ರವೀನಾ ಟಂಡನ್ ಪುತ್ರಿಯ ಆಧ್ಯಾತ್ಮಿಕ ಜರ್ನಿ… ಶಿವಭಕ್ತೆ ರಾಶಾಗೆ 12 ಜ್ಯೋತಿರ್ಲಿಂಗ ದರ್ಶನದ ಗುರಿ

First Published | Jan 16, 2025, 3:35 PM IST

ರವೀನಾ ಟಂಡನ್ ಮಗಳು ರಾಶಾ ತಡಾನಿ 'ಆಜಾದ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.  ಆದರೆ ಆಧ್ಯಾತ್ಮಿಕತೆ ಹೆಚ್ಚು ಪ್ರಾಮುಖ್ಯತೆ ನೀಡುವ, ಶಿವ ಭಕ್ತೆಯಾಗಿರುವ ರಾಶಾ ಆಧ್ಯಾತ್ಮಿಕ ಜರ್ನಿಯ ಕಥೆ ಇಲ್ಲಿದೆ. 
 

ರವೀನಾ ಮಗಳು ಶಿವನ ಭಕ್ತೆ, ರಾಶಾ ತಡಾನಿ ಆಧ್ಯಾತ್ಮಿಕ ಪ್ರಯಾಣ
ರಾಶಾ ತಡಾನಿ ಬಾಲಿವುಡ್ ಸೂಪರ್ ಸ್ಟಾರ್ ನಟಿ ರವೀನಾ ಟಂಡನ್ (Raveena Tondon) ಅವರ ಪುತ್ರಿ. 19 ವರ್ಷದ ರಾಶಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಅವರು 'ಉಯಿ ಅಮ್ಮ' ಹಾಡು ಸಖತ್ ಆಗಿ ವೈರಲ್ ಆಗುತ್ತಿದೆ. ಸದ್ಯಕ್ಕಂತೂ ಜನ ರಾಶಾರ 'ಆಜಾದ್'  ಸಿನಿಮಾ ನಟನೆ ನೋಡೋದಕ್ಕೆ ಕಾಯುತ್ತಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸುತ್ತಿದ್ದು ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ನಟಿಸಿದ್ದಾರೆ.

'ಆಜಾದ್' ಚಿತ್ರದಲ್ಲಿ 'ಊಯಿ ಅಮ್ಮ' ಹಾಡಿಗೆ ಸಖತ್ ನೃತ್ಯ
'ಆಜಾದ್' ಚಿತ್ರದ ನಾಯಕಿ ರಾಶಾ (Rasha Thadani)ಎಂದ ತಕ್ಷಣ ನಟಿಯ ಬಗ್ಗೆ ಹೆಚ್ಚು ಜನ ಸರ್ಚ್ ಮಾಡ್ತಿದ್ದಾರೆ. ತಾಯಿ ರವೀನಾ ಟಂಡನ್ ಅವರ ಅಭಿಮಾನಿಗಳಲ್ಲಿ ಕೂಡ ಸ್ಟಾರ್ ನಟಿಯ ಮಗಳು ಹೇಗೆ ನಟಿಸಲಿದ್ದಾರೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಈ ಚಿತ್ರದಲ್ಲಿ ರಾಶಾ ತನ್ನ ಡ್ಯಾನ್ಸ್ ನಂಬರ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 'ಉಯಿ ಅಮ್ಮ' ಹಾಡು ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆ ನೀಡಿದೆ.

Tap to resize

ರಾಶಾ ತಡಾನಿ ಕೈಯಲ್ಲಿ ಕಪ್ಪು ದಾರ
ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಶಾ ತನ್ನ ಜೀವನದ ವಿಭಿನ್ನ ಅಂಶವನ್ನು ಹಂಚಿಕೊಂಡಿದ್ದು,  ತಮ್ಮ ಆಧ್ಯಾತ್ಮಿಕ ಪ್ರಯಾಣದ  (spiritual journey) ಬಗ್ಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಶಾ ತಮ್ಮ ಮಣಿಕಟ್ಟಿನ ಸುತ್ತ ಸುತ್ತಿದ ಕಪ್ಪು ದಾರಗಳು (black threads) ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ತನ್ನ ಮಣಿಕಟ್ಟಿನ ಪ್ರತಿಯೊಂದು ದಾರವು ತಾನು ಭೇಟಿ ನೀಡಿದ ಜ್ಯೋತಿರ್ಲಿಂಗಕ್ಕೆ ಸೇರಿದೆ ಎಂದಿದ್ದಾರೆ. 
 

