ಬೋಲ್ಡ್ ಬ್ಯೂಟಿ ಆ್ಯಮಿ ಜಾಕ್ಸನ್ ಪರ್ಸನಲ್ ಲೈಫ್ ಮತ್ತೆ ಚರ್ಚೆಯಾಗುತ್ತಿದೆ.
ಮದುವೆಗೆ ಮುಂಚೆಯೇ ಗರ್ಭಿಣಿಯಾಗಿ ಸರ್ಪ್ರೈಸ್ ಕೊಟ್ಟಿದ ಆ್ಯಮಿ ಫ್ಯಾನ್ಸ್‌ಗೆ ಈಗ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಈಗ ನಟಿ ತನ್ನ ಫೋಟೋಗಳನ್ನು ಇನ್ಸ್ಟಾಗ್ರಾಮ್ ಪೇಜ್‌ನಿಂದ ಡಿಲಿಟ್ ಮಾಡಿದ್ದು ಅವರು ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ರೂಮರ್‌ಗೆ ಕಾರಣವಾಗಿದೆ.
ಆ್ಯಮಿ ಜಾಕ್ಸನ್ ಅವರ ಫಿಯಾನ್ಸಿ ಬ್ರಿಟಿಷ್ ಉದ್ಯಮಿ ಜಾರ್ಜ್ ಪನಾಯೊಟೌ ಜೊತೆಗಿನ ಫೋಟೋಗಳನ್ನು ತೆಗೆದುಹಾಕಿದ್ದಾರೆ.
ನಟಿಯ ಫ್ಯಾನ್ಸ್ ಮತ್ತು ಫಾಲೋವರ್ಸ್ ಎಲ್ಲಾ ಸರಿಯಾಗಿ ಇದ್ದೀಯಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಜಾಕ್ಸನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಾರ್ಜ್ ಪನಾಯೋಟೌಗೆ ಸಂಬಂಧಿಸಿದ ಹಲವಾರು ಪೋಸ್ಟ್‌ಗಳನ್ನು ಡಿಲಿಟ್ ಮಾಡಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಕಪಲ್‌ಗೆ 19 ಸೆಪ್ಟೆಂಬರ್ 2019 ರಂದು ಜನಿಸಿದ ಆಂಡ್ರಿಯಾಸ್ ಎಂಬ ಮಗನಿದ್ದಾನೆ.
ಜಾಕ್ಸನ್ ಜಾರ್ಜ್ ಪನಾಯೊಟೌ ಅವರು 2020 ರಲ್ಲಿ ಗ್ರೀಸ್‌ನ ಮೈಕೊನೊಸ್‌ನಲ್ಲಿ ಗ್ರ್ಯಾಂಡ್ ವೆಡ್ಡಿಂಗ್ ಪ್ಲಾನ್ ಮಾಡಿದ್ದರು. ಆದರೆ ಈಗ ವಿಷಯ ಇನ್ನೊಂದು ದಿಕ್ಕಿನತ್ತ ಹೋಗುತ್ತಿದೆ.
ಜಾರ್ಜ್ ಪನಾಯೋಟೌ ಅವರು ಬ್ರಿಟನ್‌ನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಆಂಡ್ರಿಯಾಸ್ ಪನಾಯೊಟೌ ಅವರ ಮಗ. ಜಾರ್ಜ್ ಅವರ ಸ್ವಂತ ನೆಟ್ ವರ್ತ್ 22 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಜಾರ್ಜ್ ಪನಾಯೋಟೌ ಅವರ ತಂದೆ ಜೊತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆ ಹಾಗೂ ಲಂಡನ್‌ನಲ್ಲಿ ಅನೇಕ ಐಷಾರಾಮಿ ಹೋಟೆಲ್‌ಗಳನ್ನು ಹೊಂದಿದ್ದಾರೆ.
ಜಾರ್ಜ್ ಪನಾಯೋಟೌ ಅವರ ತಂದೆ ಜೊತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆ ಹಾಗೂ ಲಂಡನ್‌ನಲ್ಲಿ ಅನೇಕ ಐಷಾರಾಮಿ ಹೋಟೆಲ್‌ಗಳನ್ನು ಹೊಂದಿದ್ದಾರೆ.
ಸುದೀಪ್ ಮತ್ತು ಶಿವರಾಜ್ ಕುಮಾರ್ ಜೊತೆ ವಿಲನ್ ಸಿನಿಮಾದಲ್ಲಿ ನಟಿಸಿರು ಜಾಕ್ಸನ್ ದಕ್ಷಿಣದಲ್ಲೂ ಭಾರಿ ಫ್ಯಾನ್ಸ್ ಹೊಂದಿದ್ದಾರೆ.
ರಜನಿಕಾಂತ್ ಜೊತೆ ರೋಬೋಟ್ 2.0. ಸಿನಿಮಾದಲ್ಲೂ ಕೆಲಸ ಮಾಡಿರುವ ಈ ನಟಿ ಇನ್ಸ್ಟಾದಲ್ಲಿ 9.9 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.