ದೀಪ್‌ವೀರ್‌ಗೆ ಹುಟ್ಟಲಿರುವ ಮಗು ಈ ಕೋಟ್ಯಂತರ ರೂಪಾಯಿ ಆಸ್ತಿಗೆ ವಾರಸುದಾರ/ರ್ತಿ

Published : Mar 13, 2024, 04:13 PM ISTUpdated : Mar 13, 2024, 04:17 PM IST

ಈ ವರ್ಷ ಸೆಪ್ಟೆಂಬರ್‌ನಲ್ಲಿ ಹುಟ್ಟಲಿರುವ ಮಗು  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಪಾರ ಆಸ್ತಿಗೆ ವಾರಸುದಾರ ಆಗಲಿದೆ. ಈ ಜೋಡಿ ಹೊಂದಿರುವ ಪ್ರಮುಖ ಆಸ್ತಿಗಳೇನು ನೋಡೋಣ.

PREV
113
ದೀಪ್‌ವೀರ್‌ಗೆ ಹುಟ್ಟಲಿರುವ ಮಗು ಈ ಕೋಟ್ಯಂತರ ರೂಪಾಯಿ ಆಸ್ತಿಗೆ ವಾರಸುದಾರ/ರ್ತಿ

ಬಾಲಿವುಡ್‌ನ ಪವರ್ ಕಪಲ್ ಎಂದ್ರೆ ಅದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಈ ಜೋಡಿ ಇದೀಗ ತಮ್ಮ ಮಗುವಿನ ಆಗಮನದ ಸಂಭ್ರಮದಲ್ಲಿದೆ.

213

ಈ ವರ್ಷ ಸೆಪ್ಟೆಂಬರ್‌ನಲ್ಲಿ ಹುಟ್ಟಲಿರುವ ಮಗು ಇವರಿಬ್ಬರ ಅಪಾರ ಆಸ್ತಿಗೆ ವಾರಸುದಾರ ಆಗಲಿದೆ. ಈ ಜೋಡಿ ಹೊಂದಿರುವ ಪ್ರಮುಖ ಆಸ್ತಿಗಳೇನು ನೋಡೋಣ.

313
Deepika Ranveer

ವಿವಿಧ ವರದಿಗಳ ಪ್ರಕಾರ ರಣವೀರ್ ಸಿಂಗ್ ಅವರ ಪ್ರಸ್ತುತ ನಿವ್ವಳ ಮೌಲ್ಯ ಸುಮಾರು 362 ಕೋಟಿ ಎಂದು ಅಂದಾಜಿಸಲಾಗಿದೆ. ನಟ ಪ್ರತಿ ಚಿತ್ರಕ್ಕೆ ಸುಮಾರು 20 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ. 

413

ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಅವರ ಪ್ರಯಾಣವು 2007 ರಲ್ಲಿ 'ಓಂ ಶಾಂತಿ ಓಂ' ನೊಂದಿಗೆ ಪ್ರಾರಂಭವಾಯಿತು ಮತ್ತು ನಂತರ ಅವರು ಉದ್ಯಮದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಚಿತ್ರವೊಂದಕ್ಕೆ 10- 13 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

 

513

ಇದಲ್ಲದೆ ದೀಪಿಕಾ ನಿರ್ಮಾಣ ಸಂಸ್ಥೆ ಕಾ ಪ್ರೊಡಕ್ಷನ್ಸ್, ಸ್ಕಿನ್‌ಕೇರ್ ಬ್ರ್ಯಾಂಡ್ 82 ° E ಸೇರಿದಂತೆ ಅಪಾರ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. 

613

ಈ ಎಲ್ಲ ಆಸ್ತಿ, ವ್ಯವಹಾರಗಳನ್ನು ಸಂಯೋಜಿಸಿದಾಗ ದೀಪಿಕಾ ನಿವ್ವಳ ಮೌಲ್ಯವು ರೂ 497 ಕೋಟಿಗಳನ್ನು ತಲುಪುತ್ತದೆ ಎಂದು ವರದಿಯಾಗಿದೆ.

713

ಒಟ್ಟಿಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಒಟ್ಟು ನಿವ್ವಳ ಮೌಲ್ಯವು ಸರಿಸುಮಾರು ರೂ. 860 ಕೋಟಿ ಆಗುತ್ತದೆ. ಈ ಎಲ್ಲ ಆಸ್ತಿಯು ಹುಟ್ಟಲಿರುವ ಮಗುವನ್ನು ಹುಟ್ಟುತ್ತಲೇ ಕೋಟ್ಯಂತರ ರೂ. ಆಸ್ತಿಗೆ ಒಡೆಯನಾಗಿಸಲಿದೆ. 

