ಡ್ರಾಗನ್ ಸಿನಿಮಾದಲ್ಲಿ ಬರುವಂತೆ ಪ್ರದೀಪ್ ರಂಗನಾಥನ್ ಶಾಲೆಯಲ್ಲಿ ಓದಿನಲ್ಲಿ ಬಹಳ ಮುಂದಿದ್ದರು. ಅವರು 12ನೇ ತರಗತಿಯಲ್ಲಿ 1200 ಕ್ಕೆ 1163 ಅಂಕಗಳನ್ನು ಪಡೆದು ಚೆನ್ನೈನ ಪ್ರಸಿದ್ಧ ಖಾಸಗಿ ಕಾಲೇಜಿನಲ್ಲಿ ಮೆರಿಟ್ ಮೇಲೆ ಇಂಜಿನಿಯರಿಂಗ್ ಸೇರಿದರು. ಅವರು ಓದುತ್ತಿದ್ದ ಕಾಲೇಜಿನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತಂತೆ, ಹಾಗಾಗಿ ಅವರಿಗೆ ಓದಿನ ಮೇಲಿನ ಆಸಕ್ತಿ ಕಡಿಮೆಯಾಗಿ ಸಿನಿಮಾ ಮೇಲೆ ಮೋಹ ಉಂಟಾಯಿತು. ಅದಕ್ಕೆ ಕಾಲೇಜಿಗೆ ಹೋಗುವಾಗಲೇ ಕಿರುಚಿತ್ರಗಳನ್ನು ತೆಗೆಯಲು ಪ್ರಾರಂಭಿಸಿದರು ಪ್ರದೀಪ್.