12 ಜ್ಯೋತಿರ್ಲಿಂಗಗಳಿಗೆ ಭೇಟಿ
ನಾನು ಭೇಟಿ ನೀಡಿದ ಎಲ್ಲಾ ಜ್ಯೋತಿರ್ಲಿಂಗಗಳಿಂದ (12 Jyotirlinga) ಒಂದೊಂದು ಕಪ್ಪು ದಾರವನ್ನು ಧರಿಸಿದ್ದೇನೆ. ಆದ್ದರಿಂದ, ಕೇದಾರನಾಥ, ಸೋಮನಾಥ ಮತ್ತು ರಾಮೇಶ್ವರಂ ನ ಕಪ್ಪು ದಾರ ಕೂಡ ಇದೆ. ಬದರೀನಾಥದ ದಾರ ಕೂಡ ಒಂದು ಇದೆ. ಆದರೆ, ಇದನ್ನು ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗುವುದಿಲ್ಲ. ನಾನು ಕೊನೆಯದಾಗಿ ಕಾಶಿ ವಿಶ್ವನಾಥನ ದರ್ಶನ ಪಡೆದು ಬಂದಿರೋದಾಗಿ ತಿಳಿಸಿದ್ದಾರೆ. 
 

2025 ರ ಅಂತ್ಯದ ವೇಳೆಗೆ 12 ನೇ ಜ್ಯೋತಿರ್ಲಿಂಗ ದರ್ಶನ
ರಾಶಾ ತಡಾನಿ ಅವರು ಇಲ್ಲಿಯವರೆಗೆ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಹನ್ನೊಂದಕ್ಕೆ ಭೇಟಿ ನೀಡಿದ್ದಾರೆ. 2025 ರ ಅಂತ್ಯದ ಮೊದಲು ನಾಗೇಶ್ವರದ 12 ನೇ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
 

ನಾಗೇಶ್ವರನ ದರ್ಶನ ಬಾಕಿ
ನಾನು ಈಗ 11ಜ್ಯೋತಿರ್ಲಿಂಗ ದರ್ಶನ ಮಾಡಿದ್ದೇನೆ. ಇನ್ನು ಒಂದು ನಾಗೇಶ್ವರ ಜ್ಯೋತಿರ್ಲಿಂಗ ದರ್ಶನ ಮಾತ್ರ ಬಾಕಿ ಇದೆ. ಅದನ್ನು ಈ ವರ್ಷ ದರ್ಶನ ಪಡೆಯುತ್ತೇನೆ. ಆ ಮೂಲಕ 12 ಜ್ಯೋತಿರ್ಲಿಂಗ ದರ್ಶನ ಪಡೆಯುತ್ತೇನೆ ಎಂದಿದ್ದಾರೆ. 

ರಾಶಾ ತಡಾನಿ ಶಿವನ ಭಕ್ತೆ
ರಾಶಾ ತಡಾನಿ ಶಿವನ ಭಕ್ತೆಯಾಗಿದ್ದು (Devotee of Lord Shiva),  ಶಿವನು ಯಾವಾಗಲೂ ತನ್ನೊಂದಿಗೆ ಇದ್ದಾನೆ ಎಂದಿದ್ದಾರೆ. ರಾಶಾ ಭಗವಂತನ ಬಗ್ಗೆ ಸಾಕಷ್ಟು ಪ್ರೀತಿ ಮತ್ತು ನಂಬಿಕೆಯನ್ನು ಹೊಂದಿದ್ದು, ತಮ್ಮ ಜೀವನದ ಪ್ರತಿ ಹಂತದಲ್ಲೂ ಶಿವನನ್ನು ಪೂಜಿಸುತ್ತಲೇ ಇರುತ್ತಾರೆ

ಆಜಾದ್ ಬಿಡುಗಡೆ ದಿನಾಂಕ
'ಆಜಾದ್' ಚಿತ್ರದ ಬಗ್ಗೆ ಹೇಳೋದಾದರೆ, ಇದು ಐತಿಹಾಸಿಕ ಡ್ರಾಮಾ ಚಿತ್ರವಾಗಿದ್ದು, ಅಭಿಷೇಕ್ ಕಪೂರ್ ನಿರ್ದೇಶನದ ಚಿತ್ರ ಇದಾಗಿದೆ. ಇದರಲ್ಲಿ ಅಜಯ್ ದೇವಗನ್, ಡಯಾನಾ ಪೆಂಟಿ ಮತ್ತು ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ನಟಿಸಿದ್ದಾರೆ. ರವೀನಾ ಟಂಡನ್ ಅವರ ಮಗಳು ರಾಶಾ ತಡಾನಿ ಮುಖ್ಯ ಪಾತ್ರದಲ್ಲಿದ್ದಾರೆ. ಇದು ಜನವರಿ 17, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Latest Videos

click me!