ಆರು ವರ್ಷಗಳ ಡೇಟಿಂಗ್ ನಂತರ 2018 ರ ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೊಮೊದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ವಿವಾಹವಾದರು.
undefined
ಅತಿ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಹಾಜರಿದ್ದ ಖಾಸಗಿ ಸಮಾರಂಭದಲ್ಲಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯಗಳಿಗೆ ಅನುಸಾರವಾಗಿ ವಿವಾಹ ನೆರವೇರಿತು.
undefined
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮನೆಯಲ್ಲಿ ರಾಮ್ ಲೀಲಾ ಚಿತ್ರದ ಆರಂಭದಲ್ಲಿ ಭೇಟಿಯಾದ ನಂತರ ಡೇಟ್ ಮಾಡಲು ಪ್ರಾರಂಭಿಸಿದ್ರು ದೀಪಿಕಾ-ರಣವೀರ್.
undefined
ಪತ್ರಕರ್ತೆಬರ್ಖಾ ದತ್ ಅವರ ಜೊತೆಯ ಹಳೆಯ ಸಂವಾದದಲ್ಲಿ, ರಣವೀರ್ ಜೊತೆ ಮದುವೆಯಾಗಲು ಕಾರಣವನ್ನು ದೀಪಿಕಾ ಬಹಿರಂಗ ಪಡಿಸಿದ್ದಾರೆ.
undefined
ಅವರ ಸಂಬಂಧದ ಆರಂಭದಲ್ಲಿ ನಟಿಯನ್ನ ಯಶಸ್ಸಿನೊಂದಿಗೆ ರಣವೀರ್ ಪ್ರಾಮಾಣಿಕವಾಗಿ ಕಂಫರ್ಟಬಲ್ ಆಗಿದನು ಎಂಬ ಅಂಶವನ್ನು ದೀಪಿಕಾ ತುಂಬಾ ಇಷ್ಟ ಪಟ್ಟರು ಎಂದು ಹೇಳಿದ್ದಾರೆ.
undefined
ತಾನು ದೊಡ್ಡ ಸ್ಟಾರ್ ಆಗಿದೆ, ಅವನಿಗಿಂತ ಹೆಚ್ಚು ಸಂಪಾದಿಸುತ್ತಿದ್ದರೂ ರಣವೀರ್ ಗೌರವಿಸುತ್ತಿದ್ದ ಅದರಿಂದ ನಟನನ್ನು ಮದುವೆಯಾದೆ ಎಂದು ಹೇಳಿದ್ದರು ಪಡುಕೋಣೆ.
undefined
'ನಾನು ರಣವೀರ್ ಅನ್ನು ಮದುವೆಯಾಗಿದ್ದೇನೆ ಏಕೆಂದರೆ ಅವನು ನನ್ನ ಯಶಸ್ಸನ್ನು ಗೌರವಿಸುತ್ತಾನೆ. ಇಬ್ಬರ ಸಂಪಾದನೆಯೂ ಚೆನ್ನಾಗಿಯೇ ಇದೆ. ನಾನು ಹೆಚ್ಚು ಗಳಿಸುತ್ತೇನೆ.. ನೀನು ಹೆಚ್ಚು ಗಳಿಸುತ್ತಿದ್ದೀಯಾ ಎಂಬ ಮಾತು ಬಂದೇ ಇಲ್ಲ.. ಪರಸ್ಪೊರ ಗೌರವ ಹಾಗೆ ಉಳಿದುಕೊಂಡಿದೆ'
undefined
ರಣವೀರ್ ಸಿಂಗ್ ಅವರನ್ನು ಮದುವೆಯಾಗುವ ನಿರ್ಧಾರವನ್ನು ನನ್ನ ಜೀವನದ ಅತ್ಯುತ್ತಮ ನಿರ್ಧಾರ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
undefined
ಕಬೀರ್ ಖಾನ್ ಅವರ ಸಿನಿಮಾ '83' ರಲ್ಲಿ ಈ ಜೋಡಿ ಮತ್ತೊಮ್ಮೆ ತೆರೆ ಮೇಲೆ ರಂಜಿಸಲಿದ್ದಾರೆ.
undefined