ಬಾಲಿವುಡ್ ಮೊದಲ ವೆಬ್‌ ಸಿರೀಸ್‌ನಲ್ಲೇ ಅವಾರ್ಡ್ ಪಡೆದ ಸಮಂತಾ

Published : Aug 21, 2021, 09:25 AM ISTUpdated : Aug 21, 2021, 11:14 AM IST

ವೆಬ್ ಸಿರೀಸ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸಮಂತಾ ಮೊದಲ ಸಿರೀಸ್‌ನಲ್ಲಿ ವೀಕ್ಷಕರ ಮನ ಗೆದ್ದ ಸೌತ್ ನಟಿ ಸಮಂತಾ ಅಕ್ಕಿನೇನಿಗೆ ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್

PREV
18
ಬಾಲಿವುಡ್ ಮೊದಲ ವೆಬ್‌ ಸಿರೀಸ್‌ನಲ್ಲೇ ಅವಾರ್ಡ್ ಪಡೆದ ಸಮಂತಾ
Samantha

ದಿ ಫ್ಯಾಮಿಲಿ ಮ್ಯಾನ್ 2 ಹಿಟ್ ವೆಬ್ ಸರಣಿಯ ಎರಡನೇ ಸೀಸನ್ ಮೂಲಕ ಡಿಜಿಟಲ್ ಗೆ ಎಂಟ್ರಿ ಕೊಟ್ಟ ಸಮಂತಾ ಅಕ್ಕಿನೇನಿ, ಮೆಲ್ಬೋರ್ನ್ ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

 

28

ಈ ಸರಣಿಯಲ್ಲಿ ಎಲ್‌ಟಿಟಿಇ ರಾಜಿಯ ಪಾತ್ರವನ್ನು ಸಮಂತಾ ನಿರ್ವಹಿಸಿದ್ದಾರೆ. ಅದರ ಹೊರತಾಗಿ ಮಲಯಾಳಂ ಚಿತ್ರ 'ದಿ ಗ್ರೇಟ್ ಇಂಡಿಯನ್ ಕಿಚನ್' ಗೂ ವಿಶೇಷ ವರ್ಗದಲ್ಲಿ ಅವಾರ್ಡ್ ನೀಡಲಾಗಿದೆ.

38

ತನ್ನ ಅಭಿಮಾನಿಗಳು ಮತ್ತು ನಿರ್ದೇಶಕ ರಾಜ್ ಮತ್ತು ಡಿಕೆ ಅವರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ ನಟಿ ಥ್ಯಾಂಕ್ಸ್ ನೋಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

48

ಥ್ಯಾಂಕ್ಯೂ @iffmelbourne. ನಾನು ತುಂಬಾ ಕೃತಜ್ಞನಾಗಿದ್ದೇನೆ. ಅನೇಕರು ಹಿಂದೆ ಮುಂದೆ ನೋಡಲಾಗದ 'ಮುದ್ದಾದ ಹುಡುಗಿ'ಯ ಸಿನಿಮಾವನ್ನು ಮೀರಿ ಇದನ್ನು ನೋಡಲು ಸಾಧ್ಯವಾಗಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

58

family man 2 

ತೀವ್ರ ಪಾತ್ರ. #ರಾಜಿ ನನ್ನನ್ನು ಆಳವಾಗಿ ಆಲೋಚಿಸುವಂತೆ, ಅಧ್ಯಯನ ಮಾಡುವಂತೆ ಒತ್ತಾಯಿಸಿತ್ತು. ಪರ್ಫಾಮೆನ್ಸ್‌ಗಾಗಿ ಅನುಮೋದನೆಯ ಪ್ರಮಾಣಪತ್ರವನ್ನು ಸ್ವೀಕರಿಸಲು ನನಗೆ ಇಂದು ತುಂಬಾ ಸಂತೋಷವಾಗಿದೆ. "

68

ಸಮಂತಾ ಅವರು ರಾಜಿ ಪಾತ್ರಕ್ಕಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದಿದ್ದಾರೆ. ನಟಿ ಮೊದಲ ಬಾರಿಗೆ ಅಂತಹ ತೀವ್ರವಾದ ಪಾತ್ರವನ್ನು ಮಾಡಿದ್ದು ಭಾರೀ ಸುದ್ದಿಯಾಗಿದೆ.

78

ಅವರು ಫ್ಯಾಮಿಲಿ ಮ್ಯಾನ್ 2 ನಲ್ಲಿ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದು ಮನೋಜ್ ಬಾಜಪೇಯಿ ಮತ್ತು ಪ್ರಿಯಾಮಣಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಇಲ್ಲಿಯವರೆಗೂ ರೊಮ್ಯಾಂಟಿಕ್ ಹಿರೋಯಿನ್ ಪಾತ್ರದಲ್ಲಿದ್ದ ಸಮಂತಾ ನಟನಾ ಕೌಶಲ್ಯ ಈ ಸಿರೀಸ್‌ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

88

ನಿರ್ದೇಶಕ ಜಿಯೋ ಬೇಬಿಯವರ ಸಾಮಾಜಿಕ-ವಿಮರ್ಶಾತ್ಮಕ ಮಲಯಾಳಂ ಚಿತ್ರ 'ದಿ ಗ್ರೇಟ್ ಇಂಡಿಯನ್ ಕಿಚನ್' ಗೆ ಐಎಫ್‌ಎಫ್‌ಎಂ 2021 ರಲ್ಲಿ ಸಿನಿಮಾದಲ್ಲಿ ವಿಶೇಷ ಪ್ರಶಂಸೆ ಸಿಕ್ಕಿದೆ

click me!

Recommended Stories