ಚಿರುತಾ ನಂತರ ರಾಜಮೌಳಿಯವರ ಜೊತೆ ಮಗಧೀರ ಚಿತ್ರ ಪ್ರಾರಂಭಿಸಬೇಕು. ಆ ಟೈಮ್ನಲ್ಲಿ ರಾಜಮೌಳಿ ನಿನಗೆ ಏನು ಗೊತ್ತು, ಯಾವುದರ ಬಗ್ಗೆ ಜಾಸ್ತಿ ಇಂಟರೆಸ್ಟ್ ಇದೆ ಎಂದು ಕೇಳಿದರು. ಹಾರ್ಸ್ ರೈಡಿಂಗ್ ಅಂದರೆ ತುಂಬಾ ಇಷ್ಟ. ಕಲಿತಿದ್ದೇನೆ ಕೂಡ ಎಂದು ಹೇಳಿದೆ. ಓಹ್ ಹೌದಾ.. ಹಾಗಾದರೆ ನಿನ್ನನ್ನು ಒಂದು ತಿಂಗಳ ನಂತರ ಮತ್ತೆ ಭೇಟಿಯಾಗುತ್ತೇನೆ ಎಂದು ಹೇಳಿದರು. ನನ್ನ ಹಾರ್ಸ್ ರೈಡಿಂಗ್ಗೋಸ್ಕರವೇ ಮಗಧೀರ ಚಿತ್ರದಲ್ಲಿ ರಾಜಮೌಳಿ ಕುದುರೆ ಸನ್ನಿವೇಶಗಳನ್ನು ಹಾಕಿದರು. ಅವು ಸ್ವಲ್ಪ ಸಿನಿಮಾಗೆ ಹೈಲೈಟ್ ಆದವು ಎಂದು ಚರಣ್ ಹೇಳಿದರು. ತಾನು ಸ್ವಂತವಾಗಿ 6 ಕುದುರೆಗಳನ್ನು ಸಾಕುತ್ತಿದ್ದೇನೆ ಎಂದು ಕೂಡ ಚರಣ್ ತಿಳಿಸಿದರು.