವೆ ವಿಡಿಯೋವನ್ನು ನೆಟ್ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಮಾಡಲಾಗಿತ್ತು. ನೆಟ್ ಫ್ಲಿಕ್ಸ್ ವಿಡಿಯೋ ವ್ಯಾಪಕ ಮೆಚ್ಚುಗೆ ಕೂಡ ಗಳಿಸಿತ್ತು. ನಯನತಾರಾ ನಂತ್ರ ಎಲ್ಲ ಸೆಲೆಬ್ರಿಟಿಗಳು ಮದುವೆ ವಿಡಿಯೋ ಸ್ಟ್ರೀಮಿಂಗ್ ಗೆ ಮುಂದೆ ಬರ್ತವೆ ಅಂತ ಅಂದ್ಕೊಳ್ಳಲಾಗಿತ್ತು. ಆದ್ರೆ ವಿಜಯ್ ದೇವರಕೊಂಡ ನಿರ್ಧಾರ ಅಚ್ಚರಿಹುಟ್ಟಿಸಿದೆ.

46
ಫೆ.26ಕ್ಕೆ ಮದುವೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ತಿಲ್ಲ. ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಷ್ಯವನ್ನು ಗೌಪ್ಯವಾಗಿಟ್ಟಿದ್ದಾರೆ. ಅನೇಕ ಬಾರಿ ಪರೋಕ್ಷವಾಗಿ ಪ್ರೀತಿ ವಿಷ್ಯ ಹಂಚಿಕೊಂಡ್ರೂ, ರಶ್ಮಿಕಾ ಪ್ರೀತಿಸ್ತಿರೋ ಹುಡುಗನ ಹೆಸರು ಹೇಳಿಲ್ಲ. ಎಂಗೇಜ್ಮೆಂಟ್ ಗುಟ್ಟನ್ನೂ ಜೋಡಿ ಈವರೆಗೆ ಬಿಟ್ಟುಕೊಟ್ಟಿಲ್ಲ. ಅವರ ಕೈನಲ್ಲಿರುವ ಉಂಗುರ ನೋಡಿ ಅಭಿಮಾನಿಗಳು ಎಂಗೇಜ್ಮೆಂಟ್ ಆಗಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಫೆಬ್ರವರಿ 2 ರಂದು ಉದಯಪುರದಲ್ಲಿ ಮದುವೆ ಎನ್ನುವ ಸುದ್ದಿ ಆರಂಭದಲ್ಲಿ ಹರಡಿತ್ತು. ಅದಕ್ಕೆ ತಯಾರಿ ನಡೆಯುತ್ತಿದೆ ಎನ್ನುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿತ್ತು. ಈಗ ಫೆಬ್ರವರಿ 26ರಂದು ಮದುವೆ ಎನ್ನಲಾಗ್ತಿದ್ದು, ಈ ಬಗ್ಗೆ ವಿಜಯ್ ಅಥವಾ ರಶ್ಮಿಕಾ ಸ್ಪಷ್ಟನೆ ನೀಡ್ಬೇಕಿದೆ.

56
ರಶ್ಮಿಕಾ – ವಿಜಯ್ ಲವ್ ಸ್ಟೋರಿ

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೊದಲ ಬಾರಿ ಗೀತ ಗೋವಿಂದಂ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು. ಡಿಯರ್ ಕಾಮ್ರೇಡ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸೆಟ್ ನಲ್ಲಿ ಇಬ್ಬರ ಸ್ನೇಹ ಪ್ರೀತಿಗೆ ಚಿಗುರಿತ್ತು. ಅಕ್ಟೋಬರ್ 3 ರಂದು ವಿಜಯ್ ಅವರ ಹೈದರಾಬಾದ್ ಮನೆಯಲ್ಲಿ ನಿಶ್ಚಿತಾರ್ಥ ನಡೆದಿದೆ ಎನ್ನಲಾಗ್ತಿದೆ. ಆ ಸಮಾರಂಭದ ಯಾವುದೇ ಫೋಟೋ ಮಾಧ್ಯಮಗಳ ಕೈಗೆ ಸಿಕ್ಕಿಲ್ಲ.

66
ನೆಟ್ಟಿಗರ ಆಶೀರ್ವಾದ

ನೆಟ್ಫ್ಲಿಕ್ಸ್ ನಲ್ಲಿ ಮದುವೆ ವಿಡಿಯೋ ಹಂಚಿಕೆ ನಿರಾಕರಿಸಿದ ರಶ್ಮಿಕಾ ಹಾಗೂ ವಿಜಯ್ ನಿರ್ಧಾರವನ್ನು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಮದುವೆ ಖಾಸಗಿಯಾಗಿರಲಿ, ಮದುವೆಯಾಗಿ ನೂರುಕಾಲ ಬದುಕಿ ಅಂತ ಆಶೀರ್ವಾದ ಮಾಡ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories