ಸೈಫ್‌ ಆಲಿ ಖಾನ್‌ಗೆ ಸೋಹಾ ಬಿಟ್ಟು ಮತ್ತೊಬ್ಬ ತಂಗಿ ಇದ್ದಾಳೆ ಗೊತ್ತಾ?

First Published | Dec 23, 2020, 4:52 PM IST

ಪಟೌಡಿ ಕುಟುಂಬದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಟೀಮ್‌ ಇಂಡಿಯಾದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಹಿಡಿದು ಅವರ ಪತ್ನಿ ಮತ್ತು ಬಾಲಿವುಡ್‌ನ ನಟಿ ಶರ್ಮಿಳಾ ಟ್ಯಾಗೋರ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅವರ ಮಕ್ಕಳಾದ ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಜೊತೆಗೆ ಮೊಮ್ಮಗ್ಗಳು ಸಾರಾ ಆಲಿ ಖಾನ್‌ ಸಹ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಅದರ ಜೊತೆಗೆ ಸೈಫ್‌ ಮೊದಲ ಹೆಂಡತಿ ಅಮೃತಾ ಸಿಂಗ್‌ ಸಹ ಸಿನಿಮಾರಂಗಕ್ಕೆ ಸೇರಿದವರು. ಅಷ್ಟೇ ಅಲ್ಲ ಸೋಹಾ ಪತಿ ಕುನಾಲ್‌ ಖೇಮು ಕೂಡ ನಟನೇ. ಇನ್ನೂ ಪಟೌಡಿ ಖಾಂದಾನ್‌ನ ಫೇವರೇಟ್‌ ಸೊಸೆ ಕರೀನಾ ಕಪೂರ್‌ ಬಗ್ಗೆ ಹೇಳುವುದೇ ಬೇಡ.ಶರ್ಮಿಳಾ ಹಾಗೂ ಮನ್ಸೂರ್‌ ಆಲಿ ಖಾನ್‌ರ ಉಳಿದೆರಡು ಮೊಮ್ಮಕ್ಕಳಾದ ಇಬ್ರಾಹಿಂ ಹಾಗೂ ತೈಮೂರ್‌ ಅಲಿ ಖಾನ್ ಸ್ಟಾರ್ ಕಿಡ್ಸ್ ಆಗಿ ಫೇಮಸ್. ಪ್ರಚಾರದಿಂದ ಸದಾ ದೂರ ಇರುವ ಇನ್ನೊಬ್ಬರಿದ್ದಾರೆ ಈ ರಾಯಲ್‌ ಫ್ಯಾಮಿಲಿಯಲ್ಲಿ. ಅವರೇ ಪಟೌಡಿಯ ಎರಡನೇ ಮಗಳು ಸಬಾ ಅಲಿ ಖಾನ್.

ಶರ್ಮಿಳಾ ಟ್ಯಾಗೋರ್‌ ಹಾಗೂ ಮನ್ಸೂರ್ ಅಲಿ ಖಾನ್ ಪಟೌಡಿ ದಂಪತಿಗೆ ಮೂರು ಮಕ್ಕಳು.ಸೈಫ್‌ ಆಲಿ ಖಾನ್‌, ಸೋಹಾ ಆಲಿ ಖಾನ್‌ ಹಾಗೂ ಸಾಬಾ ಆಲಿ ಖಾನ್‌.
ಹಲವು ಸ್ಟಾರ್ಸ್‌ ನೀಡಿರುವ ಕುಟುಂಬದಲ್ಲಿ ಜನಿಸಿದರೂ, ಸೈಫ್ ಅಲಿ ಖಾನ್ ಪುಟ್ಟ ತಂಗಿ ಸಾಬಾ ಬಾಲಿವುಡ್‌ನಿಂದ ದೂರವಿರಲು ಆಯ್ಕೆ ಮಾಡಿಕೊಂಡಿದ್ದಾರೆ.
Tap to resize

