16ನೇ ವಯಸ್ಸಿಗೆ ವೇಶ್ಯಾವಾಟಿಕೆಗೆ ಇಳಿದವಳಿಂದು ಬಾಲಿವುಡ್‌ನ ಯಶಸ್ವಿ ರೈಟರ್!

First Published May 10, 2020, 10:52 PM IST

16 ನೇ ವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಇಳಿದು ನಂತರ ಬಾರ್-ನರ್ತಕಿ, ಬಾರ್-ಗಾಯಕಿ ಆಗಿದ್ದವರು ಶಗುಫ್ತಾ ರಫೀಕ್. ಶಗುಫ್ತಾರ ಮುಂದಿನ ಪ್ರಯಾಣವು ಒಂದು ಕಾಲ್ಪನಿಕ ಕಥೆಯಂತೆ ಮುಂದುವರಿಯಿತಿ. ಇಂದು ಶಗುಫ್ತಾ ರಫೀಕ್ ಬಾಲಿವುಡ್‌ನ ಯಶಸ್ವಿ ಸ್ಕ್ರೀಪ್ಟ್‌ ರೈಟರ್‌ ಹಾಗೂ ನಿರ್ದೇಶಕಿ. ತಮ್ಮ ಜೀವನದ ಕಥೆಯನ್ನು ಸ್ವತಃ ಅವರೇ ಬರೆದು ರೂಪಿಸಿಕೊಂಡ ಅವರ ಜೀವನವೇ ಒಂದು ಹೋರಾಟ.

ಬಾಲಿವುಡ್‌ನ ಅತ್ಯಂತ ಯಶಸ್ವಿ ಚಿತ್ರಕಥೆಗಾರರಲ್ಲಿ ಒಬ್ಬರು ಶಗುಫ್ತಾ ರಫೀಕ್.
undefined
ಹಣದ ಕೊರತೆ ಮತ್ತು ಮಲತಾಯಿಯಿಂದ ಸಾಕಷ್ಟು ಕಷ್ಟಗಳನ್ನೂ ಅನುಭವಿಸಿದ ಶಗುಫ್ತಾ.
undefined
ಶಗುಫ್ತಾ 16ನೇ ವಯಸ್ಸಿಗೆ ವೇಶ್ಯಾವಾಟಿಕೆಗೆ ಇಳಿಯುವಂತೆ ಮಾಡಿತ್ತು ಜೀವನ. ಮನೆಯವರನ್ನು ಸಾಕಲು 10 ವರ್ಷಗಳ ಕಾಲ ಮೈ ಮಾರಿಕೊಂಡಿದ್ದರು.
undefined
ನಂತರ ಬಾರ್‌ ಡ್ಯಾನ್ಸರ್‌ ಹಾಗೂ ಬಾರ್‌ ಸಿಂಗರ್‌ ಆಗಿ ತಮ್ಮ ಜೀವನವನ್ನೂ ಪ್ರತಿ ಮಗ್ಗಲಿನಲ್ಲೂ ಬದಲಿಸಿಕೊಂಡ ಛಲಗಾತಿ.
undefined
ಬಾರ್‌ ಡ್ಯಾನ್ಸರ್‌ ಆಗಿ ಕೆಲಸ ಮಾಡುತ್ತಲೇ, ಶಗುಪ್ತಾ ಭೇಟಿ ಮಾಡುತ್ತಿದ್ದ ಜನರ ಕಥೆಗಳನ್ನು ಬರೆಯುತ್ತಿದ್ದರು.
undefined
'ನಾನು ಪ್ರೊಡಕ್ಷನ್ ಹೌಸ್‌ಗಳಿಗೆ, ಟಿವಿ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ ಮತ್ತು ಬರಹಗಾರಳಾಗಿ ಕೆಲಸ ಕೇಳುತ್ತಿದ್ದೆ ಎಂದು ಅವರು ಹೇಳುತ್ತಾರೆ.
undefined
2000ರಲ್ಲಿ, ಹಲವಾರು ವಿಫಲ ಪ್ರಯತ್ನಗಳ ನಂತರ, ರಫೀಕ್ ಮಹೇಶ್ ಭಟ್ ಅವರನ್ನು ಮೀಟ್‌ ಮಾಡಿದರು.ತುಂಬಾ ದಿನಗಳ ನಂತರ ಮಹೇಶ್‌ ಭಟ್‌ರ ಪ್ರೊಡಕ್ಷನ್ ಹೌಸ್ ನಿರ್ಮಿಸಿದ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಬರೆಯುವ ಅವಕಾಶ ಒದಗಿ ಬಂತು.
undefined
ಅಂತಿಮವಾಗಿ ತನ್ನ 37ನೇ ವಯಸ್ಸಿನಲ್ಲಿ ರಫೀಕ್ ತನ್ನ ಮೊದಲ ಚಿತ್ರ ವೊಹ್ ಲಹ್ಮೆ(2006)ಗಾಗಿ ಕೆಲಸ ಮಾಡಿದರು.
undefined
ಅಂದಿನಿಂದ ಬಾಲಿವುಡ್‌ನ ಹಲವು ಕಲವಿದರೊಂದಿಗೆ 11 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಚಿತ್ರಕಥೆಗಳ ಮೇಲೆ ಅವರ ಜೀವನದ ಪ್ರಭಾವ ಎದ್ದು ಕಾಣುತ್ತದೆ.
undefined
ಶಗುಫ್ತಾ ಅವರ ವೃತ್ತಿಜೀವನದಲ್ಲಿ ಲಾಮ್ಹೆ, ರಾಜ್, ಮರ್ಡರ್ -2, ಜಿಸ್ಮ್ -2, ಜನ್ನತ್ -2, ರಾಜ್ -3 ಡಿ ಹಮರಿ ಅಧೂರಿ ಕಹಾನಿಯಂತಹ ಹಲವಾರು ಹಿಟ್ ಚಲನಚಿತ್ರಗಳು ಸೇರಿವೆ.
undefined
click me!