 

813

ಈ ಜೋಡಿ ಹೊಂದಿರುವ ಆಸ್ತಿಯಲ್ಲಿ ಪ್ರಮುಖವಾದುದು ಮುಂಬೈನ ಬ್ಯೂಮೊಂಡೆ ಟವರ್ಸ್‌ನ ಟವರ್ ಬಿ ಯ 26 ನೇ ಮಹಡಿಯಲ್ಲಿ 40 ಕೋಟಿ ರೂ.ಗಳ 4BHK ಫ್ಲಾಟ್. ಹಾಗೂ ಅಲಿಬಾಗ್‌ನಲ್ಲಿ 22 ಕೋಟಿ ರೂಪಾಯಿಗಳ ಬಂಗಲೆ. 

913

ದೀಪಿಕಾ ಮತ್ತು ತಂದೆ ಪ್ರಕಾಶ್ ಪಡುಕೋಣೆ ಅವರು ಬೆಂಗಳೂರಿನಲ್ಲಿ 6.79 ಕೋಟಿ ರೂ.ಗೆ  ಸರ್ವಿಸ್ಡ್ ಅಪಾರ್ಟ್‌ಮೆಂಟ್ ಅನ್ನು ನೋಂದಾಯಿಸಿದ್ದಾರೆ. 

1013

ಬಾಂದ್ರಾದಲ್ಲಿ 119 ಕೋಟಿ ರೂಪಾಯಿ ಮೌಲ್ಯದ ಕ್ವಾಡ್ರಪ್ಲೆಕ್ಸ್ ಜಾಗವನ್ನು ಖರೀದಿಸಿದ್ದಾರೆ. ಅವರ ಹೊಸ ಮನೆ ಶಾರುಖ್ ಖಾನ್ ಅವರ ಐಕಾನಿಕ್ ಬಂಗಲೆ ಮನ್ನತ್ ಬಳಿ ಇರುವ ವಸತಿ ಕಟ್ಟಡದ 16, 17, 18 ಮತ್ತು 19 ನೇ ಮಹಡಿಗಳಲ್ಲಿದೆ. 

1113

ಖಾರ್‌ನಲ್ಲಿ ರಣವೀರ್ ಸಿಂಗ್ ಅವರು ಕುಟುಂಬದ ದೊಡ್ಡ ಬಂಗಲೆ ಹೊಂದಿದ್ದಾರೆ. ಆಸ್ತಿಯ ಬೆಲೆ ತಿಳಿದಿಲ್ಲ. ದೀಪಿಕಾ ಮದುವೆಯಾಗುವ ಮುನ್ನ ನಟ ಇಲ್ಲಿಯೇ ವಾಸಿಸುತ್ತಿದ್ದರು. 

1213

ಖಾರ್‌ನಲ್ಲಿನ ಬಂಗಲೆಯ ಜೊತೆಗೆ, ವರ್ಲಿಯಲ್ಲಿ ಅದ್ದೂರಿ ಮನೆ ಮತ್ತು ಅಲಿಬಾಗ್‌ನಲ್ಲಿ ವಿಹಾರ ಗೃಹ, ಪ್ರಭಾದೇವಿಯಲ್ಲಿ ಐಷಾರಾಮಿ 4-BHK ಮನೆಯನ್ನು ಹೊಂದಿದ್ದಾರೆ.

 

1313

ಇದಲ್ಲದೆ ಈ ಜೋಡಿಯು 2.80 ಕೋಟಿ ರೂಪಾಯಿಗಳಮರ್ಸಿಡಿಸ್ ಮೇಬ್ಯಾಕ್ GLS600, 3.29 ಕೋಟಿ ರೂ. ನ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್, 4.22 ಕೋಟಿ ರೂಪಾಯಿಯ ಲ್ಯಾಂಬೋರ್ಗಿನಿ ಉರುಸ್, ಆಡಿ Q5, ಜಾಗ್ವಾರ್ XJ ಎಲ್, ಲ್ಯಾಂಡ್ ರೋವರ್ ಇಬ್ಬರ ವ್ಯಾನಿಟಿ ವ್ಯಾನ್ ಸೇರಿದಂತೆ ಹಲವಾರು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ. 

Read more Photos on
click me!

Recommended Stories