ಪಟೌಡಿ ಪ್ಯಾಮಿಲಿಯ ಕೊನೆ ಮಗಳು ಸಾಬಾ ಆಲಿ ಖಾನ್‌ ಯಶಸ್ವಿ ಜ್ಯುವೆಲ್ಲರಿ ಡಿಸೈನರ್.
ಸಬಾ 1976ರಲ್ಲಿ ಮುಂಬೈನಲ್ಲಿ ಜನಿಸಿದ್ದು, ಆಕೆ ಚಿಕ್ಕವಳಿದ್ದಾಗ ಫ್ಯಾಮಿಲಿ ದೆಹಲಿಗೆ ತೆರಳಿತು.
ಸ್ಟಾರ್ ಕಿಡ್‌ಗಳು ನಟನೆಯನ್ನು ಆರಿಸಿಕೊಳ್ಳುವುದು ಕಾಮನ್‌. ಆದರೆ ಇದಕ್ಕೆ ವಿರುದ್ಧವಾಗಿ ಸಬಾ ದೆಹಲಿ ಕಾಲೇಜ್ ಆಫ್ ಆರ್ಟ್ಸ್‌ನಿಂದ ಪದವಿ ಮುಗಿಸಿದರು.
ಆಭರಣ ವಿನ್ಯಾಸಕಿಯಾಗಲು ಬಯಸಿ ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕಾದಲ್ಲಿ ಜೆಮಾಲಜಿ ಆಂಡ್‌ ಡಿಸೈನ್‌ ಡಿಪ್ಲೊಮಾ ಪಡೆದರು.
ಫ್ಯುಶನ್‌ ಜ್ಯುವೆಲರಿಯ ಕೆಲಸ ಮಾಡಲು ಇಷ್ಟಪಡುವ ಪ್ರಸಿದ್ಧ ಆಭರಣ ವಿನ್ಯಾಸಕಿ ಸಬಾ ತನ್ನದೇ ಆದ ಡೈಮೆಂಡ್‌ ರೇಂಜ್‌ ಹೊಂದಿದ್ದಾರೆ.
ಸಹೋದರ ಸೈಫ್ ಅಲಿ ಖಾನ್ ತನ್ನ ಅಂದಿನ ಗರ್ಲ್‌ಫ್ರೆಂಡ್‌ ಹಾಗೂ ಪತ್ನಿ ಕರೀನಾಗೆ ಗಿಫ್ಟ್‌ ಮಾಡಲು ಹೊಸ ಜ್ಯುವೆಲ್ಲರಿ ಡಿಸೈನ್‌ ಮಾಡಲು ತಂಗಿ ಸಬಾಗೆ ಕೇಳಿಕೊಂಡಿದ್ದರಂತೆ.
2011ರಲ್ಲಿ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮರಣದ ನಂತರ, ಭೋಪಾಲ್‌ನ ರಾಯಲ್ ಟ್ರಸ್ಟ್‌ನ ಕಸ್ಟಡಿಯನ್‌ ಅಗಿ ಸಬಾ ಅವರನ್ನು ನೇಮಿಸಲಾಗಿದೆ.
ತಮ್ಮ ತಂದೆಯ ಮರಣದ ನಂತರ ಸೈಫ್ ನವಾಬ್ ಆಫ್ ಪಟೌಡಿ ಎಂದು ಹೆಸರು ಪಡೆದರೆ, ಸಬಾ ಭೋಪಾಲ್ ಟ್ರಸ್ಟ್‌ನ ಮುಖ್ಯ ಟ್ರಸ್ಟಿಯಾದರು.
ಔಕಾಫ್-ಎ-ಶಾಹಿಯ ಮುಖ್ಯಸ್ಥರಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಔಕಾಫ್-ಎ-ಶಾಹಿ ಟ್ರಸ್ಟ್‌ನ ಮುತವಾಲ್ಲಿ ಆಗಿ, ಭೋಪಾಲ್ ಮತ್ತು ಸೌದಿ ಅರೇಬಿಯಾದಲ್ಲಿನ 1000 ಕೋಟಿ ರೂ ಆಸ್ತಿಗಳನ್ನು ನೋಡಿಕೊಳ್ಳುತ್ತಾರೆ.
ಇದಲ್ಲದೆ, ತನ್ನ ತಾಯಿಯ ರೂ. 2700 ಕೋಟಿ ಮೌಲ್ಯದ ಆಸ್ತಿಯನ್ನು ಸಹ ನೋಡಿಕೊಳ್ಳುತ್ತಿದ್ದಾರೆ.
44 ವರ್ಷದ ಸಾಬಾ ಅವಿವಾಹಿತೆ.
ಸಹೋದರಿ ಸೋಹಾರ ಮದುವೆಯಲ್ಲಿ ಫ್ಯಾಮಿಲಿ ಜೊತೆ ಸಾಬಾ.
ಒಡಹುಟ್ಟಿದವರ ಜೊತೆ ಸಬಾ ಆಲಿ ಖಾನ್‌.

Latest Videos

click me!