ಚಿರಂಜೀವಿ, ರಜನಿಕಾಂತ್ ಇಬ್ಬರೂ ತಮ್ಮ ಕೆರಿಯರ್ ಶುರುವಿನಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಜನಿಕಾಂತ್‌ಗೆ ಅವರ ಹೆಣ್ಣುಮಕ್ಕಳು ಐಶ್ವರ್ಯ ರಜನಿಕಾಂತ್, ಸೌಂದರ್ಯ ರಜನಿಕಾಂತ್ ಅಂದ್ರೆ ಪ್ರಾಣ. ಇವರಿಬ್ಬರೂ ತಂದೆ ಮೇಲೆ ಅಷ್ಟೇ ಪ್ರೀತಿ ಇಟ್ಟಿದ್ದಾರೆ. ಇತ್ತೀಚೆಗೆ ರಜನಿಕಾಂತ್ ದೊಡ್ಡ ಮಗಳು ಐಶ್ವರ್ಯ ರಜನಿಕಾಂತ್ ತನ್ನ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದರು. ಐಶ್ವರ್ಯ ರಜನಿಕಾಂತ್, ಧನುಷ್ